AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 6 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಕಿವಿ ಕಚ್ಚಿದ ಪಿಟ್‌ಬುಲ್

Viral Video: 6 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಕಿವಿ ಕಚ್ಚಿದ ಪಿಟ್‌ಬುಲ್

ಸುಷ್ಮಾ ಚಕ್ರೆ
|

Updated on: Nov 24, 2025 | 9:00 PM

Share

ದೆಹಲಿಯಲ್ಲಿ 6 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿ ಕಿವಿ ಕಚ್ಚಿದೆ. ನಾಯಿಯ ಮಾಲೀಕನನ್ನು ಬಂಧಿಸಲಾಗಿದೆ. ವಿಡಿಯೋದಲ್ಲಿ ಆ ನಾಯಿ ಹುಡುಗನ ಕಡೆಗೆ ಹಾರಿ ದಾಳಿ ಮಾಡುತ್ತಿರುವುದನ್ನು ನೋಡಬಹುದು. ಆಗ ಆ ಬಾಲಕ ಓಡಲು ಪ್ರಯತ್ನಿಸುತ್ತಾನೆ, ಆದರೆ ನಾಯಿ ಅವನನ್ನು ಬೆನ್ನಟ್ಟಿ ಕಚ್ಚುತ್ತದೆ. ನಾಯಿ ಹುಡುಗನ ಕಿವಿಗಳನ್ನು ಕಚ್ಚಿ ನೆಲದಲ್ಲಿ ಎಳೆದುಕೊಂಡು ಹೋಗುತ್ತದೆ. ಆಗ ಆ ಮಗುವನ್ನು ಹಿಂಬಾಲಿಸುವ ಮಹಿಳೆಯೊಬ್ಬರು ನಾಯಿಯನ್ನು ಎಳೆಯಲು ಪ್ರಯತ್ನಿಸುತ್ತಾರೆ. ಅದಾದ ಕೆಲವು ಕ್ಷಣಗಳ ನಂತರ, ಒಬ್ಬ ಪುರುಷ ಕೂಡ ಸಹಾಯ ಮಾಡಲು ಮುಂದಾಗುತ್ತಾನೆ. ಕೊನೆಗೆ ಆ ಮಹಿಳೆ ನಾಯಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾಳೆ.

ನವದೆಹಲಿ, ನವೆಂಬರ್ 24: ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ 6 ವರ್ಷದ ಬಾಲಕನನ್ನು ಪಿಟ್‌ಬುಲ್ ನಾಯಿ (Dog Bite) ಕಚ್ಚಿ ಕೊಂದಿದ್ದು, 6 ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಆ ನಾಯಿ ಹುಡುಗನ ಕಡೆಗೆ ಹಾರಿ ದಾಳಿ ಮಾಡುತ್ತಿರುವುದನ್ನು ನೋಡಬಹುದು. ಆಗ ಆ ಬಾಲಕ ಓಡಲು ಪ್ರಯತ್ನಿಸುತ್ತಾನೆ, ಆದರೆ ನಾಯಿ ಅವನನ್ನು ಬೆನ್ನಟ್ಟಿ ಕಚ್ಚುತ್ತದೆ. ನಾಯಿ ಹುಡುಗನ ಕಿವಿಗಳನ್ನು ಕಚ್ಚಿ ನೆಲದಲ್ಲಿ ಎಳೆದುಕೊಂಡು ಹೋಗುತ್ತದೆ. ಆಗ ಆ ಮಗುವನ್ನು ಹಿಂಬಾಲಿಸುವ ಮಹಿಳೆಯೊಬ್ಬರು ನಾಯಿಯನ್ನು ಎಳೆಯಲು ಪ್ರಯತ್ನಿಸುತ್ತಾರೆ. ಅದಾದ ಕೆಲವು ಕ್ಷಣಗಳ ನಂತರ, ಒಬ್ಬ ಪುರುಷ ಕೂಡ ಸಹಾಯ ಮಾಡಲು ಮುಂದಾಗುತ್ತಾನೆ. ಕೊನೆಗೆ ಆ ಮಹಿಳೆ ನಾಯಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆಗ ಆ ವ್ಯಕ್ತಿ ಗಾಯಗೊಂಡ ಬಾಲಕನನ್ನು ಬೇಗನೆ ಎತ್ತಿಕೊಂಡು ಓಡುತ್ತಾನೆ. ಪೊಲೀಸರ ಪ್ರಕಾರ, ಭಾನುವಾರ ಸಂಜೆ ಆ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಯಿಯ ಮಾಲೀಕ ರಾಜೇಶ್ ಪಾಲ್ ಅವರನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ