ಕೈಗೆ ಗೋರಂಟಿ ಹಚ್ಚಿ ಮದುಮಗಳಾಗಿ ಹಸೆಮಣೆ ಏರಲು ಸಿದ್ಧವಾಗಿದ್ದ ಯುವತಿ ಕೊರೊನಾಗೆ ಬಲಿ
ಶ್ರುತಿ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ. ಸಾವಿರಾರು ಕನಸುಗಳನ್ನು ಹೊತ್ತು ಮದುವೆಗೆ ಸಿದ್ಧವಾಗಬೇಕಿದ್ದ ಯುವತಿ. ಆದರೆ ಈ ಮಹಾಮಾರಿ ಕೊರೊನಾ ಆಕೆಯನ್ನು ಬಲಿಪಡೆದುಕೊಂಡಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ವಿಜಯಪುರ: ಹಸೆಮಣೆ ಏರಬೇಕಿದ್ದ ಯುವತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಶ್ರುತಿ ಐಹೋಳಿ (24) ಎಂಬ ಯುವತಿ ಕೊರೊನಾ ಹಿನ್ನೆಲೆ ಮೃತಪಟ್ಟಿದ್ದಾರೆ.
ಶ್ರುತಿ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ. ಸಾವಿರಾರು ಕನಸುಗಳನ್ನು ಹೊತ್ತು ಮದುವೆಗೆ ಸಿದ್ಧವಾಗಬೇಕಿದ್ದ ಯುವತಿ. ಆದರೆ ಈ ಮಹಾಮಾರಿ ಕೊರೊನಾ ಆಕೆಯನ್ನು ಬಲಿಪಡೆದುಕೊಂಡಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೇ 23 ರಂದು ಶ್ರುತಿ ವಿವಾಹ ನಿಶ್ಚಯವಾಗಿತ್ತು. ಆದರೆ ಕೊರೊನಾ ಕಾರಣದಿಂದ ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಭಾವನ ಮನೆಯಲ್ಲಿ ಶ್ರುತಿ ಹಾಗೂ ಪೋಷಕರು ತಂಗ್ಗಿದ್ದರು.
ಶ್ರುತಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿರಲಿಲ್ಲ. ಕಫ ಕಟ್ಟಿದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಾಗಿ ಕೊನೆ ಕ್ಷಣದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ. ಶ್ರುತಿ ವಿವಾಹಕ್ಕಾಗಿ ಒಂದು ತಿಂಗಳ ಮುಂಚೆಯೇ ಒಡವೆ, ವಸ್ತ್ರ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದ ಪೋಷಕರು ಮಗಳನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.
ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲಿ ಪ್ರಾಣಿಗಳಿಗೆ ಉಣಬಡಿಸಲು ಮುಂದಾದ ಜೈನ್ ಅನಿಮಲ್ ಕೇರ್ ಹಾಗೂ ಎಸ್ಡಿವೈಜೆಎಮ್ ಸಂಸ್ಥೆ
Published On - 12:00 pm, Wed, 12 May 21