ಹೆಚ್ಆರ್ಬಿಆರ್ ಲೇಔಟ್‌ನಲ್ಲಿ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಸಿಸಿಬಿ
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸೂರ್ಯನನ್ನು ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್ಟೇಬಲ್ ಹನುಮೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ರೌಡಿಶೀಟರ್ ಸೂರ್ಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಬೆಂಗಳೂರು: ನಗರದ ಹೆಚ್ಆರ್ಬಿಆರ್ ಲೇಔಟ್‌ನಲ್ಲಿ ಸಿಸಿಬಿ ಪೊಲೀಸರು ರೌಡಿಶೀಟರ್ ಸೂರ್ಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸೂರ್ಯನನ್ನು ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್ಟೇಬಲ್ ಹನುಮೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ರೌಡಿಶೀಟರ್ ಸೂರ್ಯ ಕಾಲಿಗೆ ಗುಂಡು ಹಾರಿಸಿದ್ದಾರೆ.
2015 ರಲ್ಲಿ ಈತನ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. 2016 ರಲ್ಲಿಯೂ ಮತ್ತೊಂದು ಕೊಲೆ ಕೇಸ್ ಈತನ ವಿರುದ್ಧ ದಾಖಲಾಗಿತ್ತು. ಕೆ.ಜಿ ಹಳ್ಳಿ ಠಾಣೆಯಲ್ಲಿ 307 ಸೇರಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಗಾಯಾಳು ರೌಡಿಶೀಟರ್ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ವಿವರ ಇದೇ ತಿಂಗಳ 4 ರಂದು ಬಾಣಸವಾಡಿ ಠಾಣೆ ವ್ಯಾಪ್ತಿಯ ಆರ್.ಎಸ್.ಪಾಳ್ಯ ಜೆ.ವಿ.ಶೆಟ್ಟಿ ರಸ್ತೆಯಲ್ಲಿ ಒಂದು ಹಲ್ಲೆ ನಡೆದಿತ್ತು. ಸೂರ್ಯ ಹಾಗೂ 5 ಜನ ಸಹಚರರು ಭಾರತೀಯ ಸೇವಾ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥನಾಗಿದ್ದ ರಘುರಾಮ್ ಎಂಬುವವರ ಮೇಲೆ ಮಚ್ಚು ಲಾಂಗ್ನಿಂದ ಹಲ್ಲೆ ನಡೆಸಿದ್ದರು. ಈ ಕೇಸ್ ಸಂಬಂಧ ಆರೋಪಿಗಳ ಪತ್ತೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ತೆರಳಿತ್ತು. ಆರ್.ಎಸ್ ಪಾಳ್ಯದ ಪ್ರವೀಣ್ ಮನೆಯೊಂದರಲ್ಲಿ ಆರೋಪಿಗಳು ಇರುವ ಮಾಹಿತಿ ಪಡೆದ ಸಿಸಿಬಿ ತಂಡ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಗಿರೀಶ್( 28), ಕಿರಣ್ (19), ಅಜಿತ್ (23), ಪ್ರವೀಣ್ ಕುಮಾರ್ ( 28), ರಾಹುಲ್ (19), ಬಂಧಿತ ಆರೋಪಿಗಳು. ಆದರೆ ಪ್ರಮುಖ ಆರೋಪಿ ಸೂರ್ಯ ಅಲಿಯಾಸ್ ಚಟ್ಟಿ ಎಸ್ಕೇಪ್ ಆಗಿದ್ದ. ಹೆಚ್.ಆರ್.ಬಿ.ಆರ್ ಲೇಔಟ್ 2 ನೇ ಕ್ರಾಸ್ ನಲ್ಲಿರೋದು ಪತ್ತೆಯಾಗಿತ್ತು. ಈ ವೇಳೆ ಆರೋಪಿಯನ್ನು ಸಿಸಿಬಿ ಪೊಲೀಸರು ಸುತ್ತುವರೆದು ಹಿಡಿಯಲು ಮುಂದಾದ ವೇಳೆ ಆರೋಪಿ ಚಾಕುವಿನಿಂದ ಸಿಸಿಬಿ ಹೆಡ್ ಕಾನ್ಸ್ಟೇಬಲ್ ಹನುಮೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ತಕ್ಷಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಎಸಿಪಿ ಪರಮೇಶ್ವರ್ ಗುಂಡು ಹೊಡೆದಿದ್ದಾರೆ. ರಾತ್ರಿ ಸುಮಾರು 12.40 ರ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಶರಣಾಗಲು ಒಪ್ಪದ ಉಗ್ರರಿಗೆ ಭದ್ರತಾ ಪಡೆಯ ಗುಂಡೇಟು; ಮೂವರು ಭಯೋತ್ಪಾದಕರು ಸಾವು