Corona Vaccine Shortage ಎರಡನೇ ಡೋಸ್ ಲಸಿಕೆ ಪಡೆಯಲು ಬಂದಿದ್ದ ಜನ ಆಕ್ರೋಶದಿಂದಲೇ ಮನೆಗೆ ವಾಪಸ್
ಲಸಿಕೆಯ ಅಭಾವ ಶುರುವಾಗಿದೆ. 2ನೇ ಡೋಸ್ ಲಸಿಕೆ ಪಡೆಯಲು ಬೆಳಗ್ಗೆ 4ರಿಂದ ಬೆಂಗಳೂರಿನ ಯಲಹಂಕದ ಲಸಿಕಾ ಕೇಂದ್ರದ ಬಳಿ ವೇಟಿಂಗ್ ಮಾಡ್ತಿದ್ದ ಜನ ಲಸಿಕೆ ಇಲ್ಲದಿರುವುದು ತಿಳಿಯುತ್ತಿದ್ದಂತೆ ಲಸಿಕಾ ಕೇಂದ್ರದ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಆನೇಕಲ್: ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮಟ್ಟ ಹಾಕಲು ವ್ಯಾಕ್ಸಿನೇಷನ್ ಡ್ರೈವ್ ಶುರುವಾಗಿದೆ. ಆದ್ರೆ, ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಆಗ್ತಿಲ್ಲ. ಹೀಗಾಗಿ 2ನೇ ಡೋಸ್ ಲಸಿಕೆ ಪಡೆಯಲು ಬಂದಿದ್ದ ಮಂದಿ ಬೆಂಗಳೂರಿನ ಯಲಹಂಕದ ಲಸಿಕಾ ಕೇಂದ್ರದ ಬಳಿ ಕಾದೂ ಕಾದು ಸುಸ್ತಾಗಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೊರೊನಾ ಅನ್ನೋ ಮಹಾಮಾರಿ ದೇಶದಲ್ಲಿ ಸೃಷ್ಟಿಸಿರೋ ಪರಿಸ್ಥಿತಿ ಬೇರಾವ ರಾಜ್ಯಗಳಿಗೂ ಬೇಡ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ರುದ್ರ ನರ್ತನಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗ್ತಿದೆ. ಇಂತಾ ಸಮಯದಲ್ಲಿ ರಾಜ್ಯದ ಎಲ್ಲರಿಗೂ ಲಸಿಕೆ ನೀಡಬೇಕು ಅಂತಾ ಸರ್ಕಾರ ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಮ್ಮತಿ ಸೂಚಿಸಿದೆ. ಆದ್ರೆ ರಾಜ್ಯದಲ್ಲಿ ಈ ಹಿಂದೆ ಮೊದಲ ಡೋಸ್ ಪಡೆದ 45 ವರ್ಷ ಮೇಲ್ಪಟ್ಟವರಿಗೆಯೇ ಲಸಿಕೆ ಸಿಗುತ್ತಿಲ್ಲ.
ಲಸಿಕೆಯ ಅಭಾವ ಶುರುವಾಗಿದೆ. 2ನೇ ಡೋಸ್ ಲಸಿಕೆ ಪಡೆಯಲು ಬೆಳಗ್ಗೆ 4ರಿಂದ ಬೆಂಗಳೂರಿನ ಯಲಹಂಕದ ಲಸಿಕಾ ಕೇಂದ್ರದ ಬಳಿ ವೇಟಿಂಗ್ ಮಾಡ್ತಿದ್ದ ಜನ ಲಸಿಕೆ ಇಲ್ಲದಿರುವುದು ತಿಳಿಯುತ್ತಿದ್ದಂತೆ ಲಸಿಕಾ ಕೇಂದ್ರದ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗ್ಗೆ 4 ಗಂಟೆಯಿಂದ ನಾವು ಲಸಿಕೆಗಾಗಿ ಕಾಯುತ್ತಿದ್ದೇವೆ. ನಿಮ್ಮ ಬಳಿ ಕೊವ್ಯಾಕ್ಸಿನ್ ಲಸಿಕೆ ಇಲ್ಲದಿದ್ದರೆ ಲಸಿಕಾ ಕೇಂದ್ರದ ಮುಂದೆ ಲಸಿಕೆ ಇಲ್ಲವೆಂದು ಚೀಟಿ ಅಂಟಿಸಿ. ಬೆಳಗ್ಗೆಯಿಂದ ಕಾದು ಈಗ ಬಂದು ಲಸಿಕೆ ಇಲ್ಲ ಅಂದ್ರೆ ಹೇಗೆಂದು ಸಾರ್ವಜನಿಕರು ಗರಂ ಆಗಿದ್ದಾರೆ.
ಇದನ್ನೂ ಓದಿ: ಲಸಿಕೆ ಕೊರತೆ ಎದುರಾಗಿದೆ ಏಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ? ಲಸಿಕೆ ಕೊರತೆಯ ಸಮಸ್ಯೆಗೆ ಪರಿಹಾರ ಏನು?