AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಮಯದಲ್ಲಿ ಪ್ರಾಣಿಗಳಿಗೆ ಉಣಬಡಿಸಲು ಮುಂದಾದ ಜೈನ್ ಅನಿಮಲ್ ಕೇರ್ ಹಾಗೂ ಎಸ್​ಡಿವೈಜೆಎಮ್ ಸಂಸ್ಥೆ

ಜೈನ್ ಅನಿಮಲ್ ಕೇರ್ ಹಾಗೂ ಎಸ್​ಡಿವೈಜೆಎಮ್ ಸಂಸ್ಥೆ ನಗರದಾದ್ಯಂತ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿವೆ. ಈ ಸಂಸ್ಥೆಗಳು ನಾಯಿ, ಬೆಕ್ಕು, ಹಸು, ಗಿಣಿ, ಕೋತಿ, ಕಾಗೆ, ಪಾರಿವಾಳಗಳಿಗೆ ಕೆಜಿ ಗಟ್ಟಲೆ ಆಹಾರ ಪೂರೈಸುತ್ತಿವೆ. 20 ಕ್ಕೂ ಹೆಚ್ಚು ಜನರು ನಗರದಾದ್ಯಂತ ಮೂಕ ಪ್ರಾಣಿಗಳಿಗೆ ಆಹಾರ ನೀಡುತ್ತಿವೆ.

ಲಾಕ್​ಡೌನ್​ ಸಮಯದಲ್ಲಿ ಪ್ರಾಣಿಗಳಿಗೆ ಉಣಬಡಿಸಲು ಮುಂದಾದ ಜೈನ್ ಅನಿಮಲ್ ಕೇರ್ ಹಾಗೂ ಎಸ್​ಡಿವೈಜೆಎಮ್ ಸಂಸ್ಥೆ
ಪ್ರಾಣಿಗಳಿಗೆ ಆಹಾರ ಪೂರೈಕೆ
sandhya thejappa
|

Updated on: May 12, 2021 | 11:22 AM

Share

ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಪ್ರಾಣಿ ಪಕ್ಷಿಗಳು ಆಹಾರವಿಲ್ಲದೆ ಕಂಗಾಲಾಗಿವೆ. ಪ್ರವಾಸಿ ತಾಣಗಳಲ್ಲಿರುವ ಪ್ರಾಣಿ- ಪಕ್ಷಿಗಳಿಗೆ ಪ್ರವಾಸಿಗರು ಆಹಾರ, ನೀರನ್ನು ಹೊತ್ತೊಯ್ಯುತ್ತಿದ್ದರು. ಆದರೆ ಲಾಕ್​ಡೌನ್​ನಿಂದ ಪ್ರವಾಸ ಸ್ಥಳಕ್ಕೆ ಪ್ರವೇಶ ನಿರ್ಬಂಧವಾಗಿರುವ ಕಾರಣ ಪ್ರಾಣಿ-ಪಕ್ಷಿಗಳಿಗೆ ಆಹಾರ ಸಿಗುತ್ತಿಲ್ಲ. ಈ ನಡುವೆ ಎರಡು ಸಂಸ್ಥೆಗಳು ಪ್ರಾಣಿಗಳಿಗೆ ಉಣಬಡಿಸಲು ಇದೀಗ ಮುಂದಾಗಿವೆ.

ಜೈನ್ ಅನಿಮಲ್ ಕೇರ್ ಹಾಗೂ ಎಸ್​ಡಿವೈಜೆಎಮ್ ಸಂಸ್ಥೆ ನಗರದಾದ್ಯಂತ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿವೆ. ಈ ಸಂಸ್ಥೆಗಳು ನಾಯಿ, ಬೆಕ್ಕು, ಹಸು, ಗಿಣಿ, ಕೋತಿ, ಕಾಗೆ, ಪಾರಿವಾಳಗಳಿಗೆ ಕೆಜಿ ಗಟ್ಟಲೆ ಆಹಾರ ಪೂರೈಸುತ್ತಿವೆ. 20 ಕ್ಕೂ ಹೆಚ್ಚು ಜನರು ನಗರದಾದ್ಯಂತ ಮೂಕ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದು, ಪ್ರಾಣಿಗಳಿಗೆ ಆಹಾರ ಪೂರೈಸಲು ಪೊಲೀಸ್ ಇಲಾಖೆ ಕೂಡಾ ಸಾಥ್ ನೀಡಿದೆ.

ಲಾಕ್​ಡೌನ್​ನಿಂದ ಜನರಿಗೆ ಆಹಾರ ಸಿಗುವುದು ಕಷ್ಟ. ಇಂತಹ ಸಮಯದಲ್ಲಿ ಈ ಎರಡು ಸಂಸ್ಥೆಗಳು ಪ್ರಾಣಿ ಪಕ್ಷಿಗಳಿಗೆ ಆಹಾರ ಪೂರೈಸುತ್ತಿರುವ ಮೂಲಕ ಪುಣ್ಯದ ಕೆಲಸಕ್ಕೆ ಮುಂದಾಗಿವೆ. ಸಂಸ್ಥೆಗಳು ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲಿ ಆಹಾರ ಪೂರೈಕೆ ಮಾಡುತ್ತಿವೆ. ನಾಯಿ, ಬೆಕ್ಕು, ಕೋತಿಗಳಿಗೆ 350 ಲೀಟರ್ ಹಾಲು, ಹಸುಗಳಿಗೆ 100 ಕೆಜಿ ಗೋಧಿ ಚಪಾತಿ ಹಾಗು ಇಂಡಿ, ಪಾರಿವಾಳಕ್ಕೆ 50ಕೆಜಿ ಗೋಧಿ, ಸಜ್ಜೆ, ಕಡ್ಲೇ, ಜೋಳ ಮತ್ತು ಕಾಗೆ ಹಾಗೂ ಗಿಣಿಗೆ 15 ಕೆಜಿ ಕಾರಚೋಚೋ, ಬಟಾಣಿಯನ್ನು ಪೂರೈಕೆ ಮಾಡುತ್ತಿವೆ. ಪ್ರತಿದಿನ ಪ್ರಾಣಿ-ಪಕ್ಷಿಗಳಿಗೆ 500 ಕೆಜಿಗೂ ಹೆಚ್ಚು ಆಹಾರವನ್ನು ಸಂಸ್ಥೆಗಳು ನೀಡುತ್ತಿವೆ.

ಹಸಿದ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಲಾಗುತ್ತಿದೆ

ಹಸಿದವರಿಗೆ ತಿಂಡಿ ನೀಡಿದ ಪೊಲೀಸರು ಚಾಮಾರಾಜಪೇಟೆ ಸುತ್ತ ಮುತ್ತ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವವರಿಗೆ ಚಾಮಾರಾಜಪೇಟೆ ಪೊಲೀಸರು ತಿಂಡಿ ನೀಡಿದ್ದಾರೆ. ಚಾಮಾರಾಜಪೇಟೆ ಠಾಣೆಯಿಂದ ಸಿಸಿಬಿ ಕಚೇರಿ ಬಲಕಿವರೆಗೆ ರಸ್ತೆಬದಿ ಇರುವವರಿಗೆ ತಿಂಡಿಯನ್ನು ಪೊಲೀಸರು ನೀಡಿದರು. ಲಾಕ್​ಡೌನ್​ ಅನ್ನು ಕಠಿಣವಾಗಿ ಜಾರಿಗೊಳಿಸುವ ಜೊತೆಗೆ ಪೊಲೀಸರು ಹಸಿದವರಿಗೆ ತಿಂಡಿ ನೀಡಿದ್ದಾರೆ.

ಇದನ್ನೂ ಓದಿ

ಇನ್ನೂ 3 ದಿನ ರಾಜ್ಯದಲ್ಲಿ ಕೊರೊನಾ ಲಸಿಕೆ ಸಿಗೋದು ಅನುಮಾನ; ಕೇಂದ್ರ ಸರ್ಕಾರ ಹೇಳಿದಷ್ಟೇ ಪೂರೈಕೆ ಸಾಧ್ಯ ಎನ್ನುತ್ತಿವೆ ಸಂಸ್ಥೆಗಳು

ಕೊಡಗಿನಲ್ಲಿ ನೀರಿಗಾಗಿ ಹಾಹಾಕಾರ; ಗ್ರಾಮ ಪಂಚಾಯತಿ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

(Jain Animal Care and SDYJM are feeding the animals during the lockdown at bengaluru)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ