ಈ ವ್ಯಕ್ತಿಗೆ ಆರು ಜನ ಪತ್ನಿಯರು, ಎಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿಯರು!
ಕೀನ್ಯಾದಲ್ಲಿ ವ್ಯಕ್ತಿಯೊಬ್ಬರು ಆರು ಮಹಿಳೆಯರನ್ನು ಮದುವೆಯಾಗಿದ್ದು, ಎಲ್ಲರೂ ಏಕಕಾಲದಲ್ಲಿ ಗರ್ಭಿಣಿಯಾಗಿದ್ದಾರೆ. ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಈ ವ್ಯಕ್ತಿ ತನ್ನನ್ನು ಈ ಆರು ಜನರ ಸೇವೆ ಮಾಡುವ 24X7 ನರ್ಸ್ ಎಂದು ಹೇಳಿಕೊಂಡಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬ ಆರು ಮಕ್ಕಳ ಆಗಮನಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ಕೀನ್ಯಾದಲ್ಲಿ (Kenya polygamy) ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬರು 6 ಮಹಿಳೆಯರನ್ನು ಮದುವೆಯಾಗಿದ್ದಾರೆ. ವಿಚಿತ್ರವೆಂದರೆ ಈ 6 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ. ಈ ವ್ಯಕ್ತಿ ಮುಂದಿನ ವರ್ಷ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೀಗೆ ಹೇಳಲಾಗಿದೆ. ಕೀನ್ಯಾದ ಈ ವ್ಯಕ್ತಿ 6 ಮಹಿಳೆಯರನ್ನು ಮದುವೆಯಾಗಿದ್ದಾರೆ. ಆದರೆ ಈ 6 ಜನ ಕೂಡ ಒಂದೇ ಸಮಯದಲ್ಲಿ ಗರ್ಭಿಣಿಯಾಗಿರುವುದು ವಿಶೇಷ. ಈ ವ್ಯಕ್ತಿಯ ಮೊದಲನೇ ಪತ್ನಿ ಏಳು ತಿಂಗಳ ಗರ್ಭಿಣಿ, ಎರಡನೇ ಹೆಂಡತಿ 6.5 ತಿಂಗಳ ಗರ್ಭಿಣಿ, ಮೂರನೇ ಪತ್ನಿ ಆರು ತಿಂಗಳ ಗರ್ಭಿಣಿ, ನಾಲ್ಕನೇ, ಐದನೇ, ಆರನೇ ಪತ್ನಿಯರು 6 ತಿಂಗಳ ಗರ್ಭಿಣಿಯರು. ಈ ವಿಡಿಯೋದಲ್ಲಿ ಆರು ಪತ್ನಿಯರ ಗಂಡ ಮಾತನಾಡಿದ್ದಾರೆ. ” ನಾನು ಆರು ಜನ ಮಹಿಳೆಯರನ್ನು ಮದುವೆಯಾಗಿದ್ದು, ಈಗ ನನ್ನ ಆರು ಪತ್ನಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರೆ. ಒಬ್ಬೊಬ್ಬರಿಗೆ ವಿಭಿನ್ನ ಆಸೆಗಳು ಇದೆ. ಒಬ್ಬರಿಗೆ ಮಾವಿನ ಹಣ್ಣು ತಿನ್ನಬೇಕು ಎಂಬ ಆಸೆ, ಇನ್ನೊಬ್ಬರಿಗೆ ಹುಳಿ ತಿನ್ನಬೇಕು ಎಂಬ ಆಸೆ, ನಾನೀಗ 24X7 ಅವರ ಸೇವೆ ಮಾಡುವ ನರ್ಸ್ ಆಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಾಪ್ ಪಾಯಿಂಟ್ ವಿಚಾರಕ್ಕಾಗಿ ಬೆಂಗಳೂರು ಆಟೋ ಚಾಲಕನನ್ನು ನಿಂದಿಸಿದ ದಂಪತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇನ್ನು ಈ ಕುಟುಂಬ ಬುಡಕಟ್ಟು ಸಮುದಾಯಕ್ಕೆ ಸೇರಿದೆ. ಯಾವುದೇ ಆಧುನಿಕ ತಂತ್ರಜ್ಞಾನಗಳು ಇಲ್ಲದೆ ಬದುಕುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ನೆಟ್ಟಿಗ ಇದೊಂದು ಖಾಸಗಿ ಹೆರಿಗೆ ಆಸ್ಪತ್ರೆಯಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಕುಟುಂಬ ತುಂಬಾ ಸಂತೋಷವಾಗಿದೆ. ಆರು ಮಕ್ಕಳ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




