
Viral Video : ನಿಂತಿರುವ ಕಾರಿನ ಬಾಗಿಲು ತೆರೆಯುವುದಕ್ಕೂ ದ್ವಿಚಕ್ರವಾಹನದಲ್ಲಿ ಮಹಿಳೆಯೊಬ್ಬಳು ಬರುವುದಕ್ಕೂ ಚಾಟಿಯಾಗಿ ಈ ಅಪಘಾತ ಸಂಭವಿಸಿದೆ. ಕಾರಿನ ಬಾಗಿಲಿಗೆ ಢಿಕ್ಕಿ ಹೊಡೆದಾಗ ಮಹಿಳೆ ರಸ್ತೆಗೆ ಬೀಳುತ್ತಾಳೆ. ಆಗ ಹಿಂದಿನಿಂದ ಬಂದ ಕಾರು ಆಕೆಯ ಮೇಲೆ ಹಾಯುತ್ತದೆ. ಆಕೆಯ ಪರಿಸ್ಥಿತಿ ಏನಾಯಿತು ಎನ್ನುವುದು ಈತನಕ ತಿಳಿದು ಬಂದಿಲ್ಲ. ಸೆಪ್ಟೆಂಬರ್ 24 ರಂದು ಬೆಂಗಳೂರಿನಲ್ಲಿ ಈ ಅಪಘಾತ ಸಂಭವಿಸಿದೆ. ಆದರೆ ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಟ್ವಿಟರ್ನಲ್ಲಿ ಹಂಚಿಕೊಂಡ ನಂತರ 48,500ರಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಸಂಚಾರಿ ಪೊಲೀಸರ ನಿರ್ಲಕ್ಷ್ಯ ಮತ್ತು ರಸ್ತೆಗುಂಡಿಗಳು ಅಪಘಾತಕ್ಕೆ ಕಾರಣ ಎಂದು ಬಹುಪಾಲು ನೆಟ್ಟಿಗರು ಆರೋಪಿಸಲಾರಂಭಿಸಿದ್ದಾರೆ.
ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‘ಸಾರ್ವಜನಿಕ ರಸ್ತೆಗಳಲ್ಲಿ ನಿಮ್ಮ ಕಾರಿನ ಬಾಗಿಲನ್ನು ತೆರೆಯುವ ಮೊದಲು ಪಕ್ಕದಲ್ಲಿರುವ ಕನ್ನಡಿಯನ್ನು ಗಮನಿಸಿ. ಹಿಂದಿನಿಂದ ಯಾವುದಾದರೂ ವಾಹನ ಬರುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ಅಪಘಾತ ಸಂಭವಿಸದಂತೆ ಕಾಳಜಿ ವಹಿಸಿ’ ಎಂಬ ನೋಟ್ ಈ ವಿಡಿಯೋಗಿದೆ.
ಅಪಘಾತಕ್ಕೊಳಗಾದ ಮಹಿಳೆಯ ಪರಿಸ್ಥಿತಿ ಏನಾಗಿದೆ ಮತ್ತು ಕಾರ್ ಪಾರ್ಕ್ ಮಾಡಿದ ಮಾಲೀಕರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿದ್ದಾರೆಯೇ ಎನ್ನುವುದು ಈತನಕ ತಿಳಿದುಬಂದಿಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:25 pm, Tue, 11 October 22