No Boss: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ

ಆರು ಮಂದಿ ಉದ್ಯೋಗಿಗಳ ತಂಡದ ಜವಾಬ್ದಾರಿ ಒಬ್ಬ ಕೋಚ್​ಗೆ ನೀಡಲಾಗಿತ್ತು. ಮ್ಯಾನೇಜರ್​ಗಳಾದರೆ ತಮ್ಮ ಮೇಲಿಂದ ಬಂದ ಆದೇಶವನ್ನು ತಮ್ಮ ಕೆಳಗಿನ ತಂಡದ ಸದಸ್ಯರಿಗೆ ತಲುಪಿಸಿ, ಡೆಡ್​ಲೈನ್ ನೀಡಿ ಕೆಲಸ ಮಾಡಲು ಆದೇಶಿಸುತ್ತಾರೆ. ಆದರೆ, ಕೋಚ್ ಪಾತ್ರ ವಿಭಿನ್ನ. ಅವರು ಉದ್ಯೋಗಿಗಳಿಗೆ ಶಕ್ತಿ ತುಂಬಿ ಅವರಿಗೆ ವಿವಿಧ ರೀತಿಯಲ್ಲಿ ಸಹಾಯಕರಾಗಿ ಗುರಿ ತಲುಪಿಸಬೇಕು.

No Boss: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ
ಉದ್ಯೋಗಿಗಳು
Edited By:

Updated on: Oct 12, 2026 | 1:20 PM

ಕೆಲಸ ಇಷ್ಟವಾದರೆ, ಕೆಲಸದ ವಾತಾವರಣ ಸರಿ ಇದ್ದರೆ ಎಷ್ಟು ಬೇಕಾದರೂ ಕೆಲಸ ಮಾಡ್ತೀನಪ್ಪ ಎಂದು ಬಹಳ ಮಂದಿ ಹೇಳೋದನ್ನು ಕೇಳಿದ್ದೇವೆ. ಇವರು ಯಾವ ಕೆಲಸ ಕೊಟ್ಟರೂ ಹೀಗೇ ರಾಗ ಎಳೆಯೋದು ಎಂದು ಸುಮ್ಮನಾಗುವುದು ಕಷ್ಟ. ಕೆಟ್ಟ ಬಾಸ್​ಗಳ ಕಾಟದಿಂದ ಕೆಲಸ ಬದಲಿಸುವವರ ಸಂಖ್ಯೆ ಹೆಚ್ಚು ಎಂಬಂತಹ ವರದಿಯನ್ನು ಇತ್ತೀಚೆಗೆ ಟಿವಿ9ಪ್ರಕಟಿಸಿತ್ತು. ಬಾಸ್​ಗಳು ಸರಿ ಇದ್ದರೆ ಕೆಲಸ ಸರಿಹೋಗುತ್ತದಾ? ಈ ಪ್ರಶ್ನೆಗೆ ಉತ್ತರವಾಗಿ ಹೊಸ ವರದಿಯೊಂದು ಬಂದಿದ್ದು, ಅದರ ಪ್ರಕಾರ ಬಾಸ್​ಗಳೇ ಇಲ್ಲದ, ಅಂದರೆ ಮ್ಯಾನೇಜರ್​ಗಳೇ ಇಲ್ಲದ ಕಂಪನಿಯೊಂದರಲ್ಲಿ ಉದ್ಯೋಗಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರಂತೆ. ಟೈಮ್ ಇಟಿಸಿ ಕಂಪನಿಯಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ಅಗಿದೆಯಂತೆ. ಉದ್ಯೋಗಿಗಳ ಮಾತು ಕೇಳಿಕೊಂಡು ಮ್ಯಾನೇಜರ್ ಹುದ್ದೆಗಳನ್ನೇ ನಿಲ್ಲಿಸಿದ್ದರ ಫಲವಾಗಿ ಟೈಮ್ ಇಟಿಸಿ ಕಂಪನಿಯಲ್ಲಿ ಉತ್ಪಾದನೆ ಶೇ. 20ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಟೈಮ್ ಇಟಿಸಿಯಲ್ಲಿ ಮ್ಯಾನೇಜರ್ ಬದಲು ಕೋಚ್; ಹೊಸ ಕಾನ್ಸೆಪ್ಟ್

ಟೈಮ್ ಇಟಿಸಿ ಕಂಪನಿ ಮ್ಯಾನೇಜರ್ ಹುದ್ದೆ ಬದಲು ಕೋಚ್​ಗಳನ್ನು ನೇಮಕ ಮಾಡಿಕೊಂಡಿತ್ತು. ಇದರ ಹಿಂದಿರುವ ಕಾರಣವೂ ಅಮೋಘವಾದುದು. ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಇಂಟರ್ವ್ಯೂ ವೇಳೆ ಅವರಿಗೆಲ್ಲಾ ಒಂದು ಪ್ರಶ್ನೆ ಕೇಳಲಾಗಿತ್ತು. ಒಬ್ಬ ಮ್ಯಾನೇಜರ್​ನಿಂದ ನೀವು ಏನು ಅಪೇಕ್ಷಿಸುತ್ತೀರಿ ಎಂಬ ಪ್ರಶ್ನೆಯನ್ನು ನೇಮಕಾತಿ ವೇಳೆ ಅಭ್ಯರ್ಥಿಗಳಿಗೆ ಕೇಳಲಾಗಿತ್ತು. ಗುರಿ ನಿಗದಿ, ಫೀಡ್​ಬ್ಯಾಕ್, ವೈಯಕ್ತಿ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶ, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಹೀಗೆ ಬಹಳಷ್ಟು ಅಂಶಗಳ ಪಟ್ಟಿ ಬಂದಿತು. ಆಗ ಟೈಮ್ ಇಟಿಸಿ ರೆಕ್ರೂಟರುಗಳಿಗೆ ಅನಿಸಿದ್ದು, ಉದ್ಯೋಗಿಗಳಿಗೆ ಮ್ಯಾನೇಜರ್​ಗಿಂತ ಹೆಚ್ಚಾಗಿ ಒಬ್ಬ ಕೋಚ್​ನ ಅವಶ್ಯಕತೆ ಇದೆ ಎಂದು. ಕ್ರಿಕೆಟ್​ನಲ್ಲಿ ತಂಡಗಳಿಗೆ ಕೋಚ್ ಅಥವಾ ಮ್ಯಾನೇಜರ್ ಇರುವುದನ್ನು ನೋಡಿದ್ದೇವೆ. ಕಾರ್ಪೊರೇಟ್ ಕಂಪನಿಗಳಲ್ಲಿ ಈ ಕಾನ್ಸೆಪ್ಟ್ ಹೊಸದಿರಬಹುದು.

ಟೈಮ್ ಇಟಿಸಿಯಲ್ಲಿ ಕೋಚ್​ನಿಂದ ಏನು ಉಪಯೋಗ?

ಉದ್ಯೋಗಿಗಳ ಅಭಿಪ್ರಾಯದ ಮೇರೆಗೆ ಟೈಮ್ ಇಟಿಸಿ ಸಂಸ್ಥೆ ಮ್ಯಾನೇಜರ್ ಸ್ಥಾನಗಳಿಗೆ ಕೋಚ್​ಗಳನ್ನು ನೇಮಿಸಿತು. ಇಲ್ಲಿ ಕೋಚ್​ಗಳ ಕೆಲಸ ಎಂದರೆ ಉದ್ಯೋಗಿಗಳ ಉತ್ಪನ್ನಶೀಲತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವುದು, ಅವರು ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲಾಗುವಂತೆ ನೋಡಿಕೊಳ್ಳುವುದು. ಉದ್ಯೋಗಿಗಳ ವೈಯಕ್ತಿಕ ಮಟ್ಟದಲ್ಲಿ ಅವರ ಸಾಮರ್ಥ್ಯ, ಕೌಶಲ್ಯ ಇತ್ಯಾದಿ ಹೆಚ್ಚಿಸುವ ಜವಾಬ್ದಾರಿ ಕೋಚ್​ಗಳದ್ದಾಗಿರುತ್ತದೆ.

ಆರು ಮಂದಿ ಉದ್ಯೋಗಿಗಳ ತಂಡದ ಜವಾಬ್ದಾರಿ ಒಬ್ಬ ಕೋಚ್​ಗೆ ನೀಡಲಾಗಿತ್ತು. ಮ್ಯಾನೇಜರ್​ಗಳಾದರೆ ತಮ್ಮ ಮೇಲಿಂದ ಬಂದ ಆದೇಶವನ್ನು ತಮ್ಮ ಕೆಳಗಿನ ತಂಡದ ಸದಸ್ಯರಿಗೆ ತಲುಪಿಸಿ, ಡೆಡ್​ಲೈನ್ ನೀಡಿ ಕೆಲಸ ಮಾಡಲು ಆದೇಶಿಸುತ್ತಾರೆ. ಆದರೆ, ಕೋಚ್ ಪಾತ್ರ ವಿಭಿನ್ನ. ಅವರು ಉದ್ಯೋಗಿಗಳಿಗೆ ಶಕ್ತಿ ತುಂಬಿ ಅವರಿಗೆ ವಿವಿಧ ರೀತಿಯಲ್ಲಿ ಸಹಾಯಕರಾಗಿ ಗುರಿ ತಲುಪಿಸಬೇಕು.

ಇದೊಂದು ತಂತ್ರ ಟೈಮ್ ಇಟಿಸಿಗೆ ವರ್ಕೌಟ್ ಆಯಿತು. ಕೆಲವೇ ದಿನಗಳಲ್ಲಿ ಸಂಸ್ಥೆಯ ಉದ್ಯೋಗಿಗಳ ಕಾರ್ಯದಕ್ಷತೆ ಹೆಚ್ಚಿತು, ಉತ್ಪನ್ನಶೀಲತೆಯೂ ವೃದ್ಧಿಸಿತು.

Published On - 4:26 pm, Tue, 13 June 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us