Viral Video: ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್ಗಳು ಕಂಗಾಲು
ಕೆನ್ನಿವುಡ್ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಟ್ರ್ಯಾಲಿ (Trolley) ಕೆಟ್ಟುನಿಂತ ಪರಿಣಾಮ ರೈಡರ್ಗಳು ಕಂಗಾಲದ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.
ವೆಸ್ಟರ್ನ್ ಪೆನ್ಸಿಲ್ವೇನಿಯಾದಲ್ಲಿ ಇರುವ ಕೆನ್ನಿವುಡ್ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಟ್ರ್ಯಾಲಿ (Trolley) ಕೆಟ್ಟುನಿಂತ ಪರಿಣಾಮ ರೈಡರ್ಗಳು ಕಂಗಾಲದ ಘಟನೆಯೊಂದು ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಏರೋ 360 ರೈಡ್‌ನಲ್ಲಿ ಸವಾರರು ತಲೆಕೆಳಗಾಗಿ ಹೋಗುತ್ತಿದ್ದಾಗ ಕೆಟ್ಟುನಿಂತಿದೆ. ಉದ್ಯಾನವನದಲ್ಲಿ ಅತಿಥಿಯೊಬ್ಬರು ತೆಗೆದ ಘಟನೆಯ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: Viral Video: ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ಸೈಕಲ್ ಆಟೋ ರಿಕ್ಷಾ! ವಿಡಿಯೋ ವೈರಲ್
ವೈರಲ್ ವಿಡಿಯೋ ಗಮನಿಸಿದಾಗ ಟ್ರ್ಯಾಲಿ ಮೇಲ್ಭಾಗದಲ್ಲಿ ತಲೆಕೆಳಗಾಗಿ ಕೆಟ್ಟುನಿಂತು ಹಿಂದಕ್ಕೆ ಮುಂದಕ್ಕೆ ಚಲಿಸುವುದನ್ನು ಕಾಣಬಹುದು. ಸುಮಾರು ಐದು ನಿಮಿಷಗಳ ಕಾಲ ರೈಡರ್ಗಳು ತಲೆಕೆಳಗಾಗಿ ಪರದಾಡಿವಂತಾಗಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ತ್ವರಿತವಾಗಿ ಟ್ರ್ಯಾಲಿಯನ್ನು ಕೆಳಗೆ ತರಲಾಯಿತು ಮತ್ತು ರೈಡರ್ಗಳನ್ನು ಸ್ಥಳಾಂತರಿಸಲಾಯಿತು ಎಂದು ಕೆನ್ನಿವುಡ್ ಜನರಲ್ ಮ್ಯಾನೇಜರ್ ಮಾರ್ಕ್ ಪಾಲ್ಸ್ ಅವರು ಹೇಳಿದ್ದಾರೆ. “ನಿರ್ವಹಣಾ ಸಿಬ್ಬಂದಿಗಳು ರೈಡ್ ಅನ್ನು ತ್ವರಿತವಾಗಿ ಅದರ ಗೊತ್ತುಪಡಿಸಿದ ಸ್ಥಾನಕ್ಕೆ ತಂದರು ಮತ್ತು ಸವಾರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಸುರಕ್ಷತೆಯು ನಮ್ಮ ಮೊದಲ ಮತ್ತು ಅಗ್ರಗಣ್ಯ ಆದ್ಯತೆಯಾಗಿದೆ”ಎಂದು ಪಾರ್ಕ್ ವಕ್ತಾರರು ಸಿಬಿಎಸ್ ಪಿಟ್ಸ್‌ಬರ್ಗ್‌ನಿಂದ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Trending: ಮೀನುಗಾರಿಕೆ ವೇಳೆ ಮೀನುಗಾರನ ಬಾಯಿಯೊಳಗೆ ನುಗ್ಗಿದ ಮೀನು! ಮುಂದೇನಾಯ್ತು ಗೊತ್ತಾ?
ಏರೋ 360 ಟ್ರ್ಯಾಲಿಯು ಮೇಲ್ಭಾಗದಲ್ಲಿ ಸಿಕ್ಕಿಹಾಕಿಕೊಂಡ ಘಟನೆಯ ವೀಡಿಯೊವನ್ನು AP ಹಂಚಿಕೊಂಡಿದೆ. “ಇದು ನಿಜವಾಗಿಯೂ ಭಯಾನಕವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕೇವಲ ಒಂದೆರಡು ನಿಮಿಷಗಳ ಕಾಲ ತಲೆಕೆಳಗಾಗಿ ಸಿಲುಕಿಕೊಂಡರೆ ಅಪಾಯಕಾರಿ” ಎಂದು ಉದ್ಯಾನವನಕ್ಕೆ ಹೋಗುವ ಲೈಲಾ ಬ್ರನ್ನರ್ ಸಿಬಿಎಸ್‌ಗೆ ತಿಳಿಸಿದರು. “ನಾನು ಬಹುಶಃ ಅದನ್ನು ಎಂದಿಗೂ ಸವಾರಿ ಮಾಡುವುದಿಲ್ಲ” ಎಂದಿದ್ದಾರೆ.
ಘಟನೆಯಿಂದ ಕಂಗಾಲಾದ ಸವಾರರನ್ನು ವೈದ್ಯಕೀಯ ಸಿಬ್ಬಂದಿಗಳು ಭೇಟಿಯಾಗಿದ್ದಾರೆ. ಟ್ರ್ಯಾಲಿ ಮಧ್ಯದಲ್ಲಿ ಕೆಟ್ಟುನಿಲ್ಲಲು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಪೂರ್ಣಗೊಳ್ಳುವವರೆಗೂ ರೈಡ್ ಅನ್ನು ಸ್ಥಗಿತಗೊಳಿಸಲಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 3 June 22