Video: ಮಾಲೀಕಳ ಜತೆಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ

ಮಕ್ಕಳು ಕಣ್ಣಾಮುಚ್ಚಾಲೆ ಆಟ ಆಡುವುದನ್ನು ನೀವು ನೋಡಿಯೇ ಇರುತ್ತೀರಿ. ಆದರೆ ಇಲ್ಲೊಂದು ಆನೆಯೂ ತನ್ನ ಮಾಲೀಕಳ ಜತೆಗೆ ಕಣ್ಣ ಮುಚ್ಚಾಲೆ ಆಟ ಆಡುತ್ತಾ ಖುಷಿ ಪಟ್ಟಿದೆ. ಅವಿತು ಕುಳಿತಿರುವ ಮಾಲೀಕಳನ್ನು ಹುಡುಕುವ ಆನೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಾಲೀಕಳ ಜತೆಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Nov 25, 2025 | 10:56 AM

ಆನೆಗಳ ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಮನುಷ್ಯನ ಭಾವನೆಗೆ ಸ್ಪಂದಿಸುವ ಆನೆಗಳು ತಮ್ಮ ಮಾಲೀಕರ ಜತೆಗೆ ಮಗುವಾಗಿ ವರ್ತಿಸುತ್ತವೆ. ಹೀಗಾಗಿ ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತದೆ. ಆದರೆ ಇದೀಗ ಹೃದಯ ಸ್ಪರ್ಶಿ ದೃಶ್ಯ ವೈರಲ್ ಆಗಿದ್ದು, ಮಾಲೀಕಳ ಜತೆಗೆ ಆನೆಯೊಂದು ಕಣ್ಣ ಮುಚ್ಚಾಲೆ ಆಟ ಆಡಿದೆ. ಈ ಮಾಲೀಕಳ ಜತೆಗೆ ಮಕ್ಕಳಂತೆ ಆಟ ಆಡಿದ ಆನೆಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

theelephantinitative ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಮಾಲೀಕಳ ಜತೆಗೆ ಆನೆಯೂ ಕಣ್ಣಾ ಮುಚ್ಚಾಲೆ ಆಟ ಆಡುವುದನ್ನು ಕಾಣಬಹುದು. ಈ ಮಹಿಳೆಯೂ ಬಂಡೆ ಕಲ್ಲಿನಿಂದ ಹಿಂಭಾಗದಲ್ಲಿ ಅಡಗಿ ನಿಂತಿದ್ದು ಆನೆಯೂ ತನ್ನ ಮಾಲೀಕಳಿಗಾಗಿ ಹುಡುಕಾಟ ನಡೆಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಕಂಜನ್‌ ಆನೆ

ಈ ವಿಡಿಯೋ ಹನ್ನೊಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೈಡ್ ಅಂಡ್ ಸಿಕ್, ನನ್ನ ಪ್ರಕಾರ ಆನೆ ಗೆದ್ದಿತು ಎಂದು ಹೇಳಿದ್ದಾರೆ. ಮತ್ತೊಬ್ಬರು ಮುಗ್ಧ ಜೀವಿಗಳ ಜತೆಗಿನ ತುಂಟಾಟ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ಹೃದಯಕ್ಕೆ ಹತ್ತಿರವಾಗಿದೆ. ಪ್ರಾಣಿಗಳ ಜತೆಗೆ ನಾವು ಕೂಡ ಮಕ್ಕಳಾಗಿ ಬಿಡುತ್ತೇವೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ