ನಾನು ಸ್ವರ್ಗ ಕಂಡೆ: 11 ನಿಮಿಷಗಳ ಕಾಲ ಸತ್ತು ಬದುಕಿ ಬಂದ ಮಹಿಳೆ ಹೇಳಿದ್ದೇನು?

|

Updated on: Oct 20, 2024 | 1:53 PM

ಸತ್ತವರು ಮತ್ತೆ ಬದುಕಿ ಬರ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ, ನಮ್ಮ ಜೀವನ ತುಂಬಾ ವಿಚಿತ್ರ, ನಮ್ಮ ಕೈ ಮೀರಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. 11 ನಿಮಿಷಗಳ ಕಾಲ ಸತ್ತಿದ್ದ ಮಹಿಳೆ ಹೇಳಿರುವ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ನಾನು ಸ್ವರ್ಗ ಕಂಡೆ: 11 ನಿಮಿಷಗಳ ಕಾಲ ಸತ್ತು ಬದುಕಿ ಬಂದ ಮಹಿಳೆ ಹೇಳಿದ್ದೇನು?
ಸಾವು
Image Credit source: Believer.com
Follow us on

ಸತ್ತವರು ಮತ್ತೆ ಬದುಕಿ ಬರ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ, ನಮ್ಮ ಜೀವನ ತುಂಬಾ ವಿಚಿತ್ರ, ನಮ್ಮ ಕೈ ಮೀರಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. 11 ನಿಮಿಷಗಳ ಕಾಲ ಸತ್ತಿದ್ದ ಮಹಿಳೆ ಹೇಳಿರುವ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮಹಿಳೆ 11 ನಿಮಿಷಗಳ ಕಾಲ ಸತ್ತು ಮತ್ತೆ ಭೂಮಿಗೆ ಬಂದಿದ್ದಾರಂತೆ, ರ್ಲೋಟ್ ಹೋಮ್ಸ್ ಎಂಬ ಮಹಿಳೆ ತಾನು ಸತ್ತಾಗ ನೇರವಾಗಿ ಸ್ವರ್ಗಕ್ಕೆ ಹೋದೆ ಎಂದು ಹೇಳಿಕೊಂಡಿದ್ದಾಳೆ. ಇಲ್ಲಿ ಅವರು ಕಲ್ಪನೆಗೆ ಮೀರಿದ ಅನೇಕ ವಿಷಯಗಳನ್ನು ಅವರು ಕಂಡಿದ್ದಾಗಿ ಹೇಳಿದ್ದಾರೆ.

2019ರಲ್ಲಿ ಅಧಿಕ ರಕ್ತದೊತ್ತಡದಿಂದಾಗಿ ಮಹಿಳೆಯ ಸ್ಥಿತಿ ಹದಗೆಟ್ಟಿತ್ತು, ಆಸ್ಪತ್ರೆಯ ಹಾಸಿಗೆ ಮೇಲೆ ಕೊನೆಯುಸಿರೆಳೆದಿದ್ದರು. 11 ನಿಮಿಷಗಳ ಬಳಿಕ ಮತ್ತೆ ಉಸಿರಾಡಲು ಶುರು ಮಾಡಿದ್ದರು. ಆಗ ಸ್ವರ್ಗಕ್ಕೆ ಹೋಗಿದ್ದೆ, ದೇವತೆಗಳು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದೆ. ತನ್ನ ದೇಹವನ್ನು ಕೂಡ ನಾನು ನೋಡಿದ್ದೆ ಎಂದು ಆಕೆ ಹೇಳಿದ್ದಾಳೆ.

ಮತ್ತಷ್ಟು ಓದಿ:
Viral Video : ಅಬ್ಬಬ್ಬಾ! ಈ ಪೋರನ ಸ್ಟಂಟಿಂಗ್ ಟ್ಯಾಲೆಂಟ್ ನೋಡಿ, ವಿಡಿಯೋ ವೈರಲ್

ವೈದ್ಯರು ಹಾಗೂ ನರ್ಸ್​ಗಳು ಸಿಪಿಆರ್ ನೀಡುತ್ತಿದ್ದರು, ಆ ಸಮಯದಲ್ಲಿ ಪ್ರಕಾಶಮಾನವಾದ ಬೆಳಕು ನೋಡಿದೆ, ಆಹ್ಲಾದಕರ ಸಂಗೀತವಿತ್ತು, ಹೂವಿನ ಪರಿಮಳವೂ ಬರುತ್ತಿತ್ತು, ಕಣ್ಣೂ ತೆರೆದಾಗ ಅದು ಸ್ವರ್ಗವಾಗಿತ್ತು, ಅಲ್ಲಿನ ಸಂಗೀತಕ್ಕೆ ಪ್ರಕೃತಿಯೂ ಕುಣಿಯುತ್ತಿತ್ತು ಎಂದು ಹೇಳಿದ್ದಾರೆ.

ಆ ಸ್ಥಳವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ತನ್ನ ಮೃತ ಪೋಷಕರು, ಸಹೋದರಿಯನ್ನು ಭೇಟಿಯಾದೆ. ಅಲ್ಲಿ ಅವರು ತುಂಬಾ ಚಿಕ್ಕವರಾಗಿ, ಆರೋಗ್ಯವಂತರಾಗಿ ಕಾಣುತ್ತಿದ್ದರು, ತನ್ನ ಹೊಟ್ಟೆಯಲ್ಲಿಯೇ ಸತ್ತಿದ್ದ ಮಗುವನ್ನು ಕೂಡ ಭೇಟಿಯಾದೆ, ಸುಂದರ ಅನುಭವದ ಜತೆ ನರಕದ ದರ್ಶನವೂ ಆಗಿತ್ತು.

ಕೊಳೆತ ವಾಸನೆ, ಕಿರುಚಾಟಗಳು ಕೇಳಿಬಂದಿತ್ತು, ಬಳಿಕ ಆಸ್ಪತ್ರೆಯ ಹಾಸಿಗೆ ಮೇಲೆ ಕಣ್ಣುತೆರೆದೆ ಎಂದು ಹೇಳಿಕೊಂಡಿದ್ದ ಷಾರ್ಲೆಟ್ ಈ ಘಟನೆ ನಡೆದು ನಾಲ್ಕು ವರ್ಷಗಳ ಬಳಿಕ 2023 ನವೆಮಬರ್ 28ರಂದು ನಿಧನರಾದರು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ