Viral Video : ಸಾಮಾನ್ಯವಾಗಿ ಪ್ರಾಣಿಗಳು ಹಗಲುಹೊತ್ತು ಮಲಗುತ್ತವೆ. ಅದರಲ್ಲೂ ಹುಲಿಗಳು ಹೆಚ್ಚೂಕಡಿಮೆ 18-20 ಗಂಟೆ ಮಲಗುತ್ತವೆ. ಉಳಿದಂತೆ ರಾತ್ರಿ ಹೊತ್ತು ಬೇಟೆಯಾಡುತ್ತವೆ. ಗಂಡುಹುಲಿ ಒಂದೇ ಬೇಟೆಯಾಡಿದರೆ, ಹೆಣ್ಣುಹುಲಿ ತನ್ನ ಮರಿಗಳೊಂದಿಗೆ ಬೇಟೆಯಾಡುತ್ತದೆ. ಎಂಥ ಸಂದರ್ಭದಲ್ಲಿಯೂ ಏಕಾಂಗಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಾಯಿಹುಲಿ ಈ ಮೂಲಕ ಮಕ್ಕಳಿಗೆ ಕಲಿಸಿಕೊಡುತ್ತದೆ. ತನ್ನಷ್ಟಕ್ಕೆ ತಾನು ಬೇಟೆಯಾಡುವುದು ಬೇರೆ. ತಾನೂ ಆಡುತ್ತ, ತನ್ನ ಮಕ್ಕಳಿಗೂ ಕಲಿಸುವ ಜವಾಬ್ದಾರಿ ಬೇರೆ. ಹೀಗಾದಾಗ ತಾಯಿಹುಲಿಗೆ ಹೆಚ್ಚು ವಿಶ್ರಾಂತಿ ಬೇಕಾಗುತ್ತದೆ. ಆದರೆ ಈ ಗಂಡುಹುಲಿಗೆ ಈ ಸೂಕ್ಷ್ಮ ಅರ್ಥವಾಗುವುದೇ ಇಲ್ಲ ಎನ್ನುವುದಕ್ಕೆ ಉದಾಹರಣೆ ಈ ವಿಡಿಯೋ. ಮಲಗಿರುವ ಹೆಣ್ಣು ಹುಲಿಯನ್ನು ಎಬ್ಬಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡಿ.
Her: wake me up in an hour pls
ಇದನ್ನೂ ಓದಿMe: *wakes her up in an hour*
Her: pic.twitter.com/4SQpsyRPbO
— Lance ?? (@BornAKang) September 19, 2022
ಈ ಹೆಣ್ಣುಹುಲಿ ಶಾಂತವಾಗಿ ಕೊಳದ ಬಳಿ ಮಲಗಿದೆ. ಆದರೆ ಈ ಗಂಡುಹುಲಿ ಹೋಗಿ ಎಬ್ಬಿಸಿಬಿಟ್ಟಿದೆ. ಮಲಗಿದವರನ್ನು ಎಬ್ಬಿಸಿದರೆ ಇನ್ನೇನಾಗಬೇಡ!? ಹೆಣ್ಣುಹುಲಿ ಅಬ್ಬರಿಸಿ ಮೇಲೇರಿ ಹೋದ ರೀತಿಗೆ ಗಂಡುಹುಲಿ ನಿರುಪಾಯ ಸ್ಥಿತಿಗೆ ತಲುಪುತ್ತದೆ. ಸುಮ್ಮನೆ ಕೊಳದ ಬಳಿ ನೀರು ಕುಡಿಯುವಂತೆ ನಟಿಸಲು ಪ್ರಯತ್ನಿಸುತ್ತದೆ.
ಈ ದೃಶ್ಯವನ್ನು 2016ರಲ್ಲಿ ಐರ್ಲೆಂಡಿನ ಡಬ್ಲಿನ್ ಝೂನಲ್ಲಿ ಸೆರೆಹಿಡಿಯಲಾಗಿದೆ. ಇದೀಗ 14.8 ಮಿಲಿಯನ್ ವೀಕ್ಷಕರನ್ನು ತಲುಪಿದೆ. 569 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಜೀವನದಲ್ಲಿ ಇನ್ನೆಂದೂ ಮಲಗಿರುವ ಹೆಣ್ಣುಹುಲಿಯನ್ನು ಎಬ್ಬಿಸಬಾರದೆಂಬ ಪಾಠವನ್ನು ಈ ಗಂಡುಹುಲಿ ಕಲಿತಿರಲು ಸಾಕು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ