‘ತಮ್ಮಾ, ಇವು ಸಿಂಹದ ಮರಿಗಳೋ, ಬೆಕ್ಕಿನಮರಿಗಳಲ್ಲ’ ಯುವಕನಿಗೆ ನೆಟ್ಟಿಗರ ಪಾಠ

Lion Cubs : ಕಂಡಕಂಡದರ ಜೊತೆಗೆಲ್ಲ ಫೋಟೋ, ವಿಡಿಯೋ ಹುಚ್ಚು. ವಿಡಿಯೋ ಮಾಡ್ತಿದಾರೆ, ಅಲ್ಲೀತನಕ ಸುಮ್ಮನೇ ಹೀಗೇ ಕುಳಿತಿರಬೇಕು ಎಂದು ಕಾಡುಪ್ರಾಣಿಗಳಿಗೆ ಅರ್ಥವಾಗುತ್ತದಾ?

‘ತಮ್ಮಾ, ಇವು ಸಿಂಹದ ಮರಿಗಳೋ, ಬೆಕ್ಕಿನಮರಿಗಳಲ್ಲ’ ಯುವಕನಿಗೆ ನೆಟ್ಟಿಗರ ಪಾಠ
ಸಿಂಹದಮರಿಗಳೊಂದಿಗೆ ಆಟವಾಡುತ್ತಿರುವ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 11, 2022 | 12:30 PM

Viral Video : ನಾಡಿನಲ್ಲೇ ಇದ್ದರೂ ಸ್ವಭಾವತಃ ಕಾಡುಪ್ರಾಣಿಗಳು ಅಪಾಯಕಾರಿಯೇ. ಹುಚ್ಚುಹವ್ಯಾಸವೋ, ಸಾಹಸವೋ ಗೊತ್ತಿಲ್ಲ, ಹೀಗೆ ಕಾಡುಪ್ರಾಣಿಗಳೊಂದಿಗೆ ವಿಡಿಯೋ, ಫೋಟೋ, ಸೆಲ್ಫಿ ಎಂದೆಲ್ಲ ಪ್ರಯತ್ನಿಸುವುದಂತೂ ಸರಿಯಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಆಟಿಕೆಯ ಸಿಂಹದಮರಿಗಳು ಇವಲ್ಲ, ಅವುಗಳೊಂದಿಗೆ ಹೀಗೆಲ್ಲ ಆಟವಾಡುವುದು ಮುದ್ದಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದಾರೆ ಈ ಯುವಕನಿಗೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Md Gulzar (@basit_ayan_3748)

@basit_ayan_2748 ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಕಾರಿನ ಬಾನೆಟ್​ ಮೇಲೆ ಕುಳಿತ ಈ ಸಿಂಹದ ಮರಿಗಳನ್ನು ಈತ ಮುದ್ದು ಮಾಡುತ್ತಿದ್ದಾನೆ. ಮುದ್ದುಮಾಡುತ್ತಿದ್ದಾನೆಂದರೆ ವಿಡಿಯೋ, ಫೋಟೋಗೆ ಪೋಸ್​ ಕೊಡುತ್ತಲೇ ಅಲ್ಲವೆ? ಅವರು ವಿಡಿಯೋ ತೆಗೆಯೋತನಕ ನಾವು ಹೀಗೆ ಸುಮ್ಮನೆ ಪೋಸ್​ ಕೊಡುತ್ತಿರಬೇಕು ಎನ್ನುವುದು ಸಿಂಹದಮರಿಗಳಿಗೆ ಅರ್ಥವಾಗಿ ಶಾಂತವಾಗಿ ಕುಳಿತುಕೊಳ್ಳುತ್ತವೆಯೇ? ಮೈಮೇಲೆ ಕೈಯ್ಯಾಡಿಸುತ್ತಲೇ ಇರುವ ಈ ಯುವಕನನ್ನು ಒಂದು ಸಿಂಹದ ಮರಿ ಸಹಿಸಿಕೊಂಡಿದೆ. ಇನ್ನೊಂದು ಮರಿ ಮಾತ್ರ ತಿರುಗಿ ನಿಂತಿದೆ. ಆಗ ನಿಲ್ಲಲ್ಲು ಧೈರ್ಯವಾದೀತೇ ಈ ಯುವಕನಿಗೆ? ಹೇಳಿಕೇಳಿ ಸಿಂಹ, ಆಕ್ರಮಣಕಾರಿಯೇ.

ಕಳೆದ ತಿಂಗಳಿನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಸುಮಾರು 2,74,000 ಜನ ಇಷ್ಟಪಟ್ಟಿದ್ದಾರೆ.  3 ಮಿಲಿಯನ್​ಗಿಂತಲೂ ಹೆಚ್ಚು  ಜನ ಇದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಇಲ್ಲಿರುವ ಯುವಕನಿಗೆ ಬುದ್ಧಿ ಹೇಳಿದ್ಧಾರೆ. ‘ಇದು ಮೂರ್ಖತನ’ ಎಂದು ಒಬ್ಬರು. ‘ಇಲ್ಲಿ ಥಂಬ್ಸ್​ ಡೌನ್​ ಎಮೋಟಿಕಾನ್​ ಎಲ್ಲಿದೆ’ ಎಂದು ಮತ್ತೊಬ್ಬರು, ‘ಇದು ಬಹಳ ಅಪಾಯಕಾರಿ, ಮತ್ತೊಮ್ಮೆ ಪ್ರಯತ್ನಿಸಬೇಡಿ’ ಎಂದು ಮಗದೊಬ್ಬರು, ‘ಇದು ಪ್ರಾಣಿಹಿಂಸೆ’ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ‘ಹುಲಿ, ಸಿಂಹ, ಚಿರತೆ, ಜಾಗ್ವಾರ್ ಎಲ್ಲವೂ ಕಾಡುಪ್ರಾಣಿಗಳೇ’ ಎಂದು ಮತ್ತೊಬ್ಬರು ತಿಳಿಹೇಳಿದ್ಧಾರೆ. ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನವ ಮಾಹಿತಿ ಇಲ್ಲ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Tue, 11 October 22

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ