Viral Video: ಗೋವಾ ಬೀಚ್​ನಲ್ಲಿ ಕಾರ್​ ರೈಡಿಂಗ್ ಮಾಡಿ ತಗಲಾಕೊಂಡ ಪ್ರವಾಸಿಗ! ಮುಂದಾಗಿದ್ದೇ ಸಂಕಷ್ಟದ ಮೇಲೊಂದು ಸಂಕಷ್ಟ!

ದೆಹಲಿಯ ಪ್ರವಾಸಿಗನೊಬ್ಬ ಗೋವಾ ಬೀಚ್​​ನಲ್ಲಿ ಕಾರು ಮೂಲಕ ಸಾಹಸ ಮಾಡಲು ಹೋಗಿ ತಗಲಾಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ಮುಂದೆ ಮತ್ತೊಂದು ಸಂಕಷ್ಟವನ್ನು ಆ ಕಾರು ಚಾಲಕ ಎದುರಿಸುವಂತಾಗಿದೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

Viral Video: ಗೋವಾ ಬೀಚ್​ನಲ್ಲಿ ಕಾರ್​ ರೈಡಿಂಗ್ ಮಾಡಿ ತಗಲಾಕೊಂಡ ಪ್ರವಾಸಿಗ! ಮುಂದಾಗಿದ್ದೇ ಸಂಕಷ್ಟದ ಮೇಲೊಂದು ಸಂಕಷ್ಟ!
ಗೋವಾ ಬೀಚ್​ನಲ್ಲಿ ಪ್ರವಾಸಿಗನ ದುಸ್ಸಾಹಸ
Updated By: Rakesh Nayak Manchi

Updated on: Jun 23, 2022 | 10:31 AM

ಗೋವಾ ಬೀಚ್​ಗೆ ಯಾವುದೇ ಸೀಸನ್​ನಲ್ಲೂ ಡಿಮ್ಯಾಂಡ್ ಇದ್ದೇ ಇರುತ್ತದೆ. ಈ ಬೀಚ್​ಗೆ ಬರುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆ ಇಲ್ಲ. ದೇಶ ವಿದೇಶಗಳಿಂದಲೂ ಇಲ್ಲಿಗೆ ಭೇಟಿ ನೀಡುತ್ತಾರೆ. ಅದೇ ರೀತಿ ದೆಹಲಿಯ ಪ್ರವಾಸಿಗನೊಬ್ಬ ಗೋವಾ ಬೀಚ್​ಗೆ ಎಸ್​ಯುವಿ ಕಾರಿನಲ್ಲಿ ಆಗಮಿಸಿದ್ದಾನೆ. ಹೀಗೆ ಕಾರನ್ನು ಚಲಾಯಿಸುತ್ತಾ ಆನಂದಿಸುತ್ತಿದ್ದಾಗ ಪ್ರವಾಸಿಗ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಕಾರು ಚಾಲಕನ ವಿರುದ್ಧ ಕ್ರಮಕ್ಕೆ  ನೆಟ್ಟಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral Video: ಮನುಷ್ಯರಂತೆ ಕಾರು ರೈಡಿಂಗ್​ನಲ್ಲಿ ಸಾಹಸ ಮಾಡಿದ ಗಿಳಿ, ‘ಸೂಪರ್ ಹೀರೋ’ ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿ ಇರುವಂತೆ,  ಗೋವಾ ಬೀಚ್​ನ ತೀರದ ನೀರಿನಲ್ಲಿ ದೆಹಲಿಯ ಪ್ರವಾಸಿಗ ಕಾರನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಹೀಗೆ ರೈಡಿಂಗ್ ಆನಂದಿಸುತ್ತಿದ್ದಾಗ ಕಾರು ಮರಳಿನಲ್ಲಿ ಹೂತುಕೊಂಡಿದೆ ಮತ್ತು ಕಾರನ್ನು ಪ್ರವಾಸಿಗರು ಮರಳಿನಿಂದ ಮೇಲಕ್ಕೆ ಎತ್ತುವುದು ಕಂಡುಬಂದಿದೆ. ಈ ಸಂಕಷ್ಟದ ನಡುವೆ ಮತ್ತೊಂದು ಸಂಕಷ್ಟವನ್ನು ಕಾರು ಚಾಲಕ ಎದುರಿಸಿದ್ದಾನೆ.

ಇದನ್ನೂ ಓದಿ: Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?

ಬೀಚ್​ನಲ್ಲಿ ಕಾರಿನಲ್ಲಿ ದುಸ್ಸಾಹ ಮಾಡಿದ ಕಾರು ಚಾಲಕ ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೂ.16ರಂದು ಕಾರನ್ನು ವಶಕ್ಕೆ ಪಡೆದ ಪೊಲೀಸರು ಎಸ್​ಯುವಿ ಮಾಲೀಕರಾದ ಸಂಗೀತಾ ಗವಡಾಲ್ಕರ್ ವಿರುದ್ಧ ರಾಜ್ಯದ ಮಾಪುಸಾದಿಂದ ಪ್ರಾದೇಶಿಕ ಸಾರಿಗೆ ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕ ಜಿವ್ಬಾ ದಳವಿ ಅವರು ಐಎಎನ್​ಎಸ್​ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರವಾಸಿಗರ ಕೃತ್ಯವನ್ನು ಟೀಕಿಸಿದ ನೆಟ್ಟಿಗರು, ಬೇಜವಾಬ್ದಾರಿ ಮತ್ತು ನಾಚಿಗೇಡು ಎಂದು ಜರಿದಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ”ಅವರು ಪಾಠವನ್ನು ಕಲಿತಿದ್ದಾರೆ ಮತ್ತು ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, “ಕರ್ಮವು ತಕ್ಷಣವೇ ಪ್ರತಿಕ್ರಿಯಿಸಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 23 June 22