Viral Video: ಅಯ್ಯಯ್ಯೋ… ಮಹಿಳೆಯ ವಿಡಿಯೋ ವೈರಲ್, ನೀವೂ ನೋಡಿ ನಕ್ಕು ಬಿಡಿ

ಮಹಿಳೆಯೊಬ್ಬಳು ಮಗನಿಗೆ ಈಜು ಕೊಳಕ್ಕೆ ಹಾರುವುದು ಹೇಗೆ ಎಂದು ತೋರಿಸಲು ಹೋಗಿ ತಾನೇ ನೀರಿಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Viral Video: ಅಯ್ಯಯ್ಯೋ... ಮಹಿಳೆಯ ವಿಡಿಯೋ ವೈರಲ್, ನೀವೂ ನೋಡಿ ನಕ್ಕು ಬಿಡಿ
ಈಜು ಕೊಳಕ್ಕೆ ಬಿದ್ದ ಮಹಿಳೆ
Image Credit source: Instagram
Edited By:

Updated on: Jun 03, 2022 | 6:00 PM

ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುವ ಕೆಲವೊಂದು ವಿಡಿಯೋಗಳು ಹಾಸ್ಯಮಯವಾಗಿರುತ್ತದೆ. ಅದರಂತೆ ಮಹಿಳೆಯೊಬ್ಬಳು ಮಗನಿಗೆ ಈಜು ಕೊಳಕ್ಕೆ ಹಾರುವುದು ಹೇಗೆ ಎಂದು ತೋರಿಸಲು ಹೋಗಿ ತಾನೇ ನೀರಿಗೆ ಬಿದ್ದ ವಿಡಿಯೋ (Video) ಒಂದು ಭಾರಿ ವೈರಲ್ (Viral) ಆಗುತ್ತಿದ್ದು, ನೆಟ್ಟಿಜನ್​ಗಳಿಗೆ ಒಳ್ಳೆಯ ಮನರಂಜನೆಯನ್ನ ನೀಡುತ್ತಿದೆ.

ಇದನ್ನೂ ಓದಿ: Viral Video: ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್​​ಗಳು ಕಂಗಾಲು

ಈಜು ಕೊಳಕ್ಕೆ ಹಾರುವಾಗ ಧರಿಸುವ ತೇಲುವ ವಸ್ತವನ್ನು ಧರಿಸಿದ ಮಹಿಳೆಯೊಬ್ಬಳು ತನ್ನ ಮಗನಿಗೂ ರಕ್ಷಣಾ ಕವಚ ತೊಡಿಸಿ ಈಜುಕೊಳದ ಬಳಿ ನಿಲ್ಲುತ್ತಾಳೆ. ಅದರಂತೆ ಆಕೆ ಮಗನಿಗೆ ಹೇಗೆ ಹಾರುವುದು ಎಂದು ಸೂಚಿಸಲು ಕೊಳದ ಅಂಚಿಗೆ ಬಂದಾಗ ನಿಯಂತ್ರಣ ತಪ್ಪಿ ತಾನೇ ನೀರಿಗೆ ಬಿದ್ದಿದ್ದಾಳೆ. ಇದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ವಿಡಿಯೋ ಮಾಡುವ ವ್ಯಕ್ತಿ ಸೇರಿದಂತೆ ನೀರಿಗೆ ಬಿದ್ದ ಮಹಿಳೆಯೂ ನಗಾಡುವುದನ್ನು ಕೇಳಬಹುದು.

ತಮಾಷೆಯ ಈ ವಿಡಿಯೋವನ್ನು ವೈರಲ್‌ಹಾಗ್ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಜನ್​ಗಳಿಗೆ ನಕ್ಕುಬಿಟ್ಟಿದ್ದಾರೆ.

ಇದನ್ನೂ ಓದಿ: Trending: ಮೀನುಗಾರಿಕೆ ವೇಳೆ ಮೀನುಗಾರನ ಬಾಯಿಯೊಳಗೆ ನುಗ್ಗಿದ ಮೀನು! ಮುಂದೇನಾಯ್ತು ಗೊತ್ತಾ?

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Fri, 3 June 22