ಟಿಕ್‌ಟಾಕ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಬೇರೆ ದೇಶದಲ್ಲಿ ಇನ್ನೂ ಈ ಆ್ಯಪ್ ಚಾಲ್ತಿಯಲ್ಲಿದೆ. ಟಿಕ್‌ಟಾಕ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳೂ ಇವೆ. ಈ ಆ್ಯಪ್ ಕೇವಲ ಯುವಪೀಳಿಗೆಗೆ ಮಾತ್ರವಲ್ಲದೆ ಎಲ್ಲ ವರ್ಗದವರಿಗೂ ಗೀಳು ಹಿಡಿಸಿದೆ. ಆಸ್ಟ್ರೇಲಿಯಾದಲ್ಲಿ ಟಿಕ್‌ಟಾಕ್ ಚಟವು ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್ ವೃತ್ತಿಜೀವನವನ್ನೇ ಹಾಳು ಮಾಡಿದೆ. ಸರ್ಜರಿ ಮಾಡುವಾಗ ಮಧ್ಯದಲ್ಲಿ ಟಿಕ್‌ಟಾಕ್ ವಿಡಿಯೋ ಅಪ್ಲೋಡ್ ಮಾಡಿದ್ದರಿಂದ ಅವರನ್ನು ಕೆಲಸದಿಂದ ತೆಗೆಯಲಾಗಿದೆ.
ಟಿಕ್‌ಟಾಕ್ ಪ್ಲಾಟ್‌ಫಾರ್ಮ್‌ನಲ್ಲಿ 13 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಡಾ. ಡೇನಿಯಲ್ ಅರೋನೊವ್, ಇನ್ನು ಮುಂದೆ ಪ್ಲಾಸ್ಟಿಕ್ ಸರ್ಜನ್ ಆಗಿ ಪ್ರಾಕ್ಟೀಸ್ ಸಾಧ್ಯವಿಲ್ಲ. ಡಾಕ್ಟರ್ ಸದಾ ಟಿಕ್ಟಾಕ್ನಲ್ಲಿ ಬ್ಯುಸಿಯಾಗಿರುತ್ತಾರೆ ಎಂದು ಹಲವಾರು ರೋಗಿಗಳು ದೂರು ನೀಡಿದ ನಂತರ ಆಡಳಿತ ಸಂಸ್ಥೆಯಾದ ಆಸ್ಟ್ರೇಲಿಯನ್ ಹೆಲ್ತ್ ಪ್ರಾಕ್ಟೀಷನರ್ ರೆಗ್ಯುಲೇಶನ್ ಏಜೆನ್ಸಿ (AHPRA) ಆ ಡಾಕ್ಟರ್ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡುವಂತಿಲ್ಲ ಎಂದು ನಿರ್ಬಂಧಿಸಿದೆ.
ಪ್ಲಾಸ್ಟಿಕ್ ಸರ್ಜರಿ ಮಾಡುತ್ತಿದ್ದಾಗ ಟಿಕ್‌ಟಾಕ್ ಮಾಡಲೆಂದು ಅರ್ಧದಲ್ಲೇ ಸರ್ಜರಿಯನ್ನು ನಿಲ್ಲಿಸಿದ್ದಾರೆ ಎಂದು ವೈದ್ಯರ ಮೇಲೆ ಆರೋಪಿಸಲಾಗಿದೆ. ಅರೋನೊವ್ ಟಿಕ್ಟಾಕ್ನಲ್ಲಿ ಬಹಳ ಪ್ರಸಿದ್ಧಿ ಪಡೆದವರು. ಪ್ಲಾಸ್ಟಿಕ್ ಸರ್ಜರಿ ನಡುವೆಯೂ ಅವರು ಬ್ರೇಕ್ ತೆಗೆದುಕೊಂಡು ಶಾರ್ಟ್ ಡ್ಯಾನ್ಸ್ ವಿಡಿಯೋಗಳನ್ನು ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಸರ್ಜರಿ ನಡುವೆಯೇ ತಮ್ಮ ವಿಡಿಯೋಗೆ ಬಂದ ಕಮೆಂಟ್ಗಳನ್ನು ಓದುತ್ತಿದ್ದರು.
ಆದರೆ, ಜಾಕಿ ಎಂಬ ರೋಗಿ ವೈದ್ಯರ ಈ ವರ್ತನೆ ಬಗ್ಗೆ ದೂರು ನೀಡಿದ್ದಾರೆ. ಆಕೆ ಫೇಸ್‌ಲಿಫ್ಟ್‌ಗಾಗಿ ಅರೋನೊವ್ ಬಳಿ ಹೋದ ನಂತರ ಅವಳಿಗೆ ನೋವು ಮತ್ತು ಗಲ್ಲದಲ್ಲಿ ಒಂದು ಗಡ್ಡೆ ಉಳಿದಿತ್ತು. ಆಕೆಯ ಸರ್ಜರಿಯನ್ನು ಮಾಡುತ್ತಿದ್ದಾಗ ಮಧ್ಯದಲ್ಲೇ ಸರ್ಜರಿ ನಿಲ್ಲಿಸಿ ಟಿಕ್‌ಟಾಕ್ ವಿಡಿಯೋವನ್ನು ಚೆಕ್ ಮಾಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ. ಅಲ್ಲದೆ, ಅರೋನೋವ್ ತನ್ನ ಅನುಮತಿಯಿಲ್ಲದೆ ತನಗೆ ಸರ್ಜರಿ ಮಾಡುತ್ತಿದ್ದ ವಿಡಿಯೋ ತುಣುಕನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ಕೂಡ ಆಕೆ ಆರೋಪಿಸಿದ್ದಾಳೆ.
ಇದನ್ನೂ ಓದಿ: Shocking Video: ರೆಸ್ಟೋರೆಂಟ್ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!
ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್
Published On - 8:18 pm, Tue, 30 November 21