Shocking: ಐಫೋನ್ ವಿಚಾರವಾಗಿ ಜಗಳ; ತಂಗಿಯನ್ನೇ ಕೊಂದ 12ರ ಬಾಲಕಿ

ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಈ ಇಬ್ಬರು ಸಹೋದರಿಯರ ನಡುವೆ ಫೋನಿಗಾಗಿ ಜಗಳ ನಡೆದಿದೆ. ಕೋಪಗೊಂಡ ಬಾಲಕಿ ತನ್ನ ತಂಗಿಯ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಯಾರಿಗೂ ಅನುಮಾನ ಬಾರದಂತೆ ಸಹೋದರಿಯ ಶವವನ್ನು ಹಾಸಿಗೆಯ ಮೇಲೆ ಮಲಗಿರುವ ರೀತಿಯಲ್ಲಿ ಜೋಡಿಸಿದ್ದಾಳೆ.

Shocking: ಐಫೋನ್ ವಿಚಾರವಾಗಿ ಜಗಳ; ತಂಗಿಯನ್ನೇ ಕೊಂದ 12ರ ಬಾಲಕಿ

Updated on: Jul 24, 2024 | 5:33 PM

ಅಮೆರಿಕ: 12 ವರ್ಷದ ಬಾಲಕಿಯೊಬ್ಬಳು ತನ್ನ 8 ವರ್ಷದ ಸಹೋದರಯನ್ನು ಕೊಂದಿರುವ ಘಟನೆ ಅಮೆರಿಕದ ಟೆನ್ನೆಸ್ಸಿಯಲ್ಲಿ ನಡೆದಿದೆ. ಐಫೋನ್ ವಿಚಾರವಾಗಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಈ ವೇಳೆ ಬಾಲಕಿ ತನ್ನ ತಂಗಿಯ ಕತ್ತು ಹಿಸುಕಿ ಕೊಂದಿದ್ದಾಳೆ. ಇದಲ್ಲದೇ ಯಾರೂ ತನ್ನನ್ನು ಅನುಮಾನಿಸಬಾರದೆಂದು, ಅವಳು ತನ್ನ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದ್ದಾಳೆ. ಆದರೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದ್ದು, ಈ ದೃಶ್ಯ ಕಂಡು ಬಾಲಕಿಯ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ಮೃತ ಬಾಲಕಿ ಡೆಮಾರಿಯಾ ಹೋಲಿಂಗ್ಸ್‌ವರ್ತ್(8) ಎಂದು ಗುರುತಿಸಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ. ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣದಡಿಯಲ್ಲಿ ಬಾಲಕಿಯ ವಿರುದ್ಧ ಕೇಸು ದಾಖಲಿಸಲಾಗಿದೆ.

ಇದನ್ನೂ ಓದಿ: ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಸಿಎ ಪಾಸ್​​​; ವಿಡಿಯೋ ವೈರಲ್​​

ತನಿಖೆಯ ವೇಳೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿ ಬಾಲಕಿ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಈ ಇಬ್ಬರು ಸಹೋದರಿಯರ ನಡುವೆ ಫೋನಿಗಾಗಿ ಜಗಳ ನಡೆದಿದೆ. ಕೋಪಗೊಂಡ ಬಾಲಕಿ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಸಹೋದರಿಯ ಶವವನ್ನು ಹಾಸಿಗೆಯ ಮೇಲೆ ಯಾರಿಗೂ ಅನುಮಾನ ಬಾರದಂತೆ ಮಲಗಿರುವ ರೀತಿಯಲ್ಲಿ ಜೋಡಿಸಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Wed, 24 July 24