ತೆಲಂಗಾಣ: ಯಾದಾದ್ರಿ ಭುವನಗಿರಿ ಜಿಲ್ಲೆ ಆಲೇರು ಮಂಡಲದ ಬಹದ್ದೂರ್ ಪೇಟೆಯ ಸುಜಾತ (42) ಹಲವರಿಗೆ ಅಂಗಾಂಗ ದಾನ ಮಾಡುವ ಮೂಲಕ ತನ್ನ ಬದುಕನ್ನು ಸಾರ್ಥಕವನ್ನಾಗಿಸಿಕೊಂಡಿದ್ದಾರೆ. ಮನೆಯಲ್ಲಿ ತನ್ನ ಮಕ್ಕಳಿಗೆ ಅನ್ನ ಬಡಿಸುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದು,ಬ್ರೈನ್ ಡೆಡ್ ಆಗಿದ್ದ ಸುಜಾತ ಅವರ ಹೃದಯ, ಯಕೃತ್ತು ಹಾಗೂ ಎರಡು ಕಿಡ್ನಿಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಕುಟುಂಬ ಸದಸ್ಯರಿಗೆ ಅನ್ನ ಬಡಿಸುವಾಗ ಸುಜಾತಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಆಲೇರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸುಜಾತಾಳನ್ನು ಪರೀಕ್ಷಿಸಿ ಉತ್ತಮ ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಚಿಕಿತ್ಸೆಗಾಗಿ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ದಿನಗಳ ನಂತರ ವೈದ್ಯರು ಆಕೆಯ ಬ್ರೈನ್ ಡೆಡ್ ಎಂದು ದೃಢಪಡಿಸಿದ್ದರು.
ಇದರೊಂದಿಗೆ ವೈದ್ಯರು, ಅಂಗಾಂಗ ದಾನದ ಜೀವದಾನ ಟ್ರಸ್ಟ್ ಬಗ್ಗೆ ಆಕೆಯ ಕುಟುಂಬ ಸದಸ್ಯರಿಗೆ ಬಗ್ಗೆ ತಿಳಿಸಿದ್ದಾರೆ. ಜೀವದಾನ ಟ್ರಸ್ಟ್ ಸಿಬ್ಬಂದಿ ಅಂಗಾಂಗ ದಾನದ ಬಗ್ಗೆ ತಿಳಿಸಿದಾಗ ಸುಜಾತಾ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆಕೆಯ ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು ಮತ್ತು ಶ್ವಾಸಕೋಶಗಳನ್ನು ತೆಗೆದು ಆರು ಜನರಿಗೆ ಕಸಿ ಮಾಡಲಾಗಿದೆ.
ಇದನ್ನೂ ಓದಿ: ಕೈಗಳಿಗೆ ಹಸಿರು ಬಳೆ ತೊಟ್ಟು, ವಧುವಿನಂತೆ ಸಿಂಗಾರಗೊಂಡು ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಮೃತ ಸುಜಾತಾ ಅಂಗಾಂಗ ದಾನದಿಂದ ಆರು ಜೀವಗಳನ್ನು ಉಳಿಸಿದ್ದಾರೆ. ನಂತರ ಅವರ ಸ್ವಗ್ರಾಮ ಬಹದ್ದೂರ್ ಪೇಟಾದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅಂಗಾಂಗ ದಾನಕ್ಕೆ ಸುಜಾತಾ ಅವರ ಪತಿ ದಶರಥ ಅವರ ಪುತ್ರ ಸುನೀಲ್ ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಸುಜಾತಾ ದೈಹಿಕವಾಗಿ ಇಲ್ಲದಿದ್ದರೂ ಅಂಗಾಂಗಗಳ ಹಂಚಿಕೆಯೊಂದಿಗೆ ಇತರ ಆರು ಜನರಲ್ಲಿ ಬದುಕುತ್ತಿದ್ದಾರೆ ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ