ಯೂಟ್ಯೂಬ್ ಚಾನೆಲ್ಗಳಿಗೆ ಎಚ್ಚರಿಕೆ ಕೊಟ್ಟ ಶಿವಣ್ಣನ ನಾಯಕಿ
ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ನಟಿಸಿರುವ ನಟಿಯೊಬ್ಬರ ಬಗ್ಗೆ ಸುಳ್ಳು ಸುದ್ದಿಗಳನ್ನು ಕೆಲವು ಯೂಟ್ಯೂಬ್ ಚಾನೆಲ್ಗಳು ಹರಿಬಿಟ್ಟಿದ್ದು, ಆ ಚಾನೆಲ್ಗಳಿಗೆ ನಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯೂಟ್ಯೂಬ್ (YouTube) ಚಾನೆಲ್ಗಳು ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಸುದ್ದಿಯನ್ನು ರೋಚಕಗೊಳಿಸಿ ಪ್ರೆಸೆಂಟ್ ಮಾಡುವವರ ಸಂಖ್ಯೆ ಹಾಗೂ ವೀವ್ಸ್ಗಾಗಿ ಸುಳ್ಳು ಸುದ್ದಿಗಳನ್ನು ಹರಡುವವರ ಸಂಖ್ಯೆ ಹೆಚ್ಚಾಗಿದೆ. ಯಾರು ಬೇಕಾದರೂ ಚಾನೆಲ್ ಮಾಡಿ ಸುದ್ದಿಗಳನ್ನು ಹಾಕಲು ಪ್ರಾರಂಭಿಸಬಹುದಾದ ಕಾರಣ ಎಲ್ಲರೂ ಪತ್ರಿಕಾಧರ್ಮ ಪಾಲಿಸುತ್ತಾರೆಂದೇನೂ ಇಲ್ಲ. ಕೆಲವು ಯೂಟ್ಯೂಬ್ ಚಾನೆಲ್ಗಳಂತೂ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಿಸಿ ಹಣ ಮಾಡುತ್ತಿವೆ. ಹಲವು ಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಕೆಲ ಯೂಟ್ಯೂಬ್ ಚಾನೆಲ್ಗಳಲ್ಲಿ ಹರಿಬಿಡಲಾಗುತ್ತಿರುತ್ತದೆ. ಇದೀಗ ತಮ್ಮ ಬಗ್ಗೆ ಸುಳ್ಳು ಹರಡಿಸಿದ ಯೂಟ್ಯೂಬ್ ಚಾನೆಲ್ಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ ಶಿವಣ್ಣನ ಎದುರು ನಾಯಕಿಯಾಗಿ ನಟಿಸುತ್ತಿರುವ ನಟಿ.
ಶಿವರಾಜ್ ಕುಮಾರ್ ನಟಿಸಿ, ಬಿಡುಗಡೆಗೆ ಸಜ್ಜಾಗಿರುವ ‘ನೀ ಸಿಗೋವರೆಗೆ’ ಸಿನಿಮಾದಲ್ಲಿ ನಟಿಸಿರುವ ಮೆಹ್ರೀನ್ ಪಿರ್ಜಾದಾ ಕೆಲವು ಯೂಟ್ಯೂಬ್ ಚಾನೆಲ್ ಹಾಗೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕೆಲವು ವಿಡಿಯೋಗಳನ್ನು ಹಂಚಿಕೊಂಡು ಸುಳ್ಳು ಸುದ್ದಿ ಹರಡಲಾಗಿತ್ತು. ಇದಕ್ಕೆ ಖಡಕ್ ಉತ್ತರ ಕೊಟ್ಟಿರುವ ಮೆಹ್ರೀನ್ ಪಿರ್ಜಾದಾ, ಸುಳ್ಳು ಸುದ್ದಿಗಳನ್ನು ಹಿಂತೆಗೆಯದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೆಹ್ರೀನ್ ಪಿರ್ಜಾದಾ, ಆಸ್ಪತ್ರೆಯೊಂದರಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವ, ರಕ್ತ ಮಾದರಿ ಪರೀಕ್ಷೆ ಮಾಡಿಸುತ್ತಿರುವ ಕೆಲವು ವಿಡಿಯೋಗಳನ್ನು ಹಂಚಿಕೊಂಡಿರುವ ಕೆಲವು ಯೂಟ್ಯೂಬ್ ಚಾನೆಲ್ ಗಳು ಮೆಹ್ರೀನ್ ಪಿರ್ಜಾದಾ ಗರ್ಭಿಣಿ ಆಗಿದ್ದಾರೆ. ಸ್ಕ್ಯಾನಿಂಗ್ ಮಾಡಿಸುತ್ತಿರುವ ವಿಡಿಯೋಗಳನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದೆಲ್ಲ ಬರೆದುಕೊಂಡಿದ್ದರು. ಅಸಲಿಗೆ ಮೆಹ್ರೀನ್ ಪಿರ್ಜಾದಾ ಮದುವೆಯಾಗಿಲ್ಲ, ಆಗಲೆ ಈ ಮಾಧ್ಯಮಗಳು ಅವರು ಗರ್ಭಿಣಿ ಎಂದು ಘೋಷಿಸಿದರು.
ಇದನ್ನೂ ಓದಿ:ಗೀತಾ ಶಿವರಾಜ್ ಕುಮಾರ್ ರ‍್ಯಾಲಿ ವೇಳೆ ಕುಸಿದ ಎಲ್ಇಡಿ ಬೋರ್ಡ್, ನಾಲ್ವರಿಗೆ ಗಾಯ
ಅಸಲಿಗೆ ಮೆಹ್ರೀನ್ ಪಿರ್ಜಾದಾ, ತಮ್ಮ ಎಗ್ಸ್ ಪ್ರೀಜ್ (ಅಂಡಾಣು) ಮಾಡಿಸಿದ್ದಾರೆ. ತಮ್ಮದೇ ಅಂಡಾಣುವನ್ನು ಪ್ರೀಜ್ ಮಾಡಿಸಿ ಇಟ್ಟು, ಮುಂದೆ ತಮಗೆ ತಾಯಿ ಆಗಬೇಕು ಎನಿಸಿದಾಗ ಐವಿಎಫ್ ಮೂಲಕ ಅದೇ ಅಂಡಾಣು ಬಳಸಿ ತಾಯಿಯಾಗಬಹುದಾಗಿರುತ್ತದೆ. ಇದೇ ಕಾರಣಕ್ಕೆ ಅವರು ತಮ್ಮ ಅಂಡಾಣುಗಳನ್ನು ಪ್ರೀಜ್ ಮಾಡಿಸಿದ್ದಾರೆ. ಆ ಪ್ರಕ್ರಿಯೆಯ ಕೆಲವು ಹಂತಗಳನ್ನು ವಿಡಿಯೋ ಮಾಡಿ ಹಂಚಿಕೊಂಡು, ಎಗ್ಸ್ ಪ್ರೀಜಿಂಗ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ವಿಫಲವಾದ ಕೆಲವು ಯೂಟ್ಯೂಬ್ ಮಾಧ್ಯಮದವರು ಮೆಹ್ರೀನ್ ಪಿರ್ಜಾದಾ ತಾಯಿಯಾಗಲಿದ್ದಾರೆ ಎಂದು ಸುದ್ದಿ ಹರಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿಯೇ ಪೋಸ್ಟ್ ಹಂಚಿಕೊಂಡಿರುವ ಮೆಹ್ರೀನ್ ಪಿರ್ಜಾದಾ, ‘ಎಗ್ ಪ್ರೀಜಿಂಗ್ಗೆ ಗರ್ಭಿಣಿ ಆಗಬೇಕಿಲ್ಲ, ಎರಡೂ ಬೇರೆ ಪ್ರಕ್ರಿಯೆಗಳು ಎಂದು ಗೊತ್ತಿರದ ನೀವು ನಿಮ್ಮನ್ನು ಪತ್ರಕರ್ತ ಎಂದು ಹೇಳಿಕೊಳ್ಳುತ್ತೀರಿ. ಈ ಕೂಡಲೇ ನನ್ನ ಬಗ್ಗೆ ಹರಿಬಿಡಲಾಗಿರುವ ಸುಳ್ಳು ಸುದ್ದಿಯನ್ನು ಹಿಂಪಡೆಯಿರಿ ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಜ್ಜಾಗಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ