Trending: ಮೀನುಗಾರಿಕೆ ವೇಳೆ ಮೀನುಗಾರನ ಬಾಯಿಯೊಳಗೆ ನುಗ್ಗಿದ ಮೀನು! ಮುಂದೇನಾಯ್ತು ಗೊತ್ತಾ?
ನೀರಿನ ಮೇಲ್ಮೈ ಅಡಿಯಲ್ಲಿ ಹಾರ್ಪೂನ್‌ನೊಂದಿಗೆ ಸ್ಪೈಕ್-ಫಿಶಿಂಗ್ ಮಾಡುತ್ತಿದ್ದಾಗ ಮೀನುಗಾರನ ಬಾಯಿಯೊಳಗೆ ಮೀನು ನುಗ್ಗಿದ ಘಟನೆಯೊಂದು ಥೈಲ್ಯಾಂಡ್ನಲ್ಲಿ ನಡೆದಿದೆ. ಸದ್ಯ ವೈದ್ಯರು ಯಶಸ್ವಿ ಚಿಕಿತ್ಸೆ ನಡೆಸಿ ಮೀನನ್ನು ಹೊರ ತೆಗೆದಿದ್ದಾರೆ.
ಮೀನುಗಾರನೊಬ್ಬ ನೀರಿನ ಮೇಲ್ಮೈ ಅಡಿಯಲ್ಲಿ ಹಾರ್ಪೂನ್ (harpoon)ನೊಂದಿಗೆ ಸ್ಪೈಕ್-ಫಿಶಿಂಗ್ (spike-fishing) ಮಾಡುತ್ತಿದ್ದಾಗ ಆತನ ಬಾಯಿಯೊಳಗೆ ಮೀನು ನುಗ್ಗಿದ ಘಟನೆಯೊಂದು ಥೈಲ್ಯಾಂಡ್ (Thailand)ನಲ್ಲಿ ನಡೆದಿದೆ. ಮೊನಚಾದ ಅನಾಬಾಸ್ ಮೀನು ಮೀನುಗಾರನ ಸ್ಪೈಕ್‌ಗೆ ಸಿಲುಕಿಕೊಳ್ಳದೆ ನೇರವಾಗಿ ಆತನ ಬಾಯಿಯೊಳಗೆ ನುಗ್ಗಿ ಗಂಟಲು ಮತ್ತು ಮೂಗಿನ ಕುಹರದ ನಡುವೆ ಸಿಲುಕಿಕೊಂಡಿದೆ. ಪರಿಣಾಮವಾಗಿ ಮೀನುಗಾರನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅದರಂತೆ ಆತನನ್ನು ಫಠಾಲುಂಗ್ ಪ್ರಾಂತೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: Trending: ಹಣ್ಣು ಕೀಳುವುದು ಇನ್ನಷ್ಟು ಸುಲಭ, ಹೇಗೆ ಗೊತ್ತಾ? ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ನೋಡಿ
ಉಸಿರಾಡಲು ಸಾಧ್ಯವಾಗದ ಹಿನ್ನೆಲೆ ವೈದ್ಯರು ತ್ವರಿತ ಸ್ಕ್ಯಾನ್ಗಳನ್ನು ಮಾಡಿದರು. ಈ ವೇಳೆ ಮೀನು ಗಂಟಲು ಮತ್ತು ಮೂಗಿನ ಕುಹರದ ನಡುವೆ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಮೀನನ್ನು ಅವನ ದೇಹದಿಂದ ಹೊರತೆಗೆಯಲು ಇಬ್ಬರು ವೈದ್ಯರು ಮೂವರು ನರ್ಸ್ಗಳ ಸಹಾಯದೊಂದಿಗೆ ಶಸ್ತ್ರಚಿಕಿತ್ಸೆ ಆರಂಭಿಸಿದರು. ಅದರಂತೆ ಒಂದು ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿದ ವೈದ್ಯರು ಬಾಯಿ ಮೂಲಕ ಮೀನನ್ನು ಎಳೆದು ತೆಗೆದರು ಎಂದು ವರದಿಯಾಗಿದೆ.
ಗಂಟಲಿನಿಂದ ಮೀನನ್ನು ಹೊರತೆಗೆಯಲಾಗಿದ್ದು, ಅದೃಷ್ಟವಶಾತ್ ಮೀನುಗಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅವರು ಈಗ ಸಹಜ ಸ್ಥಿತಿಗೆ ಮರಳಿದ್ದಾರೆ. ಸದ್ಯ ಅವರ ಗಂಟಲಿನ ಸ್ಕ್ಯಾನ್ ಮಾಡಿದ ಫೋಟೋಗಳು ಮತ್ತು ಅವರ ಗಂಟಲಿನಿಂದ ತೆಗೆದ ಮೀನಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Trending News: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಮಾರಾಟ! ಎಷ್ಟಕ್ಕೆ ಗೊತ್ತಾ?
ಆಸ್ಪತ್ರೆಯ ಅಧಿಕಾರಿ ಸೆರ್ಮಶ್ರೀ ಪಥೊಂಪನಿಚ್ರತ್ ಹೇಳುವಂತೆ, “ನಮ್ಮ ವೈದ್ಯರು ನಮ್ಮ ರೋಗಿಯ ಅಂಗಗಳಿಗೆ ಹಾನಿಯಾಗದಂತೆ ನೀಡಿಕೊಂಡರು. ಅವರು ಮೀನನನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ರೋಗಿಗೆ ಯಾವುದೇ ತೊಂದರೆಯಾಗಿಲ್ಲ. ಇಂಥ ಘಟನೆ ಸಂಭವಿಸುವ ಸಾಧ್ಯತೆಗಳು ತುಂಬಾ ಕಡಿಮೆ. ನಾನು ಈ ರೀತಿಯ ಪ್ರಕರಣವನ್ನು ಹಿಂದೆಂದೂ ನೋಡಿಲ್ಲ”ಎಂದು ಹೇಳಿದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Fri, 3 June 22