Video: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ, ತಾಯಿ ಪ್ರೀತಿಯೇ ಹಾಗೆ ಪರಿಶುದ್ಧವಾದದ್ದು. ಆ ಪ್ರೀತಿಯೂ ಯಾವತ್ತೂ ಬದಲಾಗಲ್ಲ. ಈ ಪ್ರಾಣಿಗಳು ತಮ್ಮ ಕಂದಮ್ಮವನ್ನು ಮುದ್ದಿಸುವ ಕಾಳಜಿವಹಿಸುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಹಸುವೊಂದು ಕರುವನ್ನು ಕಂಡೊಡನೆ ಓಡೋಡಿ ಬಂದಿರುವ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು
ವೈರಲ್ ವಿಡಿಯೋ
Image Credit source: Instagram

Updated on: Feb 18, 2026 | 5:49 PM

ತಾಯಿ (mother) ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಕ್ಕಳು ಎದೆಯೆತ್ತರಕ್ಕೆ ಬೆಳೆದು ನಿಂತರೂ ಮಗುವಿನಂತೆ ಮುದ್ದಿಸುತ್ತಾಳೆ. ಮಾತು ಬಾರದ ಪ್ರಾಣಿಗಳು ಹಾಗೆಯೇ, ತನ್ನ ಕಂದಮ್ಮಗಳನ್ನು ತಪ್ಪು ಮಾಡಿದರೆ ತನ್ನದೇ ರೀತಿ ದಂಡಿಸಿ, ಪ್ರೀತಿಯಿಂದ ಮುದ್ದಿಸುತ್ತವೆ ಹಾಗೂ ಕಾಳಜಿ ವಹಿಸುತ್ತವೆ. ಇದೀಗ ತಾಯಿಯ ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಗಿದೆ ಈ ದೃಶ್ಯ. ಕರುವನ್ನು (calf) ಕಂಡೊಡನೆ ಹಸುವೊಂದು ಓಡೋಡಿ ಬಂದು ಪ್ರೀತಿಯಿಂದ ಮುದ್ದಿಸಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.

ಪವನ್ ಕುರುಬ (Pavan kuruba) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ತಾಯಿಯ ಪರಿಶುದ್ಧ ಪ್ರೀತಿಯನ್ನು ಸಾರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಸುವೊಂದು ಕರುವನ್ನು ಕಂಡೊಡನೆ ಓಡೋಡಿ ಬಂದಿದೆ. ಆ ಬಳಿಕ  ಹಸುವು ಕರುವನ್ನು ಮುದ್ದಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

 

ಇದನ್ನೂ ಓದಿ: ಮನೆ ಒಡತಿಯ ಮಾತು ಕೇಳಿ ಕರುವನ್ನು ಮುದ್ದಿಸಿದ ಹಸು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಬೆಲೆ ಕಟ್ಟಲಾಗದ ಪ್ರೀತಿ ಎಂದಿದ್ದಾರೆ. ಇನ್ನೊಬ್ಬರು, ಹೆತ್ತ ಕರುಳು ಎಂದರೆ, ಮತ್ತೊಬ್ಬರು ಬ್ಯೂಟಿಫುಲ್ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:52 am, Wed, 18 February 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us