Viral Story: ಇಂಜಿನಿಯರಿಂಗ್​ ಓದಿ ಕಂಪನಿ ಉದ್ಯೋಗ ಬಿಟ್ಟು ಬಿರಿಯಾನಿ​ ಅಂಗಡಿ ತೆರೆದ​ ಯುವಕರು

| Updated By: Pavitra Bhat Jigalemane

Updated on: Mar 12, 2022 | 9:48 AM

ಇಂಜಿನೀಯರಿಂಗ್​​ ಓದಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಯುವಕರು ಕೆಲಸ ಬಿಟ್ಟು ಬೀದಿ ಬದಿಯಲ್ಲಿ ಬಿರಿಯಾನಿ ಅಂಗಡಿ ತೆರೆದಿದ್ದಾರೆ. ಹರಿಯಾಣಾದ ಸೋನಿಪತ್​ನಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

Viral Story: ಇಂಜಿನಿಯರಿಂಗ್​ ಓದಿ ಕಂಪನಿ ಉದ್ಯೋಗ ಬಿಟ್ಟು ಬಿರಿಯಾನಿ​ ಅಂಗಡಿ ತೆರೆದ​ ಯುವಕರು
ಬಿರಿಯಾನಿ ಅಂಗಡಿ
Follow us on

ಉದ್ಯೋಗ (Job) ಎಲ್ಲರಿಗೂ ಬೇಕು. ಪ್ರತಿದಿನ  9 ಗಂಟೆಯಿಂದ 5 ಗಂಟೆಯವರೆಗೆ ಕೆಲಸ ಮಾಡಿ ಸಂಜೆ ಮನೆಗೆ ಹೋಗುವಷ್ಟರಲ್ಲಿ ಬಸವಳಿದು ಹೋಗುವವರೇ ಹೆಚ್ಚು.  ಮನೆಯ ಸಂಕಷ್ಟ, ಸಾಲ ಹೀಗೆ ನಾನಾ ಕಾರಣಗಳಿಂದ ಒಲ್ಲದ ಮನಸ್ಸಿನಿಂದ ದುಡಿಯುವ ಸಾಕಷ್ಟು ಜನರನ್ನು ಕಾಣಬಹುದು. ಆದರೆ ಕೆಲಸ ಬಿಟ್ಟು  ಸ್ವಂತ ಉದ್ಯೋಗ ಮಾಡುವಷ್ಟು ಧೈರ್ಯ ಎಲ್ಲರಲ್ಲಿಯೂ ಇರುವುದಿಲ್ಲ. ಹಣ ಹೂಡಿಕೆ  ಮಾಡಿ ಕೈಸುಟ್ಟುಕೊಂಡರೆ ಎನ್ನುವ ಭಯವೇ ಹೆಚ್ಚು. ಹೀಗಿದ್ದಾಗ ಇಂಜಿನೀಯರಿಂಗ್​​ ಓದಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಯುವಕರು ಕೆಲಸ ಬಿಟ್ಟು ಬೀದಿ ಬದಿಯಲ್ಲಿ ಬಿರಿಯಾನಿ ಅಂಗಡಿ (Biriyani Stall) ತೆರೆದಿದ್ದಾರೆ. ಹರಿಯಾಣಾದ ಸೋನಿಪತ್​ನಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.


9 ರಿಂದ 5 ಗಂಟೆಯವರೆಗೆ ದುಡಿಯುವ ಬದಲು ರೋಹಿತ್​ ಮತ್ತು ಸಚಿನ್​ ಎನ್ನುವ ಯುವಕರು ವೆಜ್​ ಬಿರಿಯಾನ್​ ಅಂಗಡಿಯನ್ನು ತೆರೆದಿದ್ದಾರೆ. ಎಣ್ಣೆರಹಿತ ಬಿರಿಯಾನಿಗೆ 50 ರೂ ಹಾಗೂ ಎಣ್ಣೆಹಾಕಿದ ವೆಜ್​ ಬಿರಿಯಾನಿಗೆ ಒಂದು ಪ್ಲೇಟ್​ಗೆ 70ರೂ ತೆಗೆದುಕೊಳ್ಳುತ್ತಾರಂತೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬಳಸಿ ಬಿರಿಯಾನಿಯನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ. ಇವರ ವೆಜ್​ ಬಿರಿಯಾನಿ ಅಂಗಡಿಗೆ ಇಂಜಿನಿಯರ್​ ವೆಜ್​ ಬಿರಿಯಾನಿ ಸ್ಟಾಲ್​ ಎಂದು ಹೆಸರಿಟ್ಟಿದ್ದಾರೆ.

ಸಚಿನ್​ ಮತ್ತು ರೋಹಿತ್​ ಇಬ್ಬರೂ ಐದು ವರ್ಷಗಳ ಕಾಲ ಎಂಜಿನಿಯರಿಂಗ್ ಓದಿದ್ದಾರೆ. ರೋಹಿತ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದಾಗ, ಸಚಿನ್ ಬಿ.ಟೆಕ್ ಓದಿದ್ದರು. ಆದರೆ, ಕೆಲಸದಲ್ಲಿ ತೃಪ್ತರಾಗದ ಹಿನ್ನೆಲೆಯಲ್ಲಿ ಬಿರಿಯಾನಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಂಪನಿಯಲ್ಲಿ ದಿನವಿಡೀ ದುಡಿಯುವುದಕ್ಕಿಂತ ಬಿರಿಯಾನಿ ಉದ್ಯೋಗ ಖುಷಿ ನೀಡಿದೆ ಎನ್ನುವ ಅವರು ಮುಂದಿನ ದಿನಗಳಲ್ಲಿ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಯೋಜನೆ ರೂಪಿಸಿದ್ದಾರೆ ಈ ಕುರಿತು ಇಂಡಿಯಾ ಟುಡೆ ವರದಿ ತಿಳಿಸಿದೆ.

ಇದನ್ನೂ ಓದಿ:

ಗ್ರ್ಯಾಂಡ್​ ಲುಕ್​ನಲ್ಲಿ ಬಂದ ವಧುವನ್ನು ನೋಡಿ ಭಾವುಕನಾದ ವರ : ವಿಡಿಯೋ ವೈರಲ್​

Published On - 9:46 am, Sat, 12 March 22