ಶ್ರೀಮಂತ ಸಿಂಗಲ್​ ಹುಡುಗರೇ ಈಕೆಯ ಟಾರ್ಗೆಟ್!; ಏಳನೇ ಮದುವೆಯ ವೇಳೆ ಸಿಕ್ಕಿಬಿದ್ದ ಯುವತಿ

|

Updated on: Dec 26, 2024 | 12:09 PM

ಉತ್ತರ ಪ್ರದೇಶದಲ್ಲಿ ಒಂಟಿ ಪುರುಷರನ್ನು ಮದುವೆಯ ಹೆಸರಿನಲ್ಲಿ ವಂಚಿಸಿ, ಅವರ ಮನೆಗಳಿಂದ ನಗದು ಮತ್ತು ಚಿನ್ನಾಭರಣ ದೋಚುವ ದಂಧೆ ನಡೆಸುತ್ತಿದ್ದ ನಾಲ್ಕು ಜನರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಪೂನಂ ಎಂಬ ಯುವತಿ ಈ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆಕೆ ಈಗಾಗಲೇ ಆರು ಮದುವೆಗಳನ್ನು ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಗ್ಯಾಂಗ್ ಅನ್ನು ಬಂಧಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ.

ಶ್ರೀಮಂತ ಸಿಂಗಲ್​ ಹುಡುಗರೇ ಈಕೆಯ ಟಾರ್ಗೆಟ್!; ಏಳನೇ ಮದುವೆಯ ವೇಳೆ ಸಿಕ್ಕಿಬಿದ್ದ ಯುವತಿ
Uttar Pradesh Wedding Scam
Follow us on

ಉತ್ತರ ಪ್ರದೇಶ: ಮದುವೆಯ ಹೆಸರಿನಲ್ಲಿ ಒಂಟಿ ಪುರುಷರನ್ನು ವಂಚಿಸಿ ನಂತರ ಅವರ ಮನೆಗಳಿಂದ ನಗದು ಮತ್ತು ಚಿನ್ನಾಭರಣ ದೋಚುವ ದಂಧೆ ನಡೆಸುತ್ತಿದ್ದ ಗುಂಪೊಂದು ಉತ್ತರ ಪ್ರದೇಶದ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಒಂಟಿ ಪುರುಷರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ ಯುವತಿ ಪೂನಂ ಈಗಾಗಲೇ 6 ಮದುವೆಯಾಗಿದ್ದು, ಇದೀಗ ಏಳನೇ ಮದುವೆಯ ವೇಳೆ ಸಿಕ್ಕಿ ಬಿದ್ದಿದ್ದಾಳೆ. ಈ ಕಿಲಾಡಿ ಯುವತಿಯ ಹಿಂದೆ ದೊಡ್ಡ ಗ್ಯಾಂಗ್ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಬಂದಾ ಮೂಲದ ಪೂನಂ ವಧುವಾಗಿ, ಸಂಜನಾ ಗುಪ್ತಾ ತಾಯಿಯಾಗಿ, ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಅಳಿಯಂದಿರಾಗಿ ನಾಲ್ವರು ಸೇರಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಅವರಲ್ಲಿ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬವರು ಶ್ರೀಮಂತ ವ್ಯಕ್ತಿಗಳನ್ನು ಅಂದರೆ ಮದುವೆಯಾಗಲು ಹುಡುಗಿ ಹುಡುಕುತ್ತಿರುವ ಪುರುಷರನ್ನು ತಮ್ಮತ್ತ ಸೆಳೆಯುತ್ತಿದ್ದರು.

ಸುಂದರ ಹುಡುಗಿಯನ್ನು ತೋರಿಸುತ್ತೇವೆ ಎಂದು ಹೇಳಿ ತಮ್ಮ ಗ್ಯಾಂಗ್​ನಲ್ಲಿದ್ದ ಪೂನಂನನ್ನು ಪರಿಚಿಯಿಸುತ್ತಿದ್ದರು. ಶ್ರೀಮಂತ ಪುರುಷರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗುತ್ತಿದ್ದ ಪೂನಂ, ಆತನ ಮನೆಯಲ್ಲಿ ಹಣ, ಬಂಗಾರ ಬೆದರಿಕೆಯೊಡ್ಡಿ ಪರಾರಿಯಾಗುತ್ತಿದ್ದಳು. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಶಂಕರ್ ಉಪಾಧ್ಯಾಯ ಎಂಬುವವರ ಜೊತೆ ಪೂನಂ ಮದುವೆ ಸಿದ್ಧವಾಗಿತ್ತು. ಇದಲ್ಲದೇ 1.5 ಲಕ್ಷ ರೂ. ನೀಡುವಂತೆ ಶಂಕರ್​ಗೆ ಬೆದರಿಕೆ ನೀಡಲಾಗಿತ್ತು. ಅವರಿಂದ ತಪ್ಪಿಸಿಕೊಂಡ ಶಂಕರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಅಸಲಿ ಕಥೆ ಹೊರಬಿದ್ದಿದೆ.

ಇದನ್ನೂ ಓದಿ: ಸಲಿಂಗಕಾಮಿ ಜೋಡಿಗೆ 100 ವರ್ಷ ಜೈಲು ಶಿಕ್ಷೆ; ಅಪರಾಧದ ಬಗ್ಗೆ ತಿಳಿದರೆ ನಿಮ್ಮ ರಕ್ತ ಕುದಿಯುವುದಂತೂ ಖಂಡಿತಾ

ಇದೊಂದು ದಂಧೆ ಎಂಬುದು ಪತ್ತೆಯಾಗಿದ್ದು, ಪೂನಂ ಈಗಾಗಲೇ ಆರು ಮದುವೆಯಾಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ. ಇದರಿಂದ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯ ಹೆಸರಿನಲ್ಲಿ ಒಂಟಿ ಪುರುಷರನ್ನು ವಂಚಿಸಿ ನಂತರ ಅವರ ಮನೆಗಳಲ್ಲಿ ನಗದು ಮತ್ತು ಚಿನ್ನಾಭರಣ ದೋಚುವ ದಂಧೆ ನಡೆಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:07 pm, Thu, 26 December 24