Viral Video: ಕುಸಿದು ಬಿದ್ದ ಕ್ಯಾಲಿಫೋರ್ನಿಯಾದ ಮಾಲಿಬು ಬೀಚ್ ಹೌಸ್ ಬಾಲ್ಕನಿ; ಆತಂಕ ಹುಟ್ಟಿಸುವ ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಬಾಲ್ಕನಿ ಕುಸಿದು ಬಿದ್ದು 15 ಜನರೂ ನೀರಿಗೆ ಬಿದ್ದ ಭಯಾನಕ ದೃಶ್ಯ ಸೆರೆಯಾಗಿದೆ. ನಿಜಕ್ಕೂ ಆತಂಕ ಹುಟ್ಟಿಸುವ ವಿಡಿಯೋ ನೋಡಿದ ನೆಟ್ಟಿಗರು ಭಯಗೊಂಡಿದ್ದಾರೆ.
ಕಳೆದ ಬುಧವಾರ ಕ್ಯಾಲಿಫೋರ್ನಿಯಾದ ಮಾಲಿಬು ಬೀಚ್ ಹೌಸ್ ಬಾಲ್ಕನಿಯಲ್ಲಿ ಹುಟ್ಟುಹಬ್ಬದ ಸಂಭ್ರಮ ನಡೆಯುತ್ತಿತ್ತು. ಒಟ್ಟು 15 ಜನರು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಇದ್ದಕ್ಕಿದ್ದಂತೆ ಬಾಲ್ಕನಿ ಕುಸಿದು ಬಿದ್ದು 15 ಜನರೂ ನೀರಿಗೆ ಬಿದ್ದ ಭಯಾನಕ ಘಟನೆ ನಡೆದಿದೆ. ನಿಜಕ್ಕೂ ಆತಂಕ ಹುಟ್ಟಿಸುವ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಕಾರ, ಬಾಲ್ಕನಿಯಲ್ಲಿ ಸುಮಾರು 15 ಜನರಿದ್ದರು. ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಎಲ್ಲರೂ ಖುಷಿಯಿಂದ ಆಚರಿಸುತ್ತಿದ್ದರು. ನೀರಿನ ಅಳದಿಂದ 15 ಅಡಿ ಮೇಲೆ ಮನೆ ಇತ್ತು. ಈ ವೇಳೆ ಇದ್ದಕ್ಕಿದ್ದಂತೆ ಮನೆಯ ಬಾಲ್ಕನಿ ಕುಸಿದು ಬಿದ್ದಿದೆ. ಕುಸಿತದ ರಭಸಕ್ಕೆ ಜನರೆಲ್ಲಾ ನೀರಿನ ಆಳದಲ್ಲಿದ್ದ ಬಂಡೆಯವರೆಗೆ ತಲುಪಿದ್ದಾರೆ.
Shocking video of the moments a balcony collapses in #Malibu injuring several people. #CBSLA https://t.co/6lEnD4DxkW pic.twitter.com/1dhVsPWhi9
— Mike Rogers (@MikeRogersTV) May 9, 2021
ಘಟನೆ ನಡೆದ ಬಳಿಕ ನಾಲ್ಕು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಕೂಡಾ ಸಾವಿಗೀಡಾಗಲಿಲ್ಲ.
ಬಾಲ್ಕನಿ ಬಿರುಕು ಬಿಡುವುದನ್ನು ನಾವು ಕೇಳಿದ್ದೇವೆ. ಇಲ್ಲಿ ನನ್ನೆದುರಿಗೆ ನನ್ನ ಸ್ನೇಹಿತರು ಮತ್ತು ನನ್ನ ಗೆಳತಿ 15 ಅಡಿ ಆಳಕ್ಕೆ ಹೋಗಿ ಬಿದ್ದಿದ್ದಾರೆ. ಅಕ್ಷರಶಃ ಕಣ್ಣ ಮುಂದೆಯೇ ಈ ಘಟನೆ ನಡೆಯಿತು. ಘಟನೆ ತುಂಬಾ ಭೀಕರವಾಗಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲ್ಕನಿಯಲ್ಲಿ ಜನ ಹೆಚ್ಚಿದ್ದರು. ಇವರ ತೂಕವನ್ನು ತಡೆಯಲಾರದೆ ಬಾಲ್ಕನಿ ಕುಸಿದಿದೆಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸಮಯದಲ್ಲಿಯೂ ಪಾರ್ಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಏಕೆ? ಎಂಬ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.
ಇದನ್ನೂ ಓದಿ: ಸ್ವಲ್ಪ ಆದ್ರೂ ನಾಚಿಕೆ ಇರಲಿ: ಕೊರೊನಾ ಸಮಯದಲ್ಲಿ ಬೀಚ್ಗೆ ಹೋಗಿ ಬಿಕಿನಿ ಹಾಕುವವರಿಗೆ ಸ್ಟಾರ್ ನಟನ ಟಾಂಗ್
Published On - 11:52 am, Thu, 13 May 21