ಇದಪ್ಪಾ ಸಾಧನೆ ಅಂದ್ರೆ… MBBS ಸೀಟ್ ಪಡೆದು ಭವಿಷ್ಯದ ವೈದ್ಯರಾಗಲು ಹೊರಟ ನಾಲ್ವರು ಸಹೋದರಿಯರು
ಹೆಣ್ಣು ಮಕ್ಕಳು ಹುಟ್ಟಿದ್ರೆ ಅಯ್ಯೋ ಈ ಬಾರಿಯೂ ಹೆಣ್ಣು ಮಗುವೇ ಹುಟ್ಟಿತಾ ಎಂದು ಸಮಾಜ ನೂರಾರು ಕೊಂಕು ಮಾತುಗಳನ್ನಾಡುತ್ತದೆ. ಇದೀಗ ಅದೇ ಹೆಣ್ಣು ಮಕ್ಕಳು ತಮ್ಮ ತಂದೆ-ತಾಯಿ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ. ಹೌದು ನಾಲ್ವರು ಸಹೋದರಿಯರು ತಮ್ಮ ಕಠಿಣ ಪರಿಶ್ರಮದ ಮೂಲಕವೇ ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ಡಾಕ್ಟರ್ಸ್ ಆಗಲು ಹೊರಟಿದ್ದಾರೆ. ಈ ನಾಲ್ವರು ಸಹೋದರಿಯರ ಸಾಧನೆಯ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಡಾಕ್ಟರ್ ಆಗುವ ಕನಸು ಹಲವರಿಗಿರುತ್ತದೆ. ಡಾಕ್ಟರ್ ಆಗಲು ಎಂ.ಬಿ.ಬಿ.ಎಸ್ ಓದಲೇಬೇಕು. ಆದ್ರೆಈ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗುವುದು ಭಾರೀ ಕಷ್ಟದ ಮಾತು ಅಂತಾನೇ ಹೇಳಬಹುದು. ಅಂತದ್ರಲ್ಲಿ ಇಲ್ಲೊಂದು ಒಂದೇ ಕುಟುಂಬದ ನಾಲ್ವರು ಮಕ್ಕಳು ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯ ವೈದ್ಯರಾಗಲು ತಯಾರಾಗಿದ್ದಾರೆ. ಹೌದು ನಾಲ್ವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದುಕೊಳ್ಳುವ ಮೂಲಕ ತಮ್ಮ ತಂದೆ ತಾಯಿಗೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ. ಈ ನಾಲ್ವರು ಸಹೋದರಿಯರ ಸಾಧನೆಯ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ತೆಲಂಗಾಣದ ಸಿದ್ದಿಪೇಟೆಯ ನಾಲ್ವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದುಕೊಂಡು ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ. ತಮ್ಮ ನಾಲ್ವರು ಹೆಣ್ಣು ಮಕ್ಕಳ ಈ ಸಾಧನೆಗೆ ಪೋಷಕರಾದ ಕೊಂಕ್ ರಾಮಚಂದ್ರಂ ಮತ್ತು ಶಾರದ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಪತಿ-ಪತ್ನಿಯರಿಬ್ಬರು ಟೈಲರ್ ಕೆಲಸವನ್ನು ಮಾಡಿ ಕಷ್ಟಪಟ್ಟು ನಾಲ್ವರು ಮಕ್ಕಳನ್ನು ಓದಿಸಿದ್ದು, ಇದೀಗ ಈ ನಾಲ್ವರು ಹೆಣ್ಣು ಮಕ್ಕಳು ತಂದೆ ತಾಯಿ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಇದನ್ನೂ ಓದಿ: ಪುರುಷರಂತೆ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಿದ ಯುವತಿ
ಅವರ ಹಿರಿಯ ಮಗಳಾದ ಮಮತಾ 2018 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದು ಇತ್ತೀಚಿಗಷ್ಟೇ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ. ಇನ್ನೂ ಅವರ ಎರಡನೇ ಮಗಳು ಮಾಧವಿ 2020 ರಲ್ಲಿ ಎಂಬಿಬಿಎಸ್ ಸೀಟ್ ಪಡೆದು ಪ್ರಸ್ತುತ ಅಂತಿಮ ವರ್ಷದ ಎಂಬಿಬಿಎಸ್ ಪದವಿ ಶಿಕ್ಷಣವನ್ನು ಪಡೆದಯುತ್ತಿದ್ದಾಳೆ. ಇದೀಗ ಇವರ ಅವಳಿ ಮಕ್ಕಳಾದ ರೋಹಿಣಿ ಮತ್ತು ರೋಷಿಣಿ ಕೂಡಾ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆಯುವ ಮೂಲಕ ತಂದೆ-ತಾಯಿಗೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ನಮಗೆ ಇಷ್ಟು ಒಳ್ಳೆಯ ಶಿಕ್ಷಣವನ್ನು ನೀಡಿದ ನಮ್ಮ ತಂದೆ-ತಾಯಿಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ನಾಲ್ವರು ಪುತ್ರಿಯರು ಹೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ