Viral Video: ಮನುಷ್ಯರಂತೆ ಕಾರು ರೈಡಿಂಗ್​ನಲ್ಲಿ ಸಾಹಸ ಮಾಡಿದ ಗಿಳಿ, ‘ಸೂಪರ್ ಹೀರೋ’ ವಿಡಿಯೋ ವೈರಲ್

ಮನುಷ್ಯರು ವಾಹನಗಳ ರೈಡಿಂಗ್ ವೇಳೆ ಯಾವ ರೀತಿ ಆನಂದಿಸುತ್ತಾ ಸಾಹಸ ಮಾಡುತ್ತಾರೋ ಅದೇ ರೀತಿ ಗಿಳಿಯೊಂದು ಸಾಹಾಸ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿ.

Viral Video: ಮನುಷ್ಯರಂತೆ ಕಾರು ರೈಡಿಂಗ್​ನಲ್ಲಿ ಸಾಹಸ ಮಾಡಿದ ಗಿಳಿ, 'ಸೂಪರ್ ಹೀರೋ' ವಿಡಿಯೋ ವೈರಲ್
ಸಾಹಸ ಮಾಡಿದ ಗಿಳಿ
Follow us
TV9 Web
| Updated By: Rakesh Nayak Manchi

Updated on:Jun 23, 2022 | 9:41 AM

ಕೆಲವು ಸಾಕು ಪ್ರಾಣಿಗಳು ಮನುಷ್ಯರಂತೆ ಭಾವನೆ, ವರ್ತನೆ ಹಾಗೂ ಸಾಹಸಗಳನ್ನು ಹೊಂದಿರುತ್ತದೆ. ಇದಕ್ಕೆ ನಿದರ್ಶನವೆಂಬಂತೆ, ಮನುಷ್ಯರು ವಾಹನಗಳ ರೈಡಿಂಗ್ ವೇಳೆ ಯಾವ ರೀತಿ ಆನಂದಿಸುತ್ತಾ ಸಾಹಸ ಮಾಡುತ್ತಾರೋ ಅದೇ ರೀತಿ ಗಿಳಿ (Parrot)ಯೊಂದು ಆನಂದಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಗಿಣಿಯ ಮುದ್ದಾದ ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಜನ್ಸ್ ಸಖತ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: Viral Video: ಚಾಕೊಲೇಟ್‌ನಿಂದ ತಯಾರಿಸಿದ ಡಾರ್ಟ್‌ಬೋರ್ಡ್‌! ಇಲ್ಲಿದೆ ನೋಡಿ ವಿಡಿಯೋ

ವೈರಲ್ ವಿಡಿಯೋದಲ್ಲಿ ಕಾಣಿಸುವಂತೆ, ಕಿಟಕಿ ತೆರೆದ ಕಾರಿನಲ್ಲಿ ಬಿಳಿ ಬಣ್ಣದ ಗಿಳಿಯೊಂದು ಸಾಹಾಸದ ರೀತಿಯಲ್ಲಿ ಕಿಟಕಿ ಹಿಡಿದುಕೊಂಡು ಗಾಳಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಗಿಳಿಯ ಮಾಲೀಕರು ಅದರ ಸುರಕ್ಷತೆಗಾಗಿ ಕಾಲಿಗೆ ಹಗ್ಗ ಕಟ್ಟಿರುವುದನ್ನು ಕೂಡ ನೋಡಬಹುದು.

View this post on Instagram

A post shared by Cutest.bird (@cutest.bird)

ಈ ವಿಡಿಯೋವನ್ನು ಫೆಬ್ರವರಿಯಲ್ಲಿ ಕೊಕೊಮಾಯಿಹವಾಯಿ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದು ವೈರಲ್ ಆಗುತ್ತಿದೆ. ಕ್ಯೂಟೆಸ್ಟ್ ಬರ್ಡ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಸೂಪರ್ ಹೀರೋ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, 1.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ 1.70 ಲಕ್ಷ ಲೈಕ್ಸ್​​ಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:41 am, Thu, 23 June 22