AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಕ್ರಿಸ್ ಸಾವನ್ನಪ್ಪಿ ಸುಮಾರು ಎರಡು ವರ್ಷಗಳ ನಂತರ ಲಾರೆನ್ ಆತನ ಮಗುವಿಗೆ ಜನ್ಮ ನೀಡಿದ್ದಾಳೆ. ಗಂಡ ಸಾವನ್ನಪ್ಪಿ 2 ವರ್ಷಗಳ ನಂತರ ಹೆಂಡತಿ ಆತನ ಮಗುವಿಗೆ ಜನ್ಮ ನೀಡಿರುವುದು ಇದೀಗ ಅಚ್ಚರಿ ಮೂಡಿಸಿದೆ.

Viral News: ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!
ಗಂಡ ಸಾವನ್ನಪ್ಪಿ 2 ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆImage Credit source: times now
TV9 Web
| Edited By: |

Updated on:Jun 22, 2022 | 2:43 PM

Share

ಪ್ರಪಂಚದಲ್ಲಿ ಹಲವಾರು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿಬಿಡುತ್ತದೆ. ಇಲ್ಲೊಬ್ಬಳು ಮಹಿಳೆ ತನ್ನ ಗಂಡ ಸಾವನ್ನಪ್ಪಿ ಸುಮಾರು 2 ವರ್ಷಗಳ ನಂತರ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! ಇದು ಹೇಗೆ ಸಾಧ್ಯ? ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಏನಿದು ಹೊಸ ವಿಚಾರ? ಆಕೆ ಸಾವನ್ನಪ್ಪಿದ ವ್ಯಕ್ತಿಯಿಂದ ಮಗು ಪಡೆದಿದ್ದು ಹೇಗೆ? ಎಂಬ ಕುರಿತು ಇಲ್ಲಿದೆ ಪೂರ್ತಿ ಮಾಹಿತಿ.

ಲಾರೆನ್ ಮೆಕ್ಗ್ರೆಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ ಜುಲೈ ತಿಂಗಳಲ್ಲಿ ಟರ್ಮಿನಲ್ ಬ್ರೈನ್ ಟ್ಯೂಮರ್​ನಿಂದ ಸಾವನ್ನಪ್ಪಿದ್ದರು. ಅವರಿಬ್ಬರೂ ತಮಗೊಂದು ಮಗು ಬೇಕೆಂದು ಮದುವೆಯಾದಾಗಿನಿಂದಲೂ ಕನಸು ಕಂಡಿದ್ದರು. ಆದರೆ, ಕ್ರಿಸ್​ಗೆ ಬ್ರೈನ್ ಟ್ಯೂಮರ್ ಇರುವುದು ಗೊತ್ತಾದ ನಂತರ ಆತನ ಚಿಕಿತ್ಸೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾಯಿತು. ಆತ ಗುಣವಾದ ನಂತರ ಮಗುವಿನ ಬಗ್ಗೆ ಯೋಚನೆ ಮಾಡಿದರಾಯಿತು ಎಂದುಕೊಂಡಿದ್ದ ಲಾರೆನ್​ಗೆ ಕ್ರಿಸ್​ನ ಸಾವು ಭಾರೀ ದೊಡ್ಡ ಆಘಾತ ನೀಡಿತ್ತು.

ಇದೀಗ ಕ್ರಿಸ್ ಸಾವನ್ನಪ್ಪಿ ಸುಮಾರು ಎರಡು ವರ್ಷಗಳ ನಂತರ ಲಾರೆನ್ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! 2020ರ ಜುಲೈ ತಿಂಗಳಲ್ಲಿ ಸಾವನ್ನಪ್ಪಿದ್ದ ಕ್ರಿಸ್​ನ ವೀರ್ಯವನ್ನು ಹೆಪ್ಪುಗಟ್ಟಿಸಿ, ಶೇಖರಿಸಿಟ್ಟಿದ್ದ ಲಾರೆನ್​ ಆ ವೀರ್ಯವನ್ನು ಬಳಸಿಕೊಂಡು ಗರ್ಭಿಣಿಯಾಗಿದ್ದರು. ಇದೀಗ ಮುದ್ದಾದ ಮಗುವನ್ನು ಹೆರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಮೂಲಕ ತನ್ನ ಮತ್ತು ಕ್ರಿಸ್​ನ ಪ್ರೀತಿಯ ಸಂಕೇತವಾದ ಮಗುವನ್ನು ಪಡೆಯುವ ಆಕೆಯ ಕನಸು ನನಸಾಗಿದೆ.

ಇದನ್ನೂ ಓದಿ
Image
Viral Video: ಚಿಕ್ನಿ ಚಮೇಲಿ ಹಾಡಿಗೆ ಕತ್ರಿನಾ ಕೈಫ್ ಅವರಂತೆ ಹೆಜ್ಜೆ ಹಾಕಿದ ವಿದೇಶಿ ವಧು
Image
Viral Video: ಮಿಲಿಟರಿ ಡ್ರೆಸ್ ತೊಟ್ಟು ಮದುವೆಯಾದ ವಧು-ವರರು; ವೈರಲ್ ಆಯ್ತು ವಿಡಿಯೋ
Image
Varanasi Airport: ಈ ವಿಮಾನ ನಿಲ್ದಾಣದಲ್ಲಿ ಸಂಸ್ಕೃತ ಭಾಷೆಯಲ್ಲೂ ಕೇಳುತ್ತೆ ಅನೌನ್ಸ್​ಮೆಂಟ್!
Image
Viral Video: ಜಗನ್ನಾಥ ದೇವಾಲಯದ ಮುಂದೆ ಕೊಳಲಲ್ಲಿ ಕಚ್ಚಾ ಬಾದಾಮ್ ಹಾಡು ನುಡಿಸಿ ಗಮನ ಸೆಳೆದ ಯುವಕ

ಇದನ್ನೂ ಓದಿ: Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು

33 ವರ್ಷದ ಲಾರೆನ್ ಹೊಸ ತಂತ್ರಜ್ಞಾನದ ಸಹಾಯದಿಂದ ತನ್ನ ಮೃತಪಟ್ಟ ಗಂಡನ ಮಗುವಿಗೆ ಜನ್ಮ ನೀಡಿದ್ದಾಳೆ. ವರದಿಗಳ ಪ್ರಕಾರ, ಅವರು ಐವಿಎಫ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಕೆ ತನ್ನ ಗಂಡ ಸಾವನ್ನಪ್ಪಿ 9 ತಿಂಗಳಾಗುವವರೆಗೂ ಕಾದಿದ್ದರು. ಗಂಡನ ಸಾವಿನ 9 ತಿಂಗಳ ನಂತರ ಐವಿಎಫ್ ಮೂಲಕ ತನ್ನ ಗಂಡನ ವೀರ್ಯವನ್ನು ಬಳಸಿಕೊಂಡು ಲಾರೆನ್ ಗರ್ಭ ಧರಿಸಲು ನಿರ್ಧರಿಸಿದರು.

ಇದೀಗ ಮೇ 17ರಂದು ಲಾರೆನ್ ತನ್ನ ಮಗ ಸೆಬ್‌ಗೆ ಜನ್ಮ ನೀಡಿದ್ದಾಳೆ. ಸೆಬ್ ಪ್ರತಿದಿನ ಅವನ ತಂದೆಯಂತೆಯೇ ಕಾಣುತ್ತಾನೆ. ಅವನು ಜನಿಸಿದಾಗ ಅವನಿಗೆ ದಪ್ಪವಾದ ಕೂದಲಿತ್ತು. ಆತ ಆಗಲೇ ನೋಡಲು ಕ್ರಿಸ್​ನಂತೆಯೇ ಕಾಣುತ್ತಿದ್ದ. ಕ್ರಿಸ್​ ಮತ್ತೆ ನಮ್ಮ ಗನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದು ಲಾರೆನ್ ಹೇಳಿದ್ದಾಳೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Wed, 22 June 22

Follow Us
TV9 Web
TV9 Web

TV9 Kannada

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ