ಏಜ್ ಈಸ್ ಜಸ್ಟ್ ಎ ನಂಬರ್: ಫುಟ್​ಬಾಲ್ ಬ್ಯಾಲೆನ್ಸ್ ಮಾಡಿದ 64 ವರ್ಷದ ವೃದ್ಧ! ವಿಡಿಯೋ ವೈರಲ್

ತಲೆಯಲ್ಲಿ ಅಲ್ಪ ಸ್ವಲ್ಪ ಬಿಳಿ ಕೂದಲು, ಗಾಂಭೀರ್ಯತೆ ಮೆರೆಯಲು ಬಿಳಿ ಮೀಸೆ. ಇಂಥ ವಯಸ್ಸಿನಲ್ಲೂ ಫುಟ್​ಬಾಲ್ ಕೌಶಲ್ಯ ಪ್ರದರ್ಶನ ಮಾಡಿದ 64 ವರ್ಷದ ವೃದ್ಧನ ಉತ್ಸಾಹಭರಿತ ವಿಡಿಯೋ ವೈರಲ್ ಆಗುತ್ತಿದೆ.

ಏಜ್ ಈಸ್ ಜಸ್ಟ್ ಎ ನಂಬರ್: ಫುಟ್​ಬಾಲ್ ಬ್ಯಾಲೆನ್ಸ್  ಮಾಡಿದ 64 ವರ್ಷದ ವೃದ್ಧ! ವಿಡಿಯೋ ವೈರಲ್
ಫುಟ್​ಬಾಲ್ ಕೌಶಲ್ಯ ಪ್ರದರ್ಶಿಸಿದ ಜೇಮ್ಸ್
Image Credit source: Instagram
Updated By: Rakesh Nayak Manchi

Updated on: Jun 17, 2022 | 12:42 PM

ತಲೆಯಲ್ಲಿ ಅಲ್ಪ ಸ್ವಲ್ಪ ಬಿಳಿ ಕೂದಲು, ಗಾಂಭೀರ್ಯತೆ ಮೆರೆಸುವಂತಿರುವ ಮೀಸೆ, ವಯಸ್ಸು 64. ಆದರೂ ಉತ್ಸಾಹ ಭರಿತ ಜೀವನ, ಇವರ ಉತ್ಸಾಹದ ಎದುರು ವಯಸ್ಸು ಕೇವಲ ಸಂಖ್ಯೆಯಷ್ಟೆ. ಜೀವನದಲ್ಲಿ ಉತ್ಸಾಹ ಒಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ವೃದ್ಧನೇ ಸಾಕ್ಷಿ. ಫುಟ್​ಬಾಲ್ ಅನ್ನು ಬ್ಯಾಲೆನ್ಸ್ ಮಾಡುತ್ತಿರುವ ಕೇರಳ ಮೂಲದ ಈ ವೃದ್ಧನ ವಿಡಿಯೋ ಜೀವನದಲ್ಲಿ ನಮ್ಮಿಂದ ಏನೂ ಕಿಸಿಯಲು ಸಾಧ್ಯವಿಲ್ಲ, ನಮ್ಮಿಂದ ಇದಾಗದು ಎಂದು ಅಂದುಕೊಂಡಿರುವ ವ್ಯಕ್ತಿಗಳಿಗೆ ಜ್ಞಾನೋದಯ ಮಾಡಿದರೂ ಆಶ್ವರ್ಯಪಡಬೇಕಿಲ್ಲ.

ಇದನ್ನೂ ಓದಿ: Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ

ಯಾರೇ ಆಗಲಿ ಒಬ್ಬ ವ್ಯಕ್ತಿ ಸಾಮರ್ಥ್ಯವನ್ನು ಅವರ ವಯಸ್ಸಿನಿಂದ ಅಳೆಯಬಾರದು. ಏಕೆಂದರೆ ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಸಾಮರ್ಥ್ಯ, ಕೌಶಲ್ಯವಿರುತ್ತದೆ. ಇದನ್ನು ವ್ಯಕ್ತಪಡಿಸಲು ವೇದಿಕೆಯ ಅವಶ್ಯಕತೆ ಇದೆ. ನಾವೀಗ ಹೇಳಲು ಹೊರಟಿರುವುದು ತಮ್ಮ ಅದ್ಭುತ ಫುಟ್​ಬಾಲ್ ಕೌಶಲ್ಯದಿಂದ ಇಂಟರ್ನೆಟ್​ನಲ್ಲಿ ಸಂಚಲನ ಮೂಡಿಸಿರುವ ಜನರ ಗಮನಸೆಳೆಯುಂತೆ ಮಾಡಿದ ಕೇರಳ ಮೂಲದ 64 ವರ್ಷದ ವೃದ್ಧನ ಕಥೆ.

ಇದನ್ನೂ ಓದಿ: Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್

ವೈರಲ್ ವಿಡಿಯೋ (Viral Video)ದಲ್ಲಿ, ಯೂಟ್ಯೂಬರ್ ಪ್ರದೀಪ್ ತನ್ನ ಫುಟ್​ಬಾಲ್ ಕೌಶಲ್ಯವನ್ನು ತೋರಿಸುವುದರ ಮೂಲಕ ವಿಡಿಯೋ ಪ್ರಾರಂಭಿಸಿದ್ದಾರೆ. ನಂತರ ಆ ಬಾಲ್​ ಅನ್ನು ಜೇಮ್ಸ್​ ಅವರಿಗೆ ಪಾಸ್ ಮಾಡುತ್ತಾರೆ. ಅವರು ಕಾಲಿನಲ್ಲಿ ಫುಟ್​ಬಾಲ್​ ಅನ್ನು ಬ್ಯಾಲೆನ್ಸ್ ಮಾಡುತ್ತಾ ಹಾಗೇ ತಲೆಗೆ ಪಾಸ್ ಮಾಡುತ್ತಾರೆ. ನಂತರ ಕೆಲವು ಸೆಕೆಂಡ್​ಗಳ ಕಾಲ ತಲೆ ಮೇಲೆ ಬಾಲ್ ನಿಲ್ಲಿಸುತ್ತಾರೆ. ಬಳಿಕ ಭುಜದಿಂದ ಬಾಲ್​ ಮೇಲಕ್ಕೆ ಹಾರಿಸುತ್ತಾ ಮತ್ತೆ ಹಣೆ ಮೇಲೆ ಬ್ಯಾಲೆನ್ಸ್ ಮಾಡುವುದನ್ನು ಕಾಣಬಹುದು.

ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಭಾರಿ ವೈರಲ್ ಆಗಿ 6 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಜೇಮ್ಸ್ ಅವರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ