ಮಂಡ್ಯ: ಸೋಂಕಿತ ತಾಯಿ ಸಾವಿನ ಸುದ್ದಿ ತಿಳಿದು ಕೊನೆಯುಸಿರೆಳೆದ ಮಗ

ಕೀಲಾರ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಾತ ಚಿಕಿತ್ಸೆ ಫಲಿಸದೆ ನಿನ್ನೆ (ಮೇ 11) ಮೃತಪಟ್ಟಿದ್ದಾರೆ. ತಾಯಿಗೆ ಕೊವಿಡ್ ಬಂದ ದಿನದಿಂದ ಮಗ ರಮೇಶ್ (38) ಮಾನಸಿಕ ಆಘಾತಕೊಳಗಾಗಿದ್ದರು. ತಾಯಿಯ ಸಾವಿನ ಸುದ್ದಿ ಕೇಳಿದ ಮಗನಿಗೆ ಮನೆಯಲ್ಲಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ: ಸೋಂಕಿತ ತಾಯಿ ಸಾವಿನ ಸುದ್ದಿ ತಿಳಿದು ಕೊನೆಯುಸಿರೆಳೆದ ಮಗ
ಹೃದಯಘಾತದಿಂದ ಸಾವನ್ನಪ್ಪಿದ ಮಗ ರಮೇಶ್
Follow us
sandhya thejappa
|

Updated on:May 12, 2021 | 9:40 AM

ಮಂಡ್ಯ: ಕೊರೊನಾ ಜನರ ಬದುಕನ್ನೆ ಕಿತ್ತುಕೊಳ್ಳುತ್ತಿದೆ. ಅದೆಷ್ಟೋ ಕುಟುಂಬಕ್ಕೆ ಆಧಾರವಾಗಿದ್ದ ಜೀವಗಳನ್ನು ಕೊರೊನಾ ಸೋಂಕು ಬಲಿ ಪಡೆಯುತ್ತಿದೆ. ತಂದೆ-ತಾಯಿ ಅಗಲಿಕೆಯನ್ನು ಸಹಿಸದ ಮಕ್ಕಳು ಕೂಡಾ ಹೃದಯಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇಂತಹದೊಂದು ಘಟನೆ ಸದ್ಯ ಮಂಡ್ಯದ ಸುಭಾಷ್ ನಗರದಲ್ಲಿ ನಡೆದಿದೆ. ಕೊರೊನಾ ಸೋಂಕಿತ ತಾಯಿ ಸಾವಿನ ಸುದ್ದಿ ತಿಳಿದು ಮಗ ಸಾವನ್ನಪ್ಪಿದ್ದಾರೆ. 60 ವರ್ಷದ ತಾಯಿ ಸುಜಾತ ಕೊವಿಡ್ ಸೋಂಕಿನಿಂದ ಬಳಲುತ್ತಿದ್ದರು. ಕೀಲಾರ ಸಮುದಾಯ ಕೇಂದ್ರಕ್ಕೆ ದಾಖಲಾಗಿದ್ದರು.

ಕೀಲಾರ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಾತ ಚಿಕಿತ್ಸೆ ಫಲಿಸದೆ ನಿನ್ನೆ (ಮೇ 11) ಮೃತಪಟ್ಟಿದ್ದಾರೆ. ತಾಯಿಗೆ ಕೊವಿಡ್ ಬಂದ ದಿನದಿಂದ ಮಗ ರಮೇಶ್ (38) ಮಾನಸಿಕ ಆಘಾತಕೊಳಗಾಗಿದ್ದರು. ತಾಯಿಯ ಸಾವಿನ ಸುದ್ದಿ ಕೇಳಿದ ಮಗನಿಗೆ ಮನೆಯಲ್ಲಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಒಂದೇ ದಿನ ಒಂದೇ ಕುಟುಂಬದ ಇಬ್ಬರ ಸಾವಿನಿಂದ ಕುಟುಂಬ ಕಂಗಾಲಾಗಿದೆ.

ಸಾವಿನಲ್ಲೂ ಒಂದಾದ ಸಹೋದರರು ರಾಯಚೂರು: ಕೊರೊನಾ ಸೋಂಕಿಗೆ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಾನ್ವಿ ತಾಲೂಕಿನ ಮುರಾನಪುರ ಗ್ರಾಮದ ಸಹೋದರರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹೇಶ್ವರಸಿಂಗ್ (46), ಸುರೇಶ್ವರಸಿಂಗ್ (43) ಮೃತ ಸಹೋದರರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಸಹೋದರರು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇರೊದ್ರಿಂದಲೇ ಸಹೋದರರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ

Health Workers: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಇಡೀ ಊರಿಗೆ ಬಂದದ್ದು ತನಗೆ ಬರಲಿಕ್ಕಿಲ್ಲ ಎಂಬ ಭಾವನೆ ಇನ್ನೂ ಹಲವರಲ್ಲಿದೆ

ಮೆಣಸಿನಕಾಯಿ ಖರೀದಿಸಲು 6 ಕಿಲೋಮೀಟರ್ ದೂರ ಬಂದಿದ್ದ ಮೈಸೂರು ವ್ಯಕ್ತಿಗೆ ಎಎಸ್ಐ ತರಾಟೆ

(son has died of a heart attack after learning of mother death at mandya)

Published On - 9:37 am, Wed, 12 May 21