Viral: 20 ಲಕ್ಷ ಖರ್ಚು ಮಾಡಿ ಪ್ರತೀ ಕ್ರಿಸ್‌ಮಸ್‌ಗೆ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಮಹಿಳೆ; ತುಟಿಯ ಆಕಾರ ಹೇಗಾಗಿದೆ ನೋಡಿ

ಈ ಮಹಿಳೆ ಪ್ರತೀ ವರ್ಷ ಕ್ರಿಸ್​​ಮಸ್​​​ಗೆ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿ ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾಳೆ. ವರ್ಷ ವರ್ಷ ಆಕೆಯ ತುಟಿಗಳು ವಿಕಾರವಾಗುತ್ತಾ ಹೋದರೂ ಕೂಡ ತುಟಿಗಳ ಗಾತ್ರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆ ಮಾಡಿಸುವುದನ್ನು ಮಾತ್ರ ಬಿಟಿಲ್ಲ. ಈಗ ಆಕೆಯ ತುಟಿಯ ಆಕಾರ ಹೇಗಾಗಿದೆ ನೋಡಿ.

Viral: 20 ಲಕ್ಷ ಖರ್ಚು ಮಾಡಿ ಪ್ರತೀ  ಕ್ರಿಸ್‌ಮಸ್‌ಗೆ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಮಹಿಳೆ; ತುಟಿಯ ಆಕಾರ ಹೇಗಾಗಿದೆ ನೋಡಿ
World's biggest lips
Image Credit source: instagram

Updated on: Dec 27, 2023 | 10:55 AM

ನೋಡಲು ಸುಂದರವಾಗಿರಬೇಕೆಂದು ಸೌಂದರ್ಯದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ನೈಸರ್ಗಿಕ ಸೌಂದರ್ಯವನ್ನು ಇಷ್ಟ ಪಡದೇ ಪ್ಲಾಸ್ಟಿಕ್ ಸರ್ಜರಿಯತ್ತ ಹೆಚ್ಚಿನ ಒಲವು ತೋರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ತಮ್ಮ ಇಚ್ಛೆಗೆ ತಕ್ಕಂತೆ ದೇಹದ ಅಂಗಾಂಗಗಳ ಆಕಾರಗಳನ್ನು ಬದಲಾಯಿಸುತ್ತಿರುವುದನ್ನು ಕಾಣಬಹುದು. ಇದಕ್ಕಾಗಿ ಲಕ್ಷಾಂತರ ದುಡ್ಡು ಕೂಡ ಖರ್ಚು ಮಾಡುತ್ತಾರೆ. ಕೆಲವರು ತಮ್ಮ ಪ್ಲಾಸ್ಟಿಕ್ ಸರ್ಜರಿಗಳಿಂದ ಖುಷಿಪಟ್ಟರೆ, ಇನ್ನೂ ಕೆಲವರ ಪ್ರಾಣಕ್ಕೆ ಕಂಟಕವಾಗಿ ಬಿಡುತ್ತದೆ. ಇಲೊಬ್ಬಳು ಮಹಿಳೆ ಇದೀಗಾ ತನ್ನ ತುಟಿಯಿಂದಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾಳೆ. ಈ ಮಹಿಳೆ ಪ್ರತೀ ವರ್ಷ ಕ್ರಿಸ್​​ಮಸ್​​​ಗೆ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿ ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾಳೆ. ವರ್ಷ ವರ್ಷ ಆಕೆಯ ತುಟಿಗಳು ವಿಕಾರವಾಗುತ್ತಾ ಹೋದರೂ ಕೂಡ ತುಟಿಗಳ ಗಾತ್ರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆ ಮಾಡಿಸುವುದನ್ನು ಮಾತ್ರ ಬಿಟಿಲ್ಲ. ಈಗ ಆಕೆಯ ತುಟಿಯ ಆಕಾರ ಹೇಗಾಗಿದೆ ನೋಡಿ.

ಯುವತಿಯ ಹೆಸರು ಆಂಡ್ರಿಯಾ ಇವನೊವಾ(26). ಈಗ ಆಂಡ್ರಿಯಾನನ್ನು ‘ದೊಡ್ಡ ತುಟಿ ಹೊಂದಿರುವ ಮಹಿಳೆ’ ಎಂದು ಕರೆಯುತ್ತಾರೆ. ವಾಸ್ತವವಾಗಿ, ತೆಳ್ಳಗಿನ ಚಿಕ್ಕ ತುಟಿಯನ್ನು ಹೊಂದಿದ್ದ ಈಕೆ, ಮೊದಲ ಬಾರಿಗೆ ತನ್ನ ತುಟಿಯ ಗಾತ್ರ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾಳೆ. ದಪ್ಪ ತುಟಿಗಳು ಹೆಚ್ಚು ಆಕರ್ಷಕವಾಗಿವೆ ಎಂದು ಈಕೆ ನಂಬಲು ಆರಂಭಿಸಿದಳು. ಪರಿಣಾಮ ಇದೀಗಾ ಪ್ರತೀ ವರ್ಷ 20 ಲಕ್ಷ ರೂ ಖರ್ಚು ಮಾಡಿ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾಳೆ.

ಇದನ್ನೂ ಓದಿ: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ

ಡೈಲಿ ಮೇಲ್ ವರದಿ ಪ್ರಕಾರ, ಆಂಡ್ರಿಯಾ ಬಲ್ಗೇರಿಯಾ ನಿವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ತುಟಿಗಳ ಆಕಾರವನ್ನು ಬದಲಾಯಿಸಲು 19 ಸಾವಿರ ಪೌಂಡ್‌ಗಳನ್ನುಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಆಂಡ್ರಿಯಾ ಪ್ರತಿ ವರ್ಷ ಕ್ರಿಸ್‌ಮಸ್ ಸಮಯದಲ್ಲಿ ತನ್ನ ತುಟಿಗೆ ಫಿಲ್ಲರ್‌ ಮಾಡಿಸಿಕೊಳ್ಳುತ್ತಾಳೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us