Viral: ಬಂಗೀ ಜಂಪಿಂಗ್‌ ವೇಳೆ ಹಗ್ಗ ತುಂಡಾಗಿ ನದಿ ನೀರಿಗೆ ಬಿದ್ದ ಯುವತಿ; ಭಯಾನಕ ದೃಶ್ಯ ವೈರಲ್‌

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಎದೆ ಝಲ್‌ ಎನಿಸುತ್ತದೆ. ಇದೀಗ ಅಂತಹದ್ದೇ ಎದೆ ಝಲ್‌ ಎನ್ನೋ ಭಯಾನಕ ದೃಶ್ಯವೊಂದು ವೈರಲ್‌ ಆಗಿದ್ದು, ಬಂಗೀ ಜಂಪಿಂಗ್‌ ವೇಳೆ ಹಗ್ಗ ತುಂಡಾಗಿ ಯುವತಿಯೊಬ್ಬಳು ಡೈರೆಕ್ಟ್‌ ಆಗಿ ಎತ್ತರದಿಂದ ನದಿ ನೀರಿಗೆ ಬಿದ್ದಿದ್ದಾಳೆ. ಈ ಭಯಾನಕ ದೃಶ್ಯ ಕಂಡು ನೋಡುಗರು ಬೆಚ್ಚಿಬಿದ್ದಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Oct 20, 2024 | 5:11 PM

ಕೆಲವೊಂದು ಸಾಹಸ ಕ್ರೀಡೆಗಳು ನಿಜಕ್ಕೂ ಭಯಾನಕವಾಗಿರುತ್ತದೆ. ಅಂತಹ ಸಾಹಸ ಕ್ರೀಡೆಗಳನ್ನು ಆಡಲು ಎರಡು ಗುಂಡಿಗೆ ಬೇಕು. ಇಂತಹ ಸಾಹಸ ಕ್ರೀಡೆಗಳ ಪಟ್ಟಿಯಲ್ಲಿ ಬಂಗೀ ಜಂಪಿಂಗ್‌ ಕೂಡಾ ಒಂದು. ಒಂದಲ್ಲಾ ಒಂದು ಸಾಹಸವನ್ನು ಮಾಡಲು ಇಷ್ಟ ಪಡುವವರು ಲೈಫ್‌ನಲ್ಲಿ ಒಂದು ಸಲ ಆದ್ರೂ ಬಂಗೀ ಜಂಪಿಂಗ್‌ ಟ್ರೈ ಮಾಡ್ಲೇ ಬೇಕು ಅಂತ ಅಂದುಕೋಳ್ಳುತ್ತಾರೆ. ಹೆಚ್ಚಿನವರು ಎತ್ತರದಿಂದ ಕೆಳಗೆ ಜಂಪ್‌ ಮಾಡುವ ಈ ಭಯಂಕರ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ಬಂಗೀ ಜಂಪಿಂಗ್‌ ಸಾಹಸ ಕ್ರೀಡೆಯನ್ನು ಟ್ರೈ ಮಾಡಿದ್ದು, ದುರಾದೃಷ್ವಶಾತ್‌ ಜಂಗೀ ಜಂಪಿಂಗ್‌ ವೇಳೆ ಇದ್ದಕ್ಕಿದ್ದಂತೆ ಹಗ್ಗ ಕಟ್‌ ಆಗಿ ಆಕೆ ಡೈರೆಕ್ಟ್‌ ಆಗಿ ನದಿ ನೀರಿಗೆ ಬಿದ್ದಿದ್ದಾಳೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈ ಎದೆ ಝಲ್‌ ಎನಿಸೋ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಬಂಗೀ ಜಂಪಿಂಗ್‌ ವೇಳೆ ಕೆಲವು ಅವಘಡಗಳು ಸಂಭವಿಸಿ ಪ್ರಾಣ ಕಳೆದುಕೊಂಡ ಕೆಲವರಿದ್ದಾರೆ. ಇದೇ ಭಯದಿಂದ ಹೆಚ್ಚಿನವರು ಈ ಸಾಹಸ ಕ್ರೀಡೆಗೆ ಕೈ ಹಾಕಲು ಹೋಗುವುದಿಲ್ಲ. ಆದ್ರೆ ಇಲ್ಲೊಬ್ಬಳು ಯುವತಿ ಭಂಡ ಧೈರ್ಯದಿಂದ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಜಂಗೀ ಜಂಪಿಂಗ್‌ ವೇಳೆ ಹಗ್ಗ ಕಟ್‌ ಆಗಿ ಆಕೆ ನದಿ ನೀರಿಗೆ ಬಿದ್ದಿದ್ದಾಳೆ.

datsjackedup ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಂಗೀ ಜಂಪಿಂಗ್‌ ಮಾಡುವ ದೃಶ್ಯವನ್ನು ಕಾಣಬಹುದು. ಹಗ್ಗದ ಸಮೇತ ಆಕೆ ಎತ್ತರದಿಂದ ಕೆಳಗೆ ಜಂಪ್‌ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹಗ್ಗ ಕಟ್‌ ಆಗಿದ್ದು, ಹಗ್ಗ ತುಂಡಾದ ಪರಿಣಾಮ ಆಕೆ ಡೈರೆಕ್ಟ್‌ ಆಗಿ ನದಿ ನೀರಿಗೆ ಬಿದ್ದಿದ್ದಾಳೆ.

ಮತ್ತಷ್ಟು ಓದಿ: Viral Video : ಅಬ್ಬಬ್ಬಾ! ಈ ಪೋರನ ಸ್ಟಂಟಿಂಗ್ ಟ್ಯಾಲೆಂಟ್ ನೋಡಿ, ವಿಡಿಯೋ ವೈರಲ್

ಅಕ್ಟೋಬರ್‌ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಓ ದೇವ್ರೇ ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಯೋಜಕರಿಗೆ ಹಗ್ಗ ಗಟ್ಟಿಯಾಗಿದೆಯೇ ಎಂದು ಮೊದಲೇ ಪರೀಕ್ಷಿಸಲು ಏನಾಗಿತ್ತುʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಯುವತಿ ಹುಷಾರಾಗಿ ಇದ್ದಾಳೆ ಅಲ್ವಾ?ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ