ಯೂಟ್ಯೂಬ್ ನೋಡಿ ಕ್ಯಾನ್ಸರ್‌ ಗುಣಪಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ಮಹಿಳೆ

39 ವರ್ಷದ ಮಹಿಳೆ ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೇ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ, ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿರುವುದನ್ನು ಈ ಮಹಿಳೆ ಗಮನಿಸಿದ್ದರು. ವಿಡಿಯೋ ನೋಡಿದ ದಿನದಿಂದ ಪ್ರತೀ ದಿನ ಕ್ಯಾರೆಟ್​​ ಜ್ಯೂಸ್​ ಕುಡಿಯಲು ಪ್ರಾರಂಭಿಸಿದ್ದರು.

ಯೂಟ್ಯೂಬ್ ನೋಡಿ ಕ್ಯಾನ್ಸರ್‌ ಗುಣಪಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ಮಹಿಳೆ

Updated on: May 17, 2024 | 4:11 PM

ಇತ್ತೀಚಿನ ದಿನಗಳಲ್ಲಿ ಡಾಕ್ಟರ್​​ ಸಲಹೆ ಪಡೆಯುವವರಿಗಿಂತ ಹೆಚ್ಚಾಗಿ ಗೂಗಲ್​​, ಯೂಟ್ಯೂಬ್​​ ಮೂಲಕ ಮನೆಮದ್ದುಗಳನ್ನು ಕಂಡುಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಕ್ಯಾನ್ಸರ್​ ರೋಗಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾಳೆ. ಸೋಶಿಯಲ್​ ಮೀಡಿಯಾ ಪ್ರಭಾವಿಯೊಬ್ಬರು ತಿಳಿಸಿರುವ ಔಷಧಿಯೊಂದನ್ನು ಕ್ಯಾನ್ಸರ್​​ ರೋಗ ಗುಣಪಡಿಸಲು ಪ್ರಯತ್ನಿಸಿದ್ದು, ಈ ಔಷಧಿ ಆಕೆಯ ಜೀವಕ್ಕೆ ಕಂಟಕವಾಗಿದೆ.

ವರದಿಗಳ ಪ್ರಕಾರ, ಯುನೈಟೆಡ್ ಕಿಂಗ್‌ಡಮ್‌ನ ಐರಿನಾ ಸ್ಟೊಯ್ನೋವಾ ಎಂಬ ಮಹಿಳೆ ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 39 ವರ್ಷದ ಮಹಿಳೆಗೆ 2021 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇತ್ತೀಚಿಗಷ್ಟೇ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ, ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿರುವುದನ್ನು ಈ ಮಹಿಳೆ ಗಮನಿಸಿದ್ದರು. ವಿಡಿಯೋ ನೋಡಿದ ದಿನದಿಂದ ಪ್ರತೀ ದಿನ ಕ್ಯಾರೆಟ್​​ ಜ್ಯೂಸ್​ ಕುಡಿಯಲು ಪ್ರಾರಂಭಿಸಿದ್ದರು.

ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ

ವೀಡಿಯೊದಲ್ಲಿ ಉಲ್ಲೇಖಿಸಿದ್ದಂತೆ ಪ್ರತಿದಿನ ಸುಮಾರು 13 ಕಪ್‌ಗಳಷ್ಟು ಕ್ಯಾರೆಟ್ ಜ್ಯೂಸ್ ಕುಡಿಯುತ್ತಿದ್ದ ಮಹಿಳೆ. ಆದರೆ ದಿನಕಳೆದಂತೆ ಗುಣವಾಗುವ ಬದಲು ಆಕೆಯ ಆರೋಗ್ಯ ಹದಗೆಡುತ್ತಾ ಹೋಗಿದೆ. ವೈದ್ಯರ ಸಲಹೆ ಇಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದರ ಪರಿಣಾಮ ಸಂಪೂರ್ಣ ಬಲಹೀನಳಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಷ್ಟೊತ್ತಿಗಾಗಲೇ ಆಕೆಯ ಹೊಟ್ಟೆಯ ಕೆಳಭಾಗ, ಕಾಲುಗಳು ಮತ್ತು ಶ್ವಾಸಕೋಶಗಳು ದ್ರವದಿಂದ ತುಂಬಿದ್ದವು ಮತ್ತು ಆಕೆಯ ದೇಹದಾದ್ಯಂತ ಗಡ್ಡೆಗಳಿದ್ದವು. ತನ್ನ ಅನುಭವದ ಬಗ್ಗೆ ಮಾತನಾಡುತ್ತಾ ಐರೆನಾ, “ನನ್ನ ಶ್ವಾಸಕೋಶದಲ್ಲಿ ದ್ರವವಿದ್ದ ಕಾರಣ ನಾನು ಉಸಿರಾಡಲು ಸಾಧ್ಯವಾಗಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us