ಉತ್ತರಪ್ರದೇಶದಲ್ಲಿ ಉರುಳಿ ಬಿದ್ದ ಇ-ರಿಕ್ಷಾ, ಸಹಾಯಕ್ಕೆ ಯಾರೂ ಬರಲಿಲ್ಲ
E-Rikshaw : ಪಕ್ಕದಲ್ಲಿ ಕಾರು ಹಾದು ಹೋಗುವಾಗ ಈ ರಿಕ್ಷಾ ರಸ್ತೆಗುಂಡಿಗೆ ಬೀಳುತ್ತದೆ. ಪ್ರಯಾಣಿಕರನ್ನು ಎಬ್ಬಿಸುವ ಸೌಜನ್ಯವನ್ನು ಅಲ್ಲಿದ್ದ ಯಾರೂ ತೋರುವುದಿಲ್ಲ. ಆದಿತ್ಯನಾಥರ ಗುಂಡಿಮುಕ್ತ ರಸ್ತೆ ಅಭಿಯಾನ ಎಲ್ಲಿಗೆ ಬಂದಿತು?
Viral Video : ನವೆಂಬರ್ 15ರೊಳಗೆ ಉತ್ತರಪ್ರದೇಶವನ್ನು ಗುಂಡಿಮುಕ್ತ ರಸ್ತೆಯನ್ನಾಗಿಸಲು ಬೃಹತ್ ಅಭಿಯಾನವನ್ನು ಆಯೋಜಿಸಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಆದೇಶ ನೀಡಿದ ಕೆಲ ದಿನಗಳಲ್ಲೇ ಇ-ರಿಕ್ಷಾವೊಂದು ಉರುಳಿಬಿದ್ದ ವಿಡಿಯೋ ವೈರಲ್ ಆಗುತ್ತಿದೆ. ಈ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ತ್ವರಿತವಾಗಿ ಕಾಳಜಿ ತೆಗೆದುಕೊಳ್ಳಬೇಕೆಂಬುದನ್ನುಈ ಘಟನೆ ನೆನಪು ಮಾಡಿಕೊಡುತ್ತಿದೆ. ಕೊಚ್ಚೆಗುಂಡಿಗಳ ಮಧ್ಯೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಈ ಆಟೋ ನಿಯಂತ್ರಣ ತಪ್ಪಿ ಆಟಿಕೆರಿಕ್ಷಾದಂತೆ ಉರುಳಿ ಬಿದ್ದಿದ್ದು ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ.
यूपी के सीतापुर में VIP काफिला गुजर रहा था.
ಇದನ್ನೂ ಓದಿउसे रास्ता देने के चक्कर में गरीब का रिक्शा पलट गया. इतनी गाड़ियां थीं, एक आदमी नहीं उतरा.
बाकी यूपी की गड्ढा मुक्त सड़क को देख लीजिये. pic.twitter.com/Hsw8tXmnLv
— Ranvijay Singh (@ranvijaylive) October 10, 2022
ಪಕ್ಕದಲ್ಲಿ ಕಾರು ಹಾದು ಹೋಗುವಾಗ ಈ ಅಪಘಾತ ಸಂಭವಿಸುತ್ತದೆ. ಇದನ್ನು ಗಮನಿಸಿದರೂ ಗಮನಿಸದಂತೆ ಕಾರು ಮುಂದೆ ಚಲಿಸುತ್ತದೆ. ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರೂ ಇದನ್ನು ನೋಡುತ್ತ ನಿಲ್ಲುತ್ತಾರೆ ವಿನಾ ಯಾರೊಬ್ಬರೂ ಪ್ರಯಾಣಿಕರ ಸಹಾಯಕ್ಕೆ ಬರುವುದಿಲ್ಲ.
ಉತ್ತಮ ಸಾರಿಗೆ ಸಂಪರ್ಕವನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಬೇಕು ಎನ್ನುವ ಹಿನ್ನೆಲೆಯಲ್ಲಿ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. ಆದರೆ ವಾಸ್ತವದಲ್ಲಿ ಏನಾಗುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ