AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ನೀರಿಗಾಗಿ ಹಾಹಾಕಾರ; ಗ್ರಾಮ ಪಂಚಾಯತಿ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರಿನ 340 ಮನೆಗಳಿಗೆ 5 ದಿನದಿಂದ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಯಂಗ್ ಇಂಡಿಯಾ ಸದಸ್ಯರು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಯಂಗ್ ಇಂಡಿಯಾ ಸದಸ್ಯರು ಟ್ಯಾಂಕರ್​ನಲ್ಲಿ ನೀರು ಪೂರೈಸುತ್ತಿದ್ದಾರೆ.

ಕೊಡಗಿನಲ್ಲಿ ನೀರಿಗಾಗಿ ಹಾಹಾಕಾರ; ಗ್ರಾಮ ಪಂಚಾಯತಿ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
ಪ್ರಾತಿನಿಧಿಕ ಚಿತ್ರ
sandhya thejappa
|

Updated on:May 12, 2021 | 11:42 AM

Share

ಮಡಿಕೇರಿ: ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಕೊಡಗಿನ ಜನ ನೀರಿಗಾಗಿ ಪರದಾಟಪಡುತ್ತಿದ್ದಾರೆ. ಕೊಡಗು ಪ್ರವಾಹ ಸಂತ್ರಸ್ತರು ಕುಡಿಯುವುದಕ್ಕೆ ಮತ್ತು ಅಡುಗೆ ಮಾಡಲೂ ನೀರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರಿನ 340 ಮನೆಗಳಿಗೆ 5 ದಿನದಿಂದ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಯಂಗ್ ಇಂಡಿಯಾ ಸದಸ್ಯರು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಯಂಗ್ ಇಂಡಿಯಾ ಸದಸ್ಯರು ಟ್ಯಾಂಕರ್​ನಲ್ಲಿ ನೀರು ಪೂರೈಸುತ್ತಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಸುಮಾರು 340 ಮನೆ ನಿರ್ಮಿಸಿಕೊಟ್ಟಿತ್ತು. ಆದರೆ 5 ದಿನಗಳಿಂದ ಈ 340 ಮನೆಗಳಿಗೆ ನೀರು ಬರುತ್ತಿಲ್ಲ. ಬೋರ್ ವೆಲ್ ಮೋಟಾರ್ ಕೆಟ್ಟು ನಿಂತಿರುವ ಕಾರಣ ಸ್ನಾನ, ಅಡುಗೆಗೂ ನೀರಿಲ್ಲದೆ ಸಂತಸ್ತರು ಪರದಾಟ ಪಡುತ್ತಿದ್ದಾರೆ. ಇದರಿಂದ ಯಂಗ್ ಇಂಡಿಯಾ ಸದಸ್ಯರು ನೀರನ್ನು ಪೂರೈಸುತ್ತಿದ್ದು, ಸಂತ್ರಸ್ತರು ನೀರಿಗಾಗಿ ಸಾಮಾಜಿಕ ಅಂತರ ಮರೆತಿದ್ದಾರೆ. 5 ದಿನಗಳಿಂದ ನೀರು ಪೂರೈಕೆ ಆಗುತ್ತಿಲ್ಲ ಎಂದು ಸಂತ್ರಸ್ತರು ಮಾದಾಪುರ ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೈಹಿಕ ಅಂತರ ಕಾಪಾಡದ ಜನ ನೆಲಮಂಗಲ: ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನೀರಿನ ಘಟಕಗಳ ಮುಂದೆ ದೈಹಿಕ ಅಂತರವಿಲ್ಲದೆ ಜನ ಸೇರಿದ್ದಾರೆ. ಕ್ಯಾಮರ ಕಂಡು ಸರದಿ ಸಾಲಿನಲ್ಲಿ ನಿಲ್ಲಲ್ಲು ಜನರು ಯತ್ನಸಿದ್ದು, ಕೊರೊನ ಲಾಕ್​ಡೌನ್ ಮಧ್ಯೆಯೂ ಅವಶ್ಯ ನೀರನ್ನು ತುಂಬಿಸಿಕೊಳ್ಳಲು ಬಂದಿದ್ದರು. ದೈಹಿಕ ಅಂತರ ಇಲ್ಲದೆ ಇರುವುದರಿಂದ ಕೊರೊನಾ ಹರಡುವ ಭೀತಿ ಎದುರಾಗಿದೆ.

ಇದನ್ನೂ ಓದಿ

ಇನ್ನೂ 3 ದಿನ ರಾಜ್ಯದಲ್ಲಿ ಕೊರೊನಾ ಲಸಿಕೆ ಸಿಗೋದು ಅನುಮಾನ; ಕೇಂದ್ರ ಸರ್ಕಾರ ಹೇಳಿದಷ್ಟೇ ಪೂರೈಕೆ ಸಾಧ್ಯ ಎನ್ನುತ್ತಿವೆ ಸಂಸ್ಥೆಗಳು

ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತ ಬಾರ್ ಮ್ಯಾನೇಜರ್ ನರಳಾಡಿ ಸಾವು…

(Kodagu Flood victims are struggling for water and are outraged against gram panchayat)

Published On - 10:29 am, Wed, 12 May 21

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್