ರಸ್ತೆಗಳ ಮಧ್ಯೆ ರೀಲ್ಸ್ ಮಾಡುವುದು, ಅಪಾಯಕರ ಜಾಗದಲ್ಲಿ ಫೋಟೊ ತೆಗೆಸಿಕೊಳ್ಳುವುದು ಹೆಚ್ಚಾಗಿಬಿಟ್ಟಿದೆ. ಎಲ್ಲರಿಗಿಂತ ತಾವೇನೋ ಡಿಫರೆಂಟ್ ಎಂದು ತೋರಿಸಲು ಹೋಗಿ ಅಪಾಯಕ್ಕೆ ಸಿಲುಕಿಬಿಡುತ್ತಾರೆ. ವಿಡಿಯೋ ಮಾಡುವ ತವಕದಲ್ಲಿ ತಮಗಾಗುವ ಅಪಾಯದ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ವೇದಿಕೆಗಳಲ್ಲಿ ಅಪಾಯಗಳ ಜೊತೆ ಆಟವಾಡಲು ಇಷ್ಟಪಡುವ ಇಂತಹ ಅನೇಕ ಸಾಹಸಗಳನ್ನು ನೀವು ನೋಡಿರಬೇಕು. ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ಕ್ರಿಯೆಯಲ್ಲಿ ಅವರು ಸಾಯಬಹುದು ಎನ್ನುವ ಭಯವೂ ಅವರಿಗಿರುವುದಿಲ್ಲ, ಹುಚ್ಚತನ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.
ಇದೀಗ ಮತ್ತೊಮ್ಮೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಹಡಿಯ ಕೆಳಗೆ ನೆಟ್ ಒಂದನ್ನು ಹಾಕಿರುತ್ತಾರೆ, ಆ ನೆಟ್ ಮೇಲೆ ಮಲಗಿ ಪೋಸ್ ಕೊಡಲು ಹೋಗಿ 20 ಅಡಿ ಆಳಕ್ಕೆ ಬಿದ್ದಿದ್ದಾಳೆ.
ಆ ಜಾಲರಿಯು ಆ ಯುವತಿಯ ತೂಕವನ್ನು ತಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಒಂದು ಬಾರಿಯೂ ಯೋಚನೆ ಮಾಡಿಲ್ಲ. ಆ ಜಾಲರಿ ಅಷ್ಟು ಗಟ್ಟಿಮುಟ್ಟಾಗಿರದ ಕಾರಣ ಆಕೆ ಬೀಳುತ್ತಿದ್ದಂತೆ ಅದು ಹರಿದುಹೋಗಿದೆ. ನಂತರ ಆಕೆ ಕೆಳಗೆ ಬಿದ್ದಿದ್ದಾಳೆ. ಆ ಯುವತಿಗೆ ಮುಂದೇನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಮತ್ತಷ್ಟು ಓದಿ: Viral Video: ದೆಹಲಿ ಮೆಟ್ರೋದಲ್ಲಿ ಮತ್ತೆ ರೀಲಿಗರ ಹಾವಳಿ; ನಗಬೇಕೋ ಅಳಬೇಕೋ
ಬಿದ್ದ ರೀತಿ ನೋಡಿದರೆ ಸಣ್ಣಪುಟ್ಟ ಗಾಯಗಳಾಗಿರಬಹುದು ಎಂದು ಊಹಿಸಬಹುದು. ಈ ವೀಡಿಯೊವನ್ನು @MoreCrazyClips ಹೆಸರಿನ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.
She tried to get a cool Instagram post ? pic.twitter.com/3rX4Zxbwug
— More Crazy Clips (@MoreCrazyClips) April 12, 2023
ಆ ವಿಡಿಯೋ ನೋಡಿ ಹಲವು ಮಂದಿ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ, ಇಂತಹ ವಿಡಿಯೋ ನೋಡಿಯಾದರೂ ಜನರು ಬುದ್ಧಿ ಕಲಿಯಬೇಕು ಎಂದು ಒಬ್ಬರು ಹೇಳಿದ್ದರೆ, ಅಬ್ಬಾ ಅಂತೂ ಆಕೆ ಬದುಕುಳಿದಳಲ್ಲ ಎಂದು ನಿಟ್ಟುಸಿರುವ ಬಿಟ್ಟಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ