Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರದಲ್ಲಿ ‘ದಿ ಎಲೆಫೆಂಟ್ ವಿಸ್ಪರರ್ಸ್’ ಹೋಲುವ ಸ್ಟೋರಿ, ಅನಾಥ ಆನೆ ಮರಿಗೆ ಪೋಷಕರಾದ ಕಾವಡಿ ದಂಪತಿ

ಮೂಕ ಪ್ರಾಣಿ ಹಾಗೂ ಮಾನವನ ಬಾಂಧವ್ಯಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಬಿಡಾರ ಸಾಕ್ಷಿಯಾಗಿದೆ. ಹೆತ್ತ ತಾಯಿಯಿಂದ ಬೇರೆಯಾದ ಮರಿ ಆನೆಗೆ ಕಾವಡಿ ಕುಟುಂಬವೊಂದು ತಂದೆ ತಾಯಿಯಂತೆ ಪೋಷಣೆ ಮಾಡುತ್ತಿದೆ.

ಬಂಡೀಪುರದಲ್ಲಿ 'ದಿ ಎಲೆಫೆಂಟ್ ವಿಸ್ಪರರ್ಸ್' ಹೋಲುವ ಸ್ಟೋರಿ, ಅನಾಥ ಆನೆ ಮರಿಗೆ ಪೋಷಕರಾದ ಕಾವಡಿ ದಂಪತಿ
ವೇದ ಜೊತೆ ಕಾವಡಿ ರಾಜು ದಂಪತಿ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಆಯೇಷಾ ಬಾನು

Updated on:Jul 19, 2023 | 12:06 PM

ಚಾಮರಾಜನಗರ: ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ ದಿ ಎಲೆಫೆಂಟ್ ವಿಸ್ಪರರ್ಸ್(The Elephant Whisperers) ಸಿನಿಮಾವನ್ನು ನೋಡಿ ಆನೆ ಹಾಗೂ ಮನುಷ್ಯರ ನಡುವಿನ ಬಾಂಧವ್ಯವನ್ನು ಅರಿತಿದ್ರಿ. ಈಗ ಇದೇ ಮಾದರಿಯ ಹಾಗೂ ಮದುಮಲೈನ ಬೆಳ್ಳಿ ಮತ್ತು ಬೊಮ್ಮನ್​ ದಂಪತಿ ಕಥೆಗಿಂತಲು ಬಲು ರೋಚಕ ಎನಿಸುವ ಕಥೆ ನಮ್ಮ ಮುಂದಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಶಿಬಿರದಲ್ಲಿ(Rampura Elephant Camp) ದಿ ಎಲೆಫೆಂಟ್ ವಿಸ್ಪರರ್ಸ್ ಸಿನಿಮಾವನ್ನು ಹೋಲುವ ಘಟನೆ ನಡೆದಿದೆ. ಅನಾಥ ಹೆಣ್ಣು ಮರಿ ಆನೆಗೆ ಪೋಷಣೆ ಮಾಡಿ ದಂಪತಿ ಗಮನ ಸೆಳೆದಿದ್ದಾರೆ.

ಮೂಕ ಪ್ರಾಣಿ ಹಾಗೂ ಮಾನವನ ಬಾಂಧವ್ಯಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಬಿಡಾರ ಸಾಕ್ಷಿಯಾಗಿದೆ. ಹೆತ್ತ ತಾಯಿಯಿಂದ ಬೇರೆಯಾದ ಮರಿ ಆನೆಗೆ ಕಾವಡಿ ಕುಟುಂಬವೊಂದು ತಂದೆ ತಾಯಿಯಂತೆ ಪೋಷಣೆ ಮಾಡುತ್ತಿದೆ. ಆನೆ ಮರಿ ಹುಟ್ಟಿದ ಏಳೇ ದಿನಕ್ಕೆ ತಾಯಿಯಿಂದ ಬೇರ್ಪಟ್ಟಿದ್ದು ಏಳು ದಿನದ ಮಗುವಿನಿಂದಲೇ ಈ ದಂಪತಿ ಆನೆ ಮರಿಯನ್ನು ಸಾಕುತ್ತಿದ್ದಾರೆ. ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆಗೆ ಕಾವಾಡಿ ರಾಜು ಪೋಷಕರಾಗಿದ್ದಾರೆ. ಹೆತ್ತ ಮಗುವಂತೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅನಾಥ ಹೆಣ್ಣು ಆನೆಗೆ ಈ ದಂಪತಿ ಆಸರೆಯಾಗಿದ್ದಾರೆ.

ಇದನ್ನೂ ಓದಿ: IPL 2023: ದಿ ಎಲಿಫೆಂಟ್​ ವಿಸ್ಪರರ್ಸ್​ ಖ್ಯಾತಿಯ ಬೊಮ್ಮನ್‌ ಮತ್ತು ಬೆಳ್ಳಿಗೆ ಜೆರ್ಸಿಯನ್ನು ಗಿಫ್ಟ್ ನೀಡಿದ ಧೋನಿ

ಕಾವಾಡಿ ರಾಜು ಮತ್ತು ರಮ್ಯಾ ಎಂಬ ದಂಪತಿ 7 ತಿಂಗಳ ಹೆಣ್ಣು ಆನೆ ವೇದಾಳನ್ನ ಸ್ವಂತ ಮಗುತರ ಸಾಕಿ ಸಲಹುತ್ತಿದ್ದಾರೆ. ಅನಾಥ ಆನೆ ವೇದ ಅರೆಕ್ಷಣವು ರಾಜು ಹಾಗೂ ಆತನ ಪತ್ನಿಯನ್ನ ಬಿಟ್ಟಿರದು. ಎಲ್ಲಿ ಹೋದರೂ ಜೊತೆಗೇ ಹೋಗುತ್ತೆ. ಸದಾ ಸೀರೆಗೆ ಗಂಟಾಕಿಕೊಂಡಂತೆ ಅವರೊಂದಿಗೆಯೇ ಬದುಕುತ್ತಿದೆ. ವೇದ ಹುಟ್ಟಿದ 7 ದಿನಕ್ಕೆ ತಾಯಿಯಿಂದ ದೂರವಾಗಿದೆ. ಆಗಿನಿಂದಲು ಮರಿ ಹೆಣ್ಣಾನೆ ಪಾಲಿಗೆ ಕಾವಾಡಿ ದಂಪತಿಯೇ ತಂದೆ ತಾಯಿ. ವೇದಾಳನ್ನ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡ್ತಿದ್ದಾರೆ. ಕಾವಾಡಿ ರಾಜುರನ್ನ ನೋಡದೆ ಹೋದ್ರೆ ಚಿಕ್ಕ ಮಕ್ಕಳಂತೆ ವೇದ ಗಲಾಟೆ ಮಾಡ್ತಾಳೆ. ಪ್ರತಿ ದಿನ 12 ಲೀಟರ್ ಹಾಲು ಕುಡಿಯುವ ವೇದ, ಕಾವಾಡಿ ದಂಪತಿಯ ಮುದ್ದು ಕೂಸಾಗಿದೆ. ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:06 am, Wed, 19 July 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್