ಸರೀಸೃಪ (reptile) ಪ್ರಬೇಧಕ್ಕೆ ಸೇರಿದ ಸರ್ಪಗಳು ತೆವಳುತ್ತವೆ, ಅವುಗಳಗೆ ಕಾಲಿಲ್ಲ ಅಂತ ನಿಮಗೆ ಗೊತ್ತು. ತಮ್ಮ ದೇಹದಲ್ಲಿ ಸುರುಳಿಗಳನ್ನು ಸೃಷ್ಟಿಸಿಕೊಂಡು ಮುಂದಕ್ಕೆ ಹಿಂದಕ್ಕೆ ಚಲಿಸುತ್ತವೆ. ಹಾವುಗಳ ತೆವಳುವಿಕೆ ಎಂಟೆದೆಯವರ ಬೆನ್ನಹುರಿಯಲ್ಲೂ ನಡುಕ ಹುಟ್ಟುತ್ತದೆ. ಆದರೆ ನಿಮಗೊಂದು ವಿಷಯ ಗೊತ್ತಾ? ವಿಶ್ವದಲ್ಲಿ ಸುಮಾರು 600 ಬಗೆಯ ವಿಷಕಾರಿ (venomous) ಹಾವುಗಳಿದ್ದರೂ ಅವುಗಳಲ್ಲಿ ಕೇವಲ 200 ಜಾತಿ ಹಾವುಗಳು ಮಾತ್ರ ಮನುಷ್ಯನನ್ನು ಕೊಲ್ಲುವಷ್ಟು ಇಲ್ಲವೇ ಗಂಭೀರವಾಗಿ ಹಾನಿ ಉಂಟು ಮಾಡುವಷ್ಟು ವಿಷಲಕಾರಿಯಾಗಿವೆ. ಅಂದಹಾಗೆ, ಎಲ್ಲ ಜಾತಿ ಹಾವುಗಳಲ್ಲಿ ಅತ್ಯಂತ ವಿಷಕಾರಿ ಹಾವು ಅಂದರೆ ಇನ್ಲ್ಯಾಂಡ್ ಟೈಪಾನ್ (Inland Taipan) ಹೆಸರಿನ ಹಾವು. ಇದರಿಂದ ಗಾವುದ ದೂರ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ದೇಶದ ಕೋವಿಡ್ 19 ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ಕರೆದ ಕೇಂದ್ರ ಆರೋಗ್ಯ ಸಚಿವ; ಸಭೆಯ ಮುಖ್ಯಾಂಶಗಳು
ಆಸ್ಟ್ರೇಲಿಯನ್ ಮ್ಯೂಸಿಯಂ ಪ್ರಕಾರ, ಇನ್ಲ್ಯಾಂಡ್ ಟೈಪಾನ್ ಅತಿ ಭಯಾನಕ ಮತ್ತು ಅತ್ಯಂತ ಘಾತಕ ವಿಷಕಾರಿ ಹಾವು.
ಮಧ್ಯಮದಿಂದ ದೊಡ್ಡಗಾತ್ರದ ಹಾವಾಗಿರುವ ಇನ್ಲ್ಯಾಂಡ್ ಟೈಪಾನ್ ನೋಡಲು ದಷ್ಟಪುಷ್ಟವಾಗಿರುತ್ತದೆ. ಇದರ ತಲೆ ಆಳ ಮತ್ತು ಆಯಾತಾಕರ ಅಕೃತಿಯದ್ದಾಗಿರುತ್ತದೆ. ಮ್ಯೂಸಿಯಂ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಈ ಹಾವುಗಳು ಬೆಳಗಿನ ಸಮಯದ ಅರ್ಧ ಅವಧಿಯಷ್ಟು ಮಾತ್ರ ಆಹಾರಕ್ಕಾಗಿ ನೆಲದ ಬಿರುಕು ಮತ್ತು ಪ್ರಾಣಿಗಳು ಮಾಡಿಕೊಳ್ಳುವ ಪೊದೆಗಳಲ್ಲಿ ಹುಡುಕಾಟ ನಡೆಸಿ ದಿನದ ಉಳಿದ ಭಾಗವನ್ನು ವಿಶ್ರಾಂತಿಯಲ್ಲಿ ಕಳೆಯುತ್ತವೆ.
ಇನ್ಲ್ಯಾಂಡ್ ಟೈಪಾನ್ ಹಾವುಗಳ ಕಡಿತದಲ್ಲಿ ಎಷ್ಟು ವಿಷವಿರುತ್ತದೆ?
ಈ ಹಾವಿನ ವಿಷವನ್ನು ಎಲ್ ಡಿ 50 ಅಳತೆಗೋಲಿನ ಮೇಲೆ ಮಾಪನ ಮಾಡಲಾಗಿದೆ. ಇದು ಹಾವುಗಳಲ್ಲಿರುವ ವಿಷಕಾರಿ ಅಂಶವನ್ನು ಪತ್ತೆ ಮಾಡುತ್ತದೆ. ಯೂನಿವರ್ಸಿಟಿ ಆಫ್ ಬ್ರಿಸ್ಟಲ್ ನ ಸ್ಕೂಲ್ ಆಫ್ ಕೆಮಿಸ್ಟ್ರಿಯ ವೆಬ್ ಸೈಟ್ ಪ್ರಕಾರ ಇನ್ಲ್ಯಾಂಡ್ ಟೈಪಾನ್ ಎಷ್ಟು ವಿಷಕಾರಿ ಹಾವೆಂದರೆ ಅದು ಒಮ್ಮೆ ಕಚ್ಚಿದರೆ 110 ಮಿಲಿಗ್ರಾಂಗಳಷ್ಟು ವಿಷವನ್ನು ಕಕ್ಕುತ್ತದೆ ಮತ್ತು ಈ ವಿಷದ ಪ್ರಮಾಣ 100 ಮಾನವರನ್ನು ಅಥವಾ 2,50,000 ಇಲಿಗಳನ್ನು ಕೊಲ್ಲಬಲ್ಲದು.
ಇದನ್ನೂ ಓದಿ: ಪಾಕ್ ವಿದೇಶಾಂಗ ಸಚಿವರ ಹೇಳಿಕೆ ಖಂಡಿಸಿ ಕರ್ನಾಟಕದಲ್ಲಿ ಬಿಜೆಪಿ ಪ್ರತಿಭಟನೆ; ಡಿ.ಕೆ.ಶಿವಕುಮಾರ್ ವಿರುದ್ಧವೂ ಆಕ್ರೋಶ
ಇನ್ಲ್ಯಾಂಡ್ ಟೈಪಾನ್ ವಿಷಸರ್ಪಗಳು ಆಸ್ಟ್ರೇಲಿಯ ಒಂದು ದಟ್ಟಕಾಡಿನಲ್ಲಿ ಮಾತ್ರ ವಾಸವಾಗಿರುವುದರಿಂದ ಶೇಷ ವಿಶ್ವಕ್ಕೆ ಅವುಗಳ ಬಗ್ಗೆ ಹೆಚ್ಚು ಗೊತ್ತಿಲ್ಲ.
ಈ ಹಾವುಗಳು ದಟ್ಟವಾದ ಕಾಡಿನಲ್ಲಿ ವಾಸವಾಗಿರುವುದರ ಜೊತೆಗೆ ಹಗಲಲ್ಲಿ ಹೊರಗೆ ಬಾರದ ಕಾರಣ ಅಪರೂಪಕ್ಕೊಮ್ಮೆ ಮಾನವರ ಕಣ್ಣಿಗೆ ಬೀಳುತ್ತವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Wed, 21 December 22