AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆ ರಜೆ ಮುಗಿಸಿ ಬರುವಾಗಲೇ ಮಹಿಳಾ ಉದ್ಯೋಗಿ ಮತ್ತೆ ಗರ್ಭಿಣಿ, ಕೆಲಸದಿಂದ ವಜಾ

ಹೆರಿಗೆ ರಜೆ ಮುಗಿಸಿ ಬಂದಿದ್ದ ಮಹಿಳಾ ಉದ್ಯೋಗಿ ಮತ್ತೆ ಗರ್ಭಿಣಿ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕಂಪನಿಯು ಆಕೆಯನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕೋರ್ಟ್​ ಮೆಟ್ಟಿಲೇರಿದ್ದು, ಇದೀಗ ಆಕೆಗೆ ಜಯ ಸಿಕ್ಕಿದ್ದು, 31 ಲಕ್ಷ ರೂ. ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸಲಾಗಿದೆ.

ಹೆರಿಗೆ ರಜೆ ಮುಗಿಸಿ ಬರುವಾಗಲೇ ಮಹಿಳಾ ಉದ್ಯೋಗಿ ಮತ್ತೆ ಗರ್ಭಿಣಿ, ಕೆಲಸದಿಂದ ವಜಾ
ಗರ್ಭಿಣಿImage Credit source: parents
ನಯನಾ ರಾಜೀವ್
|

Updated on: Oct 21, 2024 | 12:04 PM

Share

ಹೆರಿಗೆ ರಜೆ ಮುಗಿಸಿ ಬಂದಿದ್ದ ಮಹಿಳಾ ಉದ್ಯೋಗಿ ಮತ್ತೆ ಗರ್ಭಿಣಿ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕಂಪನಿಯು ಆಕೆಯನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕೋರ್ಟ್​ ಮೆಟ್ಟಿಲೇರಿದ್ದು, ಇದೀಗ ಆಕೆಗೆ ಜಯ ಸಿಕ್ಕಿದ್ದು, 31 ಲಕ್ಷ ರೂ. ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸಲಾಗಿದೆ.

ವರದಿಗಳ ಪ್ರಕಾರ ಪಾಂಟಿಪ್ರಿಡ್​ಲ್ಲಿರುವ ಫಸ್ಟ್​ ಗ್ರೇಡ್​ ಪ್ರಾಜೆಕ್ಟ್​ನಲ್ಲಿ ಕೆಸಲ ನಿರ್ವಹಿಸುತ್ತಿದ್ದ ಮಹಿಳೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆರಿಗೆ ರಜೆ ಮುಗಿಸಿಕೊಂಡು ಬಂದ ಬಳಿಕ ತಾನು ಮತ್ತೆ ಗರ್ಭಿಣಿಯಾಗಿರುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೆರೆಮಿ ಮೋರ್ಗಾನ್ ಅವರಿಗೆ ತಿಳಿಸಿದ್ದಳು, ಆಗ ಆಕೆಯ ಬಾಸ್ ಆಘಾತಕ್ಕೊಳಗಾಗಿದ್ದರು.

ಆರಂಭದಲ್ಲಿ ಕೆಲಸಕ್ಕೆ ಬಂದಾಗ ಒಳ್ಳೆಯ ಪ್ರತಿಕ್ರಿಯೆ ನೀಡಿದರೂ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅವರ ವರ್ತನೆ ಬದಲಾಗಿತ್ತು. ಮಾರ್ಚ್ 2022 ರಲ್ಲಿ ತನ್ನ ಹೆರಿಗೆ ರಜೆ ಕೊನೆಗೊಂಡಾಗ, ಕಂಪನಿಯು ಅವಳನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ನಿಕಿತಾ ಹೇಳಿದರು.

ಮೊದಲು ಆಕೆ ಹಿಂದಿರುಗಿರುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು ಮತ್ತು ಅವರ ಕೆಲಸದ ಸಮಯವನ್ನು ಚರ್ಚಿಸಿದರು. ಆದಾಗ್ಯೂ, ಟ್ವಿಚೆನ್ ತನ್ನ ಎರಡನೇ ಮಗುವಿಗೆ ಎಂಟು ವಾರಗಳ ಗರ್ಭಿಣಿಯಾಗಿದ್ದಾಳೆಂದು ಬಹಿರಂಗಪಡಿಸಿದಾಗ ಸಭೆಯು ಆಶ್ಚರ್ಯಕರ ತಿರುವು ಪಡೆದುಕೊಂಡಿತ್ತು.

ಮತ್ತಷ್ಟು ಓದಿ: Viral: ಬಂಗೀ ಜಂಪಿಂಗ್‌ ವೇಳೆ ಹಗ್ಗ ತುಂಡಾಗಿ ನದಿ ನೀರಿಗೆ ಬಿದ್ದ ಯುವತಿ; ಭಯಾನಕ ದೃಶ್ಯ ವೈರಲ್‌

ಉದ್ಯೋಗ ನ್ಯಾಯಮಂಡಳಿಯು ನಿಕಿತಾ ಟ್ವಿಚೆನ್ ಪರವಾಗಿ ತೀರ್ಪು ನೀಡಿತು. ಫೆಬ್ರವರಿ 2022 ರಲ್ಲಿ ಜೆರೆಮಿ ಮೋರ್ಗನ್ ಅವರು ತಮ್ಮ ಕಂಪನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದೇ ಹಣಕಾಸಿನ ಸಮಸ್ಯೆಗಳಿಲ್ಲ ಎಂದು ಹೇಳಿದ್ದರು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ