ಅದೃಷ್ಟ ಎಂದರೆ ಇದೇ ನೋಡಿ, ಯಾರ ಜೀವನ ಯಾವಾಗ ಯಾವ ತಿರುವು ಪಡೆಯುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವರು ಎಲ್ಲವನ್ನೂ ಕಳೆದುಕೊಂಡು ಬಡವರೂ ಆಗಬಹುದು, ಇನ್ನೂ ಕೆಲವರು ಎಲ್ಲವನ್ನೂ ಪಡೆದು ಶ್ರೀಮಂತರೂ ಆಗಬಹುದು. ಇಲ್ಲೊಬ್ಬ ಮಹಿಳೆ ಅಂಗಡಿಗೆ ಸೋಡಾ ಕುಡಿಯಲು ಹೋಗಿ, 84 ಲಕ್ಷ ರೂ. ಗೆದ್ದು ಹಿಂದಿರುಗಿದ್ದಾಳೆ.
ಈ ಮಹಿಳೆ ಅಮೆರಿಕದ ವರ್ಜೀನಿಯಾ ನಿವಾಸಿ, ಆಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಮಹಿಳೆ ಹೆಸರು ಜಾನೆಟ್ ಬೈನ್ , ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ ಟಿಕೆಟ್ ಖರೀದಿಸಿದಳು.
ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ.
ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ.
ಮತ್ತಷ್ಟು ಓದಿ: Viral Video: ಈ ರೀತಿ ಹಣೆ ಮೇಲೆ ನೀರು ತುಂಬಿದ ಗ್ಲಾಸ್ ಇಟ್ಟು ಬ್ಯಾಲೆನ್ಸ್ ಮಾಡುತ್ತಾ ನಡೆಯೋಕೇ ನಿಮ್ಮಿಂದ ಸಾಧ್ಯವೇ?
ಲಾಟರಿಯಿಂದ ಇಷ್ಟು ಮೊತ್ತ ಗೆದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ, ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ವಾಸಿಸುತ್ತಿರುವ ಗ್ಯಾರಿ ಲೇಸಿ ಕೂಡ ಇದೇ ರೀತಿಯಲ್ಲಿ 5 ಮಿಲಿಯನ್ ಡಾಲರ್ ಗೆದ್ದಿದ್ದಾರೆ.
ಅವರು ಸಿಗರೇಟ್ ಖರೀದಿಸಲು ಅಂಗಡಿಗೆ ಹೋಗಿದ್ದರು ಮತ್ತು ಪವರ್‌ಬಾಲ್ ಲಾಟರಿ ಟಿಕೆಟ್ ಖರೀದಿಸುವ ಆಲೋಚನೆ ಅವರಿಗೆ ಬಂದಿತು. ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಹಾಲು ಮತ್ತು ಬ್ರೆಡ್ ಖರೀದಿಸಲು ಹೋಗಿದ್ದರು, ಅಲ್ಲಿ ಅವರು ಲಾಟರಿ ಟಿಕೆಟ್‌ನಲ್ಲಿ ಲಕ್ಷಗಳ ಬಹುಮಾನವನ್ನು ಗೆದ್ದಿದ್ದಾರೆ. ವ್ಯಕ್ತಿಯೊಬ್ಬರು ಕಚೇರಿಗೆ ಹೋಗುವಾಗ ಟಿಕೆಟ್ ಖರೀದಿಸಿ 1 ಕೋಟಿ 65 ಲಕ್ಷ ರೂ.ಗಳ ಲಾಟರಿ ಗೆದ್ದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ