ಕೊರೊನಾ ಸೋಂಕಿನಿಂದ ಸಾಯುತ್ತಿದ್ದ ತನ್ನ ತಾಯಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮಗ; ಮನಕಲಕುವ ಕಥೆ ಹಂಚಿಕೊಂಡ ವೈದ್ಯರು

|

Updated on: May 13, 2021 | 5:05 PM

ಕೊವಿಡ್​ ಸೋಂಕಿನ ತೀವ್ರತೆಯಿಂದ ಸಾಯುತ್ತಿರುವ ರೋಗಿಯ ಮಗ ತನ್ನ ಅಮ್ಮನೊಂದಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮನಕಲಕುವ ಘಟನೆಯೊಂದು ನಡೆದಿದೆ.

ಕೊರೊನಾ ಸೋಂಕಿನಿಂದ ಸಾಯುತ್ತಿದ್ದ ತನ್ನ ತಾಯಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮಗ; ಮನಕಲಕುವ ಕಥೆ ಹಂಚಿಕೊಂಡ ವೈದ್ಯರು
ಸಾಂದರ್ಭಿಕ ಚಿತ್ರ
Follow us on

ಕೊವಿಡ್​ ಸೋಂಕಿನ ತೀವ್ರತೆಯಿಂದ ಸಾಯುತ್ತಿರುವ ರೋಗಿಯ ಮಗ ತನ್ನ ಅಮ್ಮನೊಂದಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮನಕಲಕುವ ಘಟನೆಯೊಂದು ನಡೆದಿದೆ. ಈ ಕುರಿತಂತೆ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಂತೆಯೇ  ವಿಷಯ ತಿಳಿದ ಅನೇಕರು ಮನನೊಂದು ಕಣ್ಣೀರು ಹಾಕಿದ್ದಾರೆ.

ತಾಯಿ ಮಗನ ಕೊನೆಯ ಭೇಟಿ ಎಂದು ಇಬ್ಬರಿಗೂ ತಿಳಿದಿತ್ತು. ಅಮ್ಮನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಗನ ಮನ ನೊಂದಿತ್ತು. ಅಮ್ಮನನ್ನು ಇನ್ನು ನೋಡಲು ಸಾಧ್ಯವಿಲ್ಲ ಎಂಬ ಕೊರಗು ಕಣ್ಣಿನ ನೀರಿನ ಮೂಲಕ ಹರಿ ಬರುತ್ತಿತ್ತು. ವಿಧಿಯಾಟಕ್ಕೆ ಹೊಣೆ ಯಾರು ಎಂಬಂತೆ ಕಷ್ಟವಾದರೂ ಸತ್ಯವನ್ನು ಅರಗಿಸಿಕೊಳ್ಳಲೇ ಬೇಕಿತ್ತು. ಕೊನೇ ಕ್ಷಣದಲ್ಲಿ ಅಮ್ಮನಿಗಾಗಿ ಹಾಡೊಂದು ಹೇಳಿ ವಿದಾಯ ಹೇಳಿದ ಘಟನೆಯೊಂದು ಎಲ್ಲರ ಮನಕಲಕುಂತಿದೆ.

ಮಗ ಸೋಹಮ್​ ಚಟರ್ಜಿ ಅವರು ವೈದ್ಯರಾದ ದೀಪ್ಶಿಕಾ ಘೋಷ್​ ಅವರ ಬಳಿ ಅಮ್ಮನೊಂದಿಗೆ ಮಾತನಾಡಲು ನಿಮ್ಮ ಕೆಲ ಸಮಯವನ್ನು ಕೊಡಿ ಎಂದು ಕೇಳಿ ವಿಡಿಯೋ ಕಾಲ್​ ಮಾಡುತ್ತಾರೆ. ಇನ್ನೂ ಕೆಲ ಸಮಯ ಅಮ್ಮನೊಂದಿಗೆ ಕಳೆಯುವುದಾಗಿ ಹೇಳಿ, ಅಮ್ಮನಿಗಾಗಿ ಹಾಡೊಂದನ್ನು ಹಾಡುತ್ತಾರೆ. ಜನಪ್ರಿಯ ಹಿಂದಿ ಹಾಡಾದ ‘ತೇರಾ ಮುಜ್ಸೆ ಹೈ ಪೆಹ್ಲೆ ಕಾ ನತಾ ಕೊಯಿ’ಎಂಬ ಹಾಡನ್ನು ತನ್ನ ತಾಯಿಗಾಗಿ ಹಾಡುತ್ತಾರೆ. ಈ ಹಾಡು ಸಿನಿಮಾದಲ್ಲಿ ಹಲವು ವರ್ಷಗಳ ಬಳಿಕ ತಾಯಿ ಮತ್ತು ಮಗ ಒಂದಾಗುವ ಕ್ಷಣದಲ್ಲಿ ಹಾಡುವ ಚಿತ್ರಗೀತೆಯಾಗಿದೆ’  ಈ ಕುರಿತಾಗಿ ವೈದ್ಯರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇಂದು ಆಸ್ಪತ್ರೆಯಲ್ಲಿ ನನ್ನ ಶಿಫ್ಟ್​ನ ಕೊನೆಯಲ್ಲಿ ನಡೆದ ಘಟನೆ. ವಿಡಿಯೋ ಕರೆಯ ಕೊನೆಯ ಭೇಟಿಯಲ್ಲಿ ತಾಯಿ ಮತ್ತು ಮಗನ ಸಂಭಾಷಣೆಯನ್ನು ಕೇಳುತ್ತಾ ಅಲ್ಲಿಯೇ ನಿಂತಿದ್ದೆ. ಸೋಹಮ್​ ಚಟರ್ಜಿ ಅವರು ತನ್ನ ತಾಯಿಗೆ ಹಾಡುತ್ತಿರುವುದನ್ನು ನೋಡುತ್ತಿದ್ದಂತೆಯೇ, ದಾದಿಯರು ಸಹ ಬಂದು ಮೌನವಾಗಿ ನಿಂತಿದ್ದರು. ಎಲ್ಲರ ಕಣ್ಣುಗಳು ತೇವವಾಗಿತ್ತು. ಮನಕಲಕುವ ದೃಶ್ಯಕ್ಕೆ ಎದೆ ಭಾರವಾಗಿತ್ತು ಎಂದು ವೈದ್ಯರು ಬರೆದುಕೊಂಡಿದ್ದಾರೆ.

ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರಿಂದ ಅಗಾಧ ಪ್ರತಿಕ್ರಿಯೆಗಳು ಬಂದಿವೆ. ಇಂತಹ ಮನಮಿಡಿಯುವ ಕಥೆ ಕೇಳಿದ ನೆಟ್ಟಿಗರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಮಂಡ್ಯ: ಸೋಂಕಿತ ತಾಯಿ ಸಾವಿನ ಸುದ್ದಿ ತಿಳಿದು ಕೊನೆಯುಸಿರೆಳೆದ ಮಗ