ತಮಿಳುನಾಡು: ಮೇ 29, ಬುಧವಾರದಂದು ನೀಲಗಿರಿಯ ಕೋಲಪಲ್ಲಿ ಸಮೀಪದ ಕುರಿಚಿ ನಗರ ಪ್ರದೇಶದಲ್ಲಿ 30 ಅಡಿ ಬಾವಿಗೆ ಆನೆ ಮರಿಯೊಂದು ಬಿದ್ದಿದೆ. ಮುಂಜಾನೆ ಆನೆ ಮರಿಯ ಕೂಗು ಕೇಳಿಸುತ್ತಿದ್ದಂತೆ ಸ್ಥಳೀಯರು ಧಾವಿಸಿದ್ದು, 30 ಅಡಿ ಆಳದ ಬಾವಿಯಲ್ಲಿ ಆನೆ ಮರಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಆನೆಯ ರಕ್ಷಣೆಗಾಗಿ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಮರಿ ಆನೆಯನ್ನು ರಕ್ಷಿಸಲು ತಮಿಳುನಾಡು ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಮತ್ತು ಯಂತ್ರವನ್ನು ಸಜ್ಜುಗೊಳಿಸಿದ ಕೆಲವೇ ಗಂಟೆಗಳ ನಂತರ ರಕ್ಷಣಾ ಕಾರ್ಯಚರಣೆ ಪ್ರಾರಂಭವಾಗಿ ಸದ್ಯ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಬಾವಿಗೆ ಬಿದ್ದ ಆನೆ ಮರಿಯನ್ನು ಅರಣ್ಯಾಧಿಕಾರಿಗಳು ಜೆಸಿಬಿ ಹಾಗೀ ಇತರ ಯಂತ್ರಗಳ ಸಹಾಯದಿಂದ ರಕ್ಷಿಸಲು ಯತ್ನಿಸಿದ್ದಾರೆ. ಇದೀಗ ರಕ್ಷಣಾ ಕಾರ್ಯಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Wed, 29 May 24