Video: ನೋಡ ನೋಡ ಎಷ್ಟು ಚಂದ; ಖುಷಿ ಖುಷಿಯಾಗಿ ಚೆಂಡಾಟ ಆಡಿದ ಆನೆ

ಪುಟಾಣಿಗಳಿಗೆ ಚೆಂಡು ಕೊಟ್ಟರೆ ಖುಷಿಯಿಂದ ಆಡುವುದನ್ನು ನೀವು ನೋಡಿರಬಹುದು. ಈ ಆನೆಯು ಅಷ್ಟೇ ಉತ್ಸಾಹ ಹಾಗೂ ಖುಷಿಯಿಂದಲೇ ಚೆಂಡಾಟ ಆಡಿದೆ. ಚೆಂಡು ಕೈಗೆ ಸಿಗುತ್ತಿದ್ದಂತೆ ಈ ಆನೆ ಆಟ ಆಡುವುದರಲ್ಲೇ ಮಗ್ನವಾಗಿದೆ. ಈ ಮುದ್ದಾದ ಕ್ಲಿಪಿಂಗ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video: ನೋಡ ನೋಡ ಎಷ್ಟು ಚಂದ; ಖುಷಿ ಖುಷಿಯಾಗಿ ಚೆಂಡಾಟ ಆಡಿದ ಆನೆ
ಆನೆಯ ಚೆಂಡಾಟ
Image Credit source: Instagram

Updated on: Aug 19, 2025 | 4:21 PM

ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತದೆ,  ಮನಸ್ಸಿಗೆ ಹಿತವೆನಿಸುತ್ತದೆ. ಈ ಆನೆಗಳ ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಮನುಷ್ಯನ ಭಾವನೆಗೆ ಸ್ಪಂದಿಸುವ ಆನೆಯ ಚೆಂಡಾಟದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಚೆಂಡಿನೊಂದಿಗೆ ಆನೆಯೊಂದು ಉರುಳುತ್ತಿದ್ದು ಆಟ ಆಡುವುದರಲ್ಲೇ ಬ್ಯುಸಿಯಾಗಿದೆ. ಮನಸ್ಸಿಗೆ ಹತ್ತಿರವಾಗುವ ಈ ವಿಡಿಯೋ ನೋಡಿದ ಬಳಕೆದಾರ ಈ ಆನೆ ಆಟ ಆಡುವ ರೀತಿಗೆ ಕಳೆದೇ ಹೋಗಿದ್ದಾರೆ.

ಚೆಂಡಾಟ ಆಡೋದ್ರಲ್ಲಿ ಬ್ಯುಸಿ ಆನೆ
saveelephantfoundation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಚೊಂಪುವಿನ ಹೊಸ ನೆಚ್ಚಿನ ಆಟಿಕೆ – ಅವಳು ಅದನ್ನು ಎಷ್ಟು ಪ್ರೀತಿಸುತ್ತಾಳೆಂದು ಅವಳು ಆಡುವ ರೀತಿಯಿಂದ ನೀವು ಹೇಳಬಹುದು ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಆನೆಯೊಂದು ಚೆಂಡಾಟ ಆಡುವುದನ್ನು ನೀವು ನೋಡಬಹುದು. ಆನೆ ಹುಲ್ಲಿನ ಮೇಲೆ ಮಲಗಿ ಚೆಂಡಿನ ಸುತ್ತಲೂ ತನ್ನ ಸೊಂಡಿಲನ್ನು ಸುತ್ತಿಕೊಂಡು, ಉತ್ಸಾಹದಿಂದ ಅದನ್ನು ತಳ್ಳುತ್ತಿದೆ. ಆ ಬಳಿಕ ಎದ್ದು ನಿಂತು ಆನೆಯು ಚೆಂಡನ್ನು ತನ್ನ ಸೊಂಡಿಲಿನಿಂದ ಮುಂದಕ್ಕೆ ತಳ್ಳುವುದನ್ನು ನೋಡಬಹುದು. ಈ ವಿಡಿಯೋ ಶಕ್ತಿ ಹಾಗೂ ಮುಗ್ಧತೆ ಎರಡನ್ನೂ ಪ್ರದರ್ಶಿಸುವಂತಿದೆ.

ಇದನ್ನೂ ಓದಿ
ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಪುಟಾಣಿ ಆನೆ
ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ
ತಾಯಾನೆಯನ್ನೇ ಹಿಂಬಾಲಿಸುತ್ತಾ ರಸ್ತೆ ದಾಟಿದ ಮರಿಯಾನೆ
ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡನಲ್ಲಿ ಗಜಲಕ್ಷ್ಮೀ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಮರಿಯಾನೆ

ಈ ವಿಡಿಯೋ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ಎಷ್ಟು ಮುದ್ದಾಗಿವೆ ಈ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು ಚೊಂಪುವಿನ ಚೆಂಡಾಟ ನೋಡಲು ಖುಷಿಯಾಗುತ್ತದೆ. ಬಹಳ ಖುಷಿಯಿಂದ ಆಟ ಆಡುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಆನೆಗಳ ಆಟ ತುಂಟಾಟಗಳೇ ಮನಸ್ಸಿಗೆ ಹಿತವೆನಿಸುತ್ತದೆ ಎಂದು ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ಆನೆಯ ಚೆಂಡಾಟವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us