ಗ್ರ್ಯಾಂಡ್​ ಲುಕ್​ನಲ್ಲಿ ಬಂದ ವಧುವನ್ನು ನೋಡಿ ಭಾವುಕನಾದ ವರ : ವಿಡಿಯೋ ವೈರಲ್​

ಗ್ರ್ಯಾಂಡ್​ ಆಗಿ ರೆಡಿಯಾಗಿ ಬಂದ ವಧುವನ್ನು ನೋಡಿ ವರನೊಬ್ಬ ಖುಷಿಯಿಂದ ಕಣ್ಣೀರು ಹಾಕಿದ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ.

ಗ್ರ್ಯಾಂಡ್​ ಲುಕ್​ನಲ್ಲಿ ಬಂದ ವಧುವನ್ನು ನೋಡಿ ಭಾವುಕನಾದ ವರ : ವಿಡಿಯೋ ವೈರಲ್​
ವಧುವನ್ನು ನೋಡಿ ಭಾವುಕನಾದ ವರ
TV9kannada Web Team

| Edited By: Pavitra Bhat Jigalemane

Mar 11, 2022 | 5:34 PM

ಮದುವೆ (Wedding) ಪ್ರತೀ ಹುಡುಗ ಹುಡುಗಿಯ ಕನಸು. ಭಾವನಾತ್ಮಕ ಬಂಧವಾದ ಮದುವೆ ಒಂದಷ್ಟು ಸುಂದರ ಕ್ಷಣಗಳನ್ನು ಸೃಷ್ಟಿಸುವ ಸಂದರ್ಭ.  ಇದೀಗ  ಸಾಮಾಜಿಕ ಜಾಲತಾಣದಲ್ಲಿ ಮದುವೆಯ ವಿಡಿಯೋ ಸಖತ್​ ವೈರಲ್​ ಆಗಿದೆ. ಗ್ರ್ಯಾಂಡ್​ ಆಗಿ ರೆಡಿಯಾಗಿ ಬಂದ ವಧುವನ್ನು (Bride) ನೋಡಿ ವರನೊಬ್ಬ (Groom) ಖುಷಿಯಿಂದ ಕಣ್ಣೀರು ಹಾಕಿದ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಬ್ರೈಡಲ್​ ಲೆಹೆಂಗಾ ಡಿಸೈನ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ವಿಡಿಯೋ 40 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.

ವಿಡಿಯೋದಲ್ಲಿ ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟ ವಧು ಮಂಟಪಕ್ಕೆ ಡ್ಯಾನ್ಸ್​ ಮಾಡಿಕೊಂಡು ಬರುತ್ತಾಳೆ.  ಒಡವೆ ಧರಿಸಿ ಗ್ರ್ಯಾಂಡ್​ ಆಗಿ ರೆಡಿಯಾದ ವಧು ಸಖತ್​ ಸ್ಟೆಪ್​ ಹಾಕಿದ್ದಾಳೆ. ಇದನ್ನು ನೋಡಿ ವರ ಖುಷಿಯಿಂದ ಕಣ್ಣೀರು ಹಾಕಿದ್ದಾನೆ. ಡ್ಯಾನ್ಸ್​ ಮಾಡಿಕೊಂಡು ಬರುತ್ತಿದ್ದ ವಧುವಿನ ಬಳಿ ಹೋದ ವರ ಆಕೆಯನ್ನು ಪ್ರೀತಿಯಿಂದ ಹಗ್​ ಮಾಡಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಅವರು ಎಷ್ಟು ಅದೃಷ್ಟವಂತರು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಪ್ರೀತಿಸಿ ಮನೆಯವರನ್ನು  ಒಪ್ಪಿಸಿ ಮದುವೆಯಾಗುವುದೆಂದರೆ ಸುಲಭವಲ್ಲ ಆದರೆ ಅದರಷ್ಟು ಖುಷಿ ಇನ್ನೊಂದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ತನ್ನದೇ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ ಜಗತ್ತಿನ ಅತೀ ಉದ್ದದ ಕಾರು: ಈಗ ಇದರ ಉದ್ದ 100 ಅಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada