
School Girls: ಇದು ತುಂಬಾ ಮುದ್ದಾದ ಹೊಡೆದಾಟ. ಸ್ವಲ್ಪ ಬ್ರೇಕ್ ತಗೊಂಡು ಹೊಡೆದಾಡಿ. ಮತ್ತೆ ಬ್ರೇಕ್ ತಗೊಳ್ಳಿ ಮತ್ತೆ ಹೊಡೆದಾಡಿ. ಹೀಗೆ ಹೊಡೆದಾಡುತ್ತ ಒಂದು ದಿನ ಎಲ್ಲವನ್ನೂ ಸತ್ಯಾನಾಶ ಆಗುವ ಹಾಗೆ ಮಾಡಿ. ಹೌದು, ಇದೇ ಬೇಕಾಗಿದ್ದದ್ದು. ಬೆಕ್ಕುಗಳು ರಸ್ತೆಯ ಮೇಲೆ ಜಗಳಾಡುತ್ತಿವೆ. ನೀವು ಇನ್ನೂ ಚೆನ್ನಾಗಿ ಜಗಳಾಡಬೇಕು. ನನ್ನ ಮೊಹಲ್ಲಾದ ಮಕ್ಕಳು ಇದಕ್ಕಿಂತ ಚೆನ್ನಾಗಿ ಜಗಳಾಡುತ್ತಾರೆ. ಕ್ಯಾಮೆರಾಮೆನ್ಗೆ ಗೊಂದಲ ಉಂಟಾಗಿದೆ, ಯಾವ ಗುಂಪು ಚೆನ್ನಾಗಿ ಹೊಡೆದಾಡುತ್ತಿದೆ ಮತ್ತು ಹೆಚ್ಚು ಮನೋರಂಜನೆ (Entertainment) ಕೊಡುತ್ತಿದೆ ಎನ್ನುವ ಬಗ್ಗೆ. ಸ್ನೇಹಿತರೇ ಇದು ಕೇವಲ ಮನರಂಜನೆಗಾಗಿ ಮಾತ್ರ… ಹೀಗೆ ನೂರಾರು ಜನರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ
ಪಾಪ್ಕಾರ್ನ್ ಮಿಸ್ಸಿಂಗ್, ಅಷ್ಟಕ್ಕೂ ಈ ಗುಂಪುಗಳ ನಡುವೆ ಜಗಳ ಶುರುವಾಗಿದ್ದಾದರೂ ಹೇಗೆ? ಮತ್ತು ಏಕೆ? ಇದು ಆಧುನಿಕ ಭಾರತವೋ? ಉತ್ತರ ಭಾರತದಲ್ಲಿ ಯಾಕೆ ಇಂಥ ಅಸಭ್ಯತನ ಪುನರಾವರ್ತನೆಯಾಗುತ್ತದೆ? ಆಹಾ ಇದು ನನ್ನ ದೇಶ, ನನ್ನ ದೇಶ ಮುಂದುವರಿಯುತ್ತಿದೆ! ಇವರು ದೆಹಲಿಯ ರಾಜಕುಮಾರಿಯರು. ದೆಹಲಿಯಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳು ಅಚ್ಚರಿಯನ್ನು ಮೂಡಿಸಲಾರವು. ಇವರಿಗೆ ಹೀಗೆಲ್ಲ ಜಗಳಾಡಬೇಕೆಂದು ಕಲಿಸುವವರು ಯಾರು? ಹೀಗೆ ಪ್ರತಿಕ್ರಿಯೆಗಳ ಸುರಿಮಳೆಯೇ ಸುರಿಯುತ್ತಿದೆ.
ಸೆ. 20 ರಂದು ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಶಾಲಾಬಾಲಕಿಯರ ಎರಡು ಗುಂಪುಗಳು ಬೀದಿಜಗಳಕ್ಕೆ ಇಳಿದಿವೆ. ಕೆಲವರು ಈ ವಿಡಿಯೋ ನೋಡಿ ಗಾಬರಿಗೆ ಒಳಗಾಗಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ನನ್ನ ಮಗಳು ಬಹಳ ಒಳ್ಳೆಯ ಅಂಕ ಗಳಿಸುತ್ತಾಳೆ ಎಂದು ಹೇಳುವ ಪೋಷಕರು ಎಲ್ಲಿದ್ದೀರಿ ಎಂದು ಕೇಳಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್ ಕೂಡ ನಡೆಸುವ ಧ್ರುವಿ ಪಂಚಾಲ್
ನಿಜಕ್ಕೂ ಈ ವಿಡಿಯೋ ನೋಡಿದರೆ ಆತಂಕವಾಗುತ್ತದೆ. ಮಕ್ಕಳು ಎಲ್ಲಿ ಯಾವ ಕಾರಣಕ್ಕಾಗಿ ಒತ್ತಡಕ್ಕೆ ಒಳಗಾಗುತ್ತಿವೆ? ಎಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿವೆ? ಯಾವ ವಿಷಯಗಳು ಇವರನ್ನು ಹೀಗೆ ಪ್ರಚೋದಿಸುತ್ತಿವೆ? ನಿಜಕ್ಕೂ ಈ ವಿಡಿಯೋ ನೋಡಿದರೆ ಕಳವಳ ಉಂಟಾಗುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:01 pm, Thu, 21 September 23