Viral Video: ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ರೈತರನ್ನು ನೋಡಿ, ಕಠಿಣ ಪರಿಶ್ರಮಕ್ಕೆ ನೆಟ್ಟಿಗರ ಪ್ರಶಂಸೆ

ಸುಡು ಬಿಸಿಲನ್ನೂ ಲೆಕ್ಕಿಸದೇ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿರುವ ರೈತರ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral Video: ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ರೈತರನ್ನು ನೋಡಿ, ಕಠಿಣ ಪರಿಶ್ರಮಕ್ಕೆ ನೆಟ್ಟಿಗರ ಪ್ರಶಂಸೆ
ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ರೈತರನ್ನು ನೋಡಿ

Updated on: May 24, 2021 | 2:25 PM

ಇಷ್ಟಪಟ್ಟಿದನ್ನು ನಾವು ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ಕೊಳ್ಳುತ್ತೇವೆ. ಸುಲಭದಲ್ಲಿ ಬೇಕೆನಿಸಿದ ನಮಗಿಷ್ಟ ಹಣ್ಣು ನಮ್ಮದಾಗಿ ಬಿಡುತ್ತದೆ. ಆದರೆ ಆ ಹಣ್ಣನ್ನು ಬೆಳೆಯಲು ರೈತರು ಹಗಲಿರುಳು ದುಡಿದಿರುತ್ತಾರೆ. ಅವರ ಕಠಿಣ ಪರಿಶ್ರಮದಿಂದ ನಮಗೆಲ್ಲಾ ಮೂರು ಹೊತ್ತಿನ ಊಟ ಸಿಗುತ್ತಿದೆ. ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಡು ಬಿಸಿಲನ್ನೂ ಲೆಕ್ಕಿಸದೇ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ನೋಡಿದ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಜಮೀನಿನಲ್ಲಿ ದಿನಪೂರ್ತಿ ದುಡಿದು ತರಕಾರಿಗಳನ್ನು-ಹಣ್ಣುಗಳನ್ನು ತಯಾರಿಸುತ್ತಾರೆ. ಅಂತಹ ಆಹಾರ ಪದಾರ್ಥಗಳನ್ನು ಬೆಳೆಯಲು ತಾಳ್ಮೆ ಜತೆಗೆ ನಿರಂತರ ಪರಿಶ್ರಮ ಬೇಕು. ಹಣ್ಣುಗಳನ್ನು ಬೆಳೆಯಲು ಪ್ರಾರಂಭ ಮಾಡಿದಾಗಿನಿಂದ ಮಾರುಕಟ್ಟೆಗೆ ತಲುಪುವವರೆಗೂ ಅದೆಷ್ಟೋ ಕಾರ್ಮಿಕರ ಶ್ರವವಿರುತ್ತದೆ. ಬೆಳೆದ ಹಣ್ಣುಗಳನ್ನು ವಾಹನಕ್ಕೆ ಸಾಗಿಸುವಾಗ ಎಷ್ಟು ವೇಗದಲ್ಲಿ ಜನರು ಹಣ್ಣನ್ನು ಸಾಗಿಸುತ್ತಿದ್ದಾರೆ. ಜತೆಗೆ ನಾವಿಷ್ಟ ಪಡುವ ಸ್ಟ್ರಾಬೆರಿ ಹಣ್ಣು ಬೆಳೆಯುವ ಹಿಂದಿನ ಪರಿಶ್ರಮವೇನು ಎಂಬುದರ ಕುರಿತಾಗಿ ವಿಡಿಯೋ ನೋಡಿದ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.

‘ಮುಂದಿನ ಬಾರಿ ರುಚಿಕರವಾದ ಸ್ಟ್ರಾಬೆರಿ ಹಣ್ಣನ್ನು ನೀವು ತಿನ್ನುವಾಗ, ಅವುಗಳನ್ನು ಸಂಗ್ರಹಿಸುವುದರ ಹಿಂದಿನ ಪರಿಶ್ರಮವೇನು ಎಂಬುದನ್ನು ನೆನಪಿನಲ್ಲಿಡಿ’ ಎಂದು ಕಾರ್ಮಿಕರು ಸ್ಟ್ರಾಬೆರಿ ಹಣ್ಣು ಕೊಯ್ಲು ಮಾಡುತ್ತಿರುವ ದೃಶ್ಯ ಹಂಚಿಕೊಳ್ಳುವಾಗ ಬರೆದುಕೊಳ್ಳಲಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 3ಲಕ್ಷಕ್ಕೂ ಹೆಚ್ಚು ವೀಕ್ಷಣಗಳನ್ನು ಗಳಿಸಿಕೊಂಡಿದೆ. ಕಾರ್ಮಿಕರ ಕಠಿಣ ಪರಿಶ್ರಮವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಾಗೆಯೇ, ಕೃಷಿ ಕಾರ್ಮಿಕರು ಮಾಡುವ ಕೆಲಸ ಪ್ರಾಮಾಣಿಕವಾದದ್ದು ಆದರೆ ಅವರಿಗೆ ತೀರಾ ಕಡಿಮೆ ಸಂಬಳ ನೀಡಲಾಗುತ್ತದೆ ಎಂದು ಕೆಲವರು ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 

ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು; ಕಂಗಾಲಾದ ಮೈಸೂರಿನ ರೈತ

ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ