AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಾಕೊಲೇಟ್‌ನಿಂದ ತಯಾರಿಸಿದ ಡಾರ್ಟ್‌ಬೋರ್ಡ್‌! ಇಲ್ಲಿದೆ ನೋಡಿ ವಿಡಿಯೋ

ಈ ವಿಡಿಯೋದಲ್ಲಿ ಒಂದು ಅದ್ಭುತವನ್ನೇ ಅವರು ಸೃಷ್ಟಿ ಮಾಡಿದ್ದಾರೆ. ಜೊತೆಗೆ ಇದನ್ನು ಮಾಡುವಾಗ ತುಂಬಾ ಕಾಳಜಿಯಿಂದ ಮಾಡಿದ್ದಾರೆ. ಒಂದು ಪೆನ್ಸಿಲ್ ರೀತಿಯಲ್ಲಿ ಮಾಡಿ ಅದರ ಒಳಗಡ ಚಾಕೊಲೇಟ್‌ ತುಂಡುಗಳನ್ನು ಹಾಕಿ ಒಂದು ಡಾರ್ಟ್‌ಬೋರ್ಡ್‌ನ್ನು ಮಾಡಿದರೆ ಈ ವಿಡಿಯೋವನ್ನು ನೋಡಿದರೆ ನಿಮಗೆ ಅರ್ಥವಾಗಬಹುದು. 

Viral Video: ಚಾಕೊಲೇಟ್‌ನಿಂದ ತಯಾರಿಸಿದ ಡಾರ್ಟ್‌ಬೋರ್ಡ್‌! ಇಲ್ಲಿದೆ ನೋಡಿ ವಿಡಿಯೋ
ಚಾಕೊಲೇಟ್‌ನಿಂದ ತಯಾರಿಸಿದ ಡಾರ್ಟ್‌ಬೋರ್ಡ್‌
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 22, 2022 | 5:29 PM

Share

ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಸಖತ್ ವೈರಲ್ ಆಗುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ಕೂಡ ಆಗುತ್ತದೆ. ಒಂದು ವಿಡಿಯೋ ವೈರಲ್ ಆಗಬೇಕಾದರೆ ತುಂಬಾ ಜನ ಅದನ್ನು ನೋಡಬೇಕು ಮತ್ತು ಅದನ್ನು ಶೇರ್ ಮಾಡುವುದರ ಜೊತೆಗೆ ಅದನ್ನು ಮೆಚ್ಚಿಕೊಳ್ಳಬೇಕು ಏಕೆಂದರೆ ಆ ವಿಡಿಯೋ ನಮ್ಮ ಮನಸ್ಸಿಗೆ ಇಷ್ಟವಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರೂ ವೈರಲ್ ವಿಡಿಯೋಗಳನ್ನು  ಹಾಕಲಾಗುತ್ತದೆ. ಇಲ್ಲಿ ಯಾವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತದೆ ಅದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್, ಶೇರ್, ಕಮೆಂಟ್ ಗಳನ್ನು ಪಡೆಯುತ್ತದೆ. ಇದೆ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು ಚಾಕೊಲೇಟ್‌ನಿಂದ ಮಾಡಿದ ಡಾರ್ಟ್‌ಬೋರ್ಡ್ ಅನ್ನು ಈ ವಿಡಿಯೋದಲ್ಲಿ  ತೋರಿಸಲಾಗಿದೆ.   ಇದನ್ನು ಪೇಸ್ಟ್ರಿ ಬಾಣಸಿಗ ಅಮೌರಿ ಗುಯಿಚನ್ ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೋದಲ್ಲಿ,  ಈ ಡಾರ್ಟ್‌ಬೋರ್ಡ್‌ನ ವಿವಿಧ ಭಾಗಗಳನ್ನು ಚಾಕೊಲೇಟ್‌ನಿಂದ ತಯಾರಿಸಲಾಗಿದೆ ಮತ್ತು ಅವುಗಳನ್ನು ಒಂದರ ನಂತರ ಒಂದರಂತೆ ಜೋಡಿಸುವುದನ್ನು ಇಲ್ಲಿ ನೀವು ಕಾಣಬಹುದು. ವೀಡಿಯೊದ ಕೊನೆಯಲ್ಲಿ,ಅವರು ಬೋರ್ಡ್‌ಗೆ ಡಾರ್ಟ್ ಅನ್ನು ತುಂಡು ಮಾಡುವುದನ್ನು ಕಾಣಬಹುದು.  ಕೇವಲ ಒಂದೇ ದಿನದಲ್ಲಿ ಈ  ವೀಡಿಯೋ 7 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಮತ್ತು 6.3 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ನೋಡಿ ಅನೇಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?
Image
Viral News: ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!
Image
Viral Video: ಚಿಕ್ನಿ ಚಮೇಲಿ ಹಾಡಿಗೆ ಕತ್ರಿನಾ ಕೈಫ್ ಅವರಂತೆ ಹೆಜ್ಜೆ ಹಾಕಿದ ವಿದೇಶಿ ವಧು
Image
Viral Video: ಮಿಲಿಟರಿ ಡ್ರೆಸ್ ತೊಟ್ಟು ಮದುವೆಯಾದ ವಧು-ವರರು; ವೈರಲ್ ಆಯ್ತು ವಿಡಿಯೋ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಈ ವಿಡಿಯೋದಲ್ಲಿ ಒಂದು ಅದ್ಭುತವನ್ನೇ ಅವರು ಸೃಷ್ಟಿ ಮಾಡಿದ್ದಾರೆ. ಜೊತೆಗೆ ಇದನ್ನು ಮಾಡುವಾಗ ತುಂಬಾ ಕಾಳಜಿಯಿಂದ ಮಾಡಿದ್ದಾರೆ. ಒಂದು ಪೆನ್ಸಿಲ್ ರೀತಿಯಲ್ಲಿ ಮಾಡಿ ಅದರ ಒಳಗಡ ಚಾಕೊಲೇಟ್‌ ತುಂಡುಗಳನ್ನು ಹಾಕಿ ಒಂದು ಡಾರ್ಟ್‌ಬೋರ್ಡ್‌ನ್ನು ಮಾಡಿದರೆ ಈ ವಿಡಿಯೋವನ್ನು ನೋಡಿದರೆ ನಿಮಗೆ ಅರ್ಥವಾಗಬಹುದು.

ಇವರು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.  ಕಳೆದ ತಿಂಗಳು, ಅವರು ಚಾಕೊಲೇಟ್‌ನಿಂದ ಮಾಡಿದ ಜಿರಾಫೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. “ಚಾಕೊಲೇಟ್ ಜಿರಾಫೆ! ಇದು 8.3 ಅಡಿ ಎತ್ತರದ 100% ಚಾಕೊಲೇಟ್ ನಿಂದ ಜಿರಾಫೆ ಮಾಡಿದ್ದಾರೆ ಇದಕ್ಕೂ ಹೆಚ್ಚಿನ ಲೈಕ್ ಮತ್ತು ಕಮೆಂಟ್ ಗಳು ಬಂದಿದೆ.

ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:28 pm, Wed, 22 June 22