Toxic Work Culture: ಕೆಲಸದ ಸ್ಥಳದಲ್ಲಿ ಸ್ನೇಹ ಬೇಡ; ಬಾಸ್ ಕಳಿಸಿದ ಮೆಮೊ ಎಲ್ಲೆಡೆ ವೈರಲ್!

|

Updated on: May 04, 2023 | 12:32 PM

ಉದ್ಯೋಗದಾತರು ತಮ್ಮ ಉದ್ಯೋಗಿಗಳು ಕೆಲಸದಲ್ಲಿ 'ಮೋಜು' ಮಾಡುವುದನ್ನು ತಡೆಯಲು ಮೆಮೋವನ್ನು ಕಳುಹಿಸಿದ್ದಾರೆ, 'ಮಜಾ ಮಾಡಲು ಕೆಲಸಕ್ಕೆ ಬರುವುದಲ್ಲ' ಮತ್ತು ಉದ್ಯೋಗಿಗಳು ಕೆಲಸದ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ಸ್ನೇಹ ಬೆಳೆಸಬಾರದು ಎಂದು ಹೇಳಿದ್ದಾರೆ. ಈ ಮೆಮೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Toxic Work Culture: ಕೆಲಸದ ಸ್ಥಳದಲ್ಲಿ ಸ್ನೇಹ ಬೇಡ; ಬಾಸ್ ಕಳಿಸಿದ ಮೆಮೊ ಎಲ್ಲೆಡೆ ವೈರಲ್!
ಮೆಮೊ
Follow us on

ಕೆಲಸದ ಸಂಸ್ಕೃತಿ (Work Culture) ಮತ್ತು ನಿರೀಕ್ಷೆಗಳು ಒಂದು ಕಂಪನಿಯಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಆದಾಗ್ಯೂ, ಜಗತ್ತಿನಾದ್ಯಂತ ಅನೇಕರು ಆರೋಗ್ಯಕರ ಕೆಲಸದ ಸಂಸ್ಕೃತಿಯ (Healthy Work Culture) ಪ್ರಾಮುಖ್ಯತೆಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಅದು ಉದ್ಯೋಗಿಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಅರ್ಥ ಮಾಡಿಸುತ್ತಿದ್ದಾರೆ. ಆದರೆ ಇಂತಹ ಯುಗದಲ್ಲೂ ಅಸಂಬದ್ಧ ಆಚರಣೆಗಳನ್ನು ಉದ್ಯೋಗಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಟಾಕ್ಸಿಕ್ ಉದ್ಯೋಗದಾತರು (Toxic Boss) ಇದ್ದಾರೆ. ಇತ್ತೀಚಿನ ರೆಡ್ಡಿಟ್ ಪೋಸ್ಟ್ ಅದಕ್ಕೆ ಸಾಕ್ಷಿಯಾಗಿದೆ.

ಈ ಕಂಪನಿಯ ಉದ್ಯೋಗಿಗಳು ತಮ್ಮ ಬಾಸ್ ಕಳುಹಿಸಿದ ಮೆಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಮೆಮೊ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಲ್ಲಿ “ಮೋಜು” ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಟಿಪ್ಪಣಿಯಲ್ಲಿ, “ಉದ್ಯೋಗಿಗಳ ಗಮನಕ್ಕೆ, ಮೋಜಿಗಾಗಿ ನೀವು ಕೆಲಸ ಮಾಡಲು ಬರುತ್ತಿಲ್ಲ. ಕೆಲಸದ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸದ ಮಾತುಗಳನ್ನು ಆಡುವುದು ಬೇಡ. ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಳ್ಳಿ ಮತ್ತು /ಅಥವಾ ಕೆಲಸ ಪೂರ್ಣಗೊಂಡ ನಂತರ ಹ್ಯಾಂಗ್ ಔಟ್ ಮಾಡಿ. ಸಹೋದ್ಯೋಗಿಯೊಬ್ಬರು ಕೆಲಸದ ಸಮಯದಲ್ಲಿಬೇರೆ ವಿಷಯಗಳ ಚರ್ಚೆಗಳನ್ನು ನಡೆಸುತ್ತಿದ್ದರೆ ನನ್ನನ್ನು ಸಂಪರ್ಕಿಸಿ. ಕೆಲಸವು ನಿಮ್ಮ ಡೇಕೇರ್ ಅಲ್ಲ.” ಎಂದು ಬರೆದಿದ್ದಾರೆ.

ಈ ಮೆಮೊಗೆ ಕಂಪನಿಯ ಬಾಸ್ ಸಹಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬರು, “ಅವರಿಗೆ ಉತ್ತರಿಸಿ: ಈ ಪೋಸ್ಟರ್‌ನಲ್ಲಿ ಮಿನಿಯನ್ ಅನ್ನು ಹಾಕಬೇಡಿ, ನೀವು ಪೋಸ್ಟರ್ ಅನ್ನು ತುಂಬಾ ಆನಂದಿಸುತ್ತಿದ್ದೀರಿ ಆದರೆ ನಮಗೆ ಹಾಗೆ ಅನಿಸುತ್ತಿಲ್ಲ.” ಎಂದರೆ, ಇನ್ನೊಬ್ಬರು “ಬಾಸ್ ಗಮನಕ್ಕೆ, ಕೆಲಸದ ಸ್ಥಳದಲ್ಲಿ ಗಂಭೀರ ವ್ಯವಹಾರ ನಡೆಯುತ್ತದೆ. ದಯವಿಟ್ಟು ನಿಮ್ಮ ಮೆಮೊ ಅಲ್ಲಿ ಕಾರ್ಟೂನ್‌ಗಳನ್ನು ಬಳಸಬೇಡಿ. ನೀವು ಗ್ರಾಫಿಕ್ಸ್ ಅನ್ನು ಸೇರಿಸಬೇಕಾದರೆ, ಏಕವರ್ಣದ ಲೋಗೋವನ್ನು ಬಳಸಿ.” ಎಂದು ವ್ಯಂಗ್ಯ ಮಾಡಿದ್ದಾರೆ.

ಟಾಕ್ಸಿಕ್ ಮೇಲಧಿಕಾರಿಗಳೊಂದಿಗೆ ಕೆಲಸ ಮಾಡಬೇಕಾದ ಅನುಭವಗಳನ್ನು ಹಲವರು ಹಂಚಿಕೊಂಡಿದ್ದಾರೆ. “ನಾನು ಈ ರೀತಿಯ ಮೇಲಧಿಕಾರಿಗಳನ್ನು ಹೊಂದಿದ್ದೇನೆ, ಇದರಿಂದ ಬಹಳಷ್ಟು ಆತಂಕಕ್ಕೆ ಒಳಗಾಗುತ್ತಿದ್ದೇನೆ. ನಾನು ಒಂದು ವಿಭಾಗದ ಉಸ್ತುವಾರಿಯನ್ನು ಹೊಂದಿದ್ದೇನೆ, ನನ್ನ ಪ್ರಕಾರ ನಿಮ್ಮ ಕೆಲಸಗಾರರು ತಮ್ಮ ಕೆಲಸದ ಪರಿಸರವನ್ನು ಆನಂದಿಸಿದರೆ ಉತ್ಪಾದಕತೆಯು ಹೆಚ್ಚುತ್ತದೆ.” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದಾದ ಈ ಸಿಂಹದಮರಿ ನನಗೆ ಬೇಕು! ಕಾಡಿನಂಚಿನಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ ನೆಟ್ಟಿಗರು

ಇನ್ನೊಬ್ಬರು, “ನಾನು ಪ್ರತಿದಿನ ಇದನ್ನು ನಿಭಾಯಿಸುತ್ತಿದ್ದೇನೆ. ಅವರು ಯಾವ ಕೆಲಸವನ್ನು ಸರಿಯಾಗಿ ಮಾಡದೆ ಇತರರ ಕೆಲಸವನ್ನು ದೂರುತ್ತಾರೆ. ಮೊದಮೊದಲು ನಂಗೆ ಬಹಳಾ ಕೋಪ ಬರುತ್ತಿತ್ತು, ಆದರೆ ಈಗ ನಾನು ನಗುತ್ತೇನೆ ಮತ್ತು ನನ್ನ ಪಾಲಿನ ಕೆಲಸ ಮಾತ್ರ ಮಾಡುತ್ತೇನೆ.” ಎಂದು ಬರೆದುಕೊಂಡಿದ್ದಾರೆ.