
ವಿಯೆಟ್ನಾಂನ ರೈತರೊಬ್ಬರು (Vietnamese farmer) 62 ವರ್ಷದಲ್ಲಿ ಒಮ್ಮೆಯೂ ಕೂಡ ನಿದ್ರೆ ಮಾಡಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರ ವಿಜ್ಞಾನ ಲೋಕಕ್ಕೂ ದೊಡ್ಡ ಸವಾಲಾಗಿದೆ. ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ಶಾಂತ ಹಳ್ಳಿಯಲ್ಲಿ 81 ವರ್ಷದ ರೈತ ಥಾಯ್ ಎನ್‌ಗೋಕ್ ಎಂಬುವವರು ಒಂದು ದಿನವೂ ಕೂಡ ನಿದ್ದೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. 1962 ರಿಂದ ಒಂದು ಕ್ಷಣವೂ ನಿದ್ದೆ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಇದನ್ನು ನಂಬಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಬದುಕಲು ಹೇಗೆ ಸಾಧ್ಯ, ನಿದ್ರೆ ಮಾಡದಿದ್ದರೆ ಆರೋಗ್ಯದಲ್ಲೂ ಸಮಸ್ಯೆ ಬರುತ್ತದೆ. ದಿನದ ಚಟುವಟಿಕೆ ಕೂಡ ಸರಿಯಾಗಿ ಆಗುವುದಿಲ್ಲ. ಹಾಗೂ ಮೆದುಳಿಗೂ ಹಾನಿ ಉಂಟು ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಈ ವ್ಯಕ್ತಿ ಒಂದು ದಿನವೂ ನಿದ್ರೆ ಮಾಡದೆ ಹೇಗೆ ಬದುಕಲು ಸಾಧ್ಯ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ಈ ರೈತ, ವಿಜ್ಞಾನಿಗಳಿಗೆ ಬೆರಗುವವಂತೆ ಮಾಡಿದ್ದಾರೆ. 1962ರಲ್ಲಿ, ಅದು ವಿಯೆಟ್ನಾಂ ಯುದ್ಧದ ಸಮಯ, ಈ ವೇಳೆ ಇವರಿಗೆ ವಿಪರೀತ ಜ್ವರ ಬಂದಿದೆ. ಎದ್ದೇಳಲು ಸಾಧ್ಯವಾಗದಷ್ಟು ಜ್ವರ ಇತ್ತು. ಆ ಸಮಯದಲ್ಲಿ ಇವರಿಗೆ 20 ವರ್ಷ ವಯಸ್ಸು ಇರಬಹುದು. ಈ ಜ್ವರದಿಂದ ಚೇತರಿಸಿಕೊಂಡ ನಂತರ ಅವರಿಗೆ ಒಂದು ದಿನವೂ ನಿದ್ದೆ ಬಂದಿಲ್ಲ ಎಂದು ಹೇಳಿದ್ದಾರೆ. ನಿದ್ದೆ ಮಾಡದಿದ್ದರು ದಿನನಿತ್ಯವೂ ಚಟುವಟಿಕೆಯಿಂದ ಇರುತ್ತಾರೆ. ಪ್ರತಿದಿನ ತಮ್ಮ ಜಮೀನಿಗೆ ಹೋಗಿ ಕೆಲಸ ಮಾಡುತ್ತಾರೆ. ಎಲ್ಲ ರೀತಿ ವಿಚಾರಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈ ವ್ಯಕ್ತಿಗೆ ಆರು ಜನ ಪತ್ನಿಯರು, ಎಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿಯರು!
ಥಾಯ್ ಎನ್‌ಗೋಕ್ ಈ ಬಗ್ಗೆ ಹೇಳಿದ್ದೇನು?
ಆರು ದಶಕಗಳ ಹಿಂದೆ ನನಗೆ ತೀವ್ರ ಜ್ವರ ಬಂದಿತು. ಅಲ್ಲಿಂದ ನನಗೆ ನಿದ್ರಾಹೀನತೆ ಶುರುವಾಗಿದೆ. ನಿದ್ರೆ ಮಾಡಬೇಕು ಎಂದು ಹಲವು ಔಷಧಿಗಳನ್ನು ತೆಗೆದುಕೊಂಡೆ, ಮನೆಮದ್ದುಗಳನ್ನು ಪ್ರಯತ್ನಿಸಿದೆ. ಮದ್ಯ ಸೇವಿಸಿದೆ, ಆದರೆ ಯಾವುದೂ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅವರ ಮನೆಯವರು ಕೂಡ ಅವರು ಒಂದು ದಿನವೂ ನಿದ್ದೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ವೈದ್ಯರು ಕೂಡ ರೈತ ಥಾಯ್ ಎನ್‌ಗೋಕ್ ಅವರನ್ನು ಪರೀಕ್ಷೆ ಮಾಡಿದ್ದಾರೆ. ಅವರಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ. ರಕ್ತದೊತ್ತಡ, ಹೃದಯ ಮತ್ತು ಮೆದುಳು ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಇದೀಗ ಈ ವಿಚಿತ್ರ ಪ್ರಕರಣ ವೈದ್ಯರನ್ನು ಗೊಂದಲಕ್ಕೆ ಒಳಪಡಿಸಿದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಮಾನವರು ನಿದ್ರೆಯಿಲ್ಲದೆ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಏಕೆಂದರೆ ದೇಹವು ಸ್ಮರಣಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಅರಿವಿನ ಕಾರ್ಯಕ್ಕಾಗಿ ವಿಶ್ರಾಂತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ