Viral Video: ಮುಂಬೈ ಲೋಕಲ್​ ಟ್ರೇನಿನ ಈ ‘ನಿತ್ಯಪ್ರಯಾಣಿಕ’ನ ವಿಡಿಯೋ ವೈರಲ್

Local Train : ಇವನನ್ನು ನೋಡಿದ್ದೇನೆ, ಬಹಳ ಬುದ್ಧಿವಂತ, ಶಾಂತ. ಆದರೆ ನಿತ್ಯವೂ ಹೀಗೆ ಬೊರಿವಲಿಯಿಂದ ಅಂಧೇರಿಗೆ ಯಾಕೆ ಪ್ರಯಾಣಿಸುತ್ತಾನೋ ಗೊತ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ನಿಮಗೇನಾದರೂ ಹೊಳೆದೀತೆ? ನೋಡಿ ವಿಡಿಯೋ.

Viral Video: ಮುಂಬೈ ಲೋಕಲ್​ ಟ್ರೇನಿನ ಈ ನಿತ್ಯಪ್ರಯಾಣಿಕನ ವಿಡಿಯೋ ವೈರಲ್
ನಾ ಹೀಗೇ ಹೋಗೋದು ಬೊರಿವಲಿಯಿಂದ ಅಂಧೇರಿಗೆ
Edited By: ಶ್ರೀದೇವಿ ಕಳಸದ

Updated on: May 22, 2023 | 4:38 PM

Viral Video: ಇವರು ಮುಂಬೈನ ಬೊರಿವಲಿಯಿಂದ ಅಂಧೇರಿಗೆ ನಿತ್ಯವೂ ಪ್ರಯಾಣಿಸುತ್ತಾರೆ. ಯಾವ ಕೆಲಸದಲ್ಲಿದ್ಧಾರೆ ಯಾವ ಆಫೀಸಿಗೆ ಹೋಗುತ್ತಾರೆ ಗೊತ್ತಿಲ್ಲ. ಇವರು ವಾಸಿಸುವುದು ಬೀದಿಯಲ್ಲಿ. ಅಂಧೇರಿಯಲ್ಲಿ ಇವರು ಯಾರನ್ನು ಕಾಣಲು ಹೋಗುತ್ತಾರೋ ಅದೂ ಗೊತ್ತಿಲ್ಲ. ಆದರೆ ದಿನವೂ ತಪ್ಪದೇ ಹೀಗೆ ರೈಲಿನಲ್ಲಿ ಹೋಗಿಬರುತ್ತಾರೆ. ರೈಲ್ವೇ ಇಲಾಖೆ ಇವರಿಗೆ ಉಚಿತ ಪಾಸ್​ ಯಾವಾಗ ನೀಡಿದೆಯೋ ಅದೂ ಗೊತ್ತಿಲ್ಲ. ಅಂತೂ ಇವರ ವಿಡಿಯೋ ಇದೀಗ ಇನ್​ಸ್ಟಾಗ್ರಾಂನ ಗೋಡೆಗೆ ಅಂಟಿಸಲ್ಪಟ್ಟಿದೆ.

ಈ ವಿಡಿಯೋ ಅನ್ನು ನೆಟ್ಟಿಗರು ಬಹಳ ಕುತೂಹಲ ಮತ್ತು ಪ್ರೀತಿಯಿಂದ ನೋಡುತ್ತಿದ್ದಾರೆ. ಆಹಾ ಎಂಥಾ ಬುದ್ಧಿವಂತ ಪ್ರಾಣಿ ಇದು ಎಂದು ಪ್ರಶಂಸಿಸಿದ್ದಾರೆ. ಹೇಳಿಕೇಳಿ ನಾಯಿ. ಮುಕ್ತವಾಗಿ ಓಡಾಡಿಕೊಳ್ಳಲು ಇಷ್ಟಪಡುತ್ತದೆ. ಆದರೆ ಹೀಗೆ ಉಚಿತವಾಗಿ ರೈಲುಪ್ರಯಾಣವನ್ನು ಆಯ್ಕೆ ಮಾಡಿಕೊಂಡಿದೆ ಎಂದರೆ ಇದು ಸಾಮಾನ್ಯವಾದ ನಾಯಿಯಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು

ನಾಯಿಗಳು ವಿಶ್ವಾಸ ಮತ್ತು ನಿಷ್ಠೆಗೆ ಹೆಸರುವಾಸಿ. ಶಾಂತಿಯುತವಾಗಿ ಬಾಳ್ವೆ ನಡೆಸಲು ಇಷ್ಟಪಡುತ್ತವೆ. ಈ ವಿಡಿಯೋದಲ್ಲಿ ಇದರ ಮುಖ ನೋಡುತ್ತಿದ್ದರೆ ನನಗಂತೂ ಮನಸ್ಸು ತುಂಬಿಬರುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನೋಡಿ ಬೀದಿನಾಯಿಯಾದರೂ ಎಂಥಾ ಶಾಂತತೆಯಿಂದ ಇದು ವರ್ತಿಸಿದೆ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಇವನನ್ನು ನೋಡಿದ್ದೇನೆ. ರಾತ್ರಿ ಅಂಧೇರಿಗೆ ಹೋಗುತ್ತಾನೆ. ಬಹಳ ಬುದ್ಧಿವಂತನಿದ್ದಾನೆ ಎಂದಿದ್ಧಾರೆ ಮತ್ತೂ ಒಬ್ಬರು.

ಇದನ್ನೂ ಓದಿ : Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ‘ಫಾರೆಸ್ಟ್​ ಎಸೆನ್ಷಿಯಲ್;​ ಮಾಡೆಲ್

ಅನೇಕರು ಹೌದು ಈ ನಾಯಿಯನ್ನು ನಾನು ಈ ಟ್ರೇನಿನಲ್ಲಿ ನೋಡಿದ್ದೇನೆ. ಆದರೆ ಇವ ಯಾಕಾಗಿ ಹೀಗೆ ನಿಯಮಿತವಾಗಿ ಪ್ರಯಾಣಿಸುತ್ತಾನೆ ಕಾಣೆ ಎಂದಿದ್ದಾರೆ. ನಿಮಗೇನಾದರೂ ಹೊಳೆಯುತ್ತದೆಯೋ ಇವ ಯಾಕೆ ಹೀಗೆ ಪ್ರಯಾಣಿಸುತ್ತಾನೆ ಎಂದು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:37 pm, Mon, 22 May 23

TV9 Web

TV9 Kannada

Read More
Loading...
Unable to load recommendations.
Follow Us