ಕೆಲವೊಂದು ಪ್ರಾಣಿಗಳಿಗೆ ನೀರಿನಲ್ಲಿ ಈಜಲು ಬರುತ್ತದೆ. ಈ ಪೈಕಿ ಹುಲಿ ಕೂಡ ಒಂದು. ಹುಲಿಗಳು ನೀರಿನಲ್ಲಿ ಬೇಟೆಯಾಡುವುದು ತೀರಾ ಕಡಿಮೆ. ಹುಲಿಗಳು ಒಂಟಿ ಬೇಟೆಗಾರ ಮತ್ತು ಏಕಾಂಗಿಯಾಗಿ ಬೇಟೆಯಾಡಲು ಬಯಸುತ್ತದೆ. ಅದರಂತೆ ನದಿಯಲ್ಲಿ ಸಿಂಗಲ್ ಆಗಿ ಬೇಟೆಯಾಡಲು ಹೋದ ಹುಲಿ(Tiger)ಗೆ ಬಾತುಕೋಳಿ(Duck) ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದೆ.
ವಿಡಿಯೋದಲ್ಲಿ ಕಾಣುವಂತೆ, ನದಿ ನೀರಿನ ಬಣ್ಣ ತಿಳಿ ಕೇಸರಿಯಾಗಿದೆ. ಇದರಲ್ಲಿ ಬಾತುಕೋಳಿಯೊಂದು ಈಜಾಡುತ್ತಾ ಇರುತ್ತದೆ. ಈ ವೇಳೆ ಹುಲಿಯೊಂದು ಏಕಾಂಗಿಯಾಗಿ ಬಂದು ಬಾತುಕೋಳಿಯನ್ನು ಬೇಟೆಯಾಡಲು ಮುಂದಾಗುತ್ತದೆ. ನಿಧಾನಕ್ಕೆ ಬರುತ್ತಿದ್ದ ಹುಲಿ ಬಾತುಕೋಳಿ ಹತ್ತಿರವಾಗುತ್ತಿದ್ದಂತೆ ವೇಗವಾಗಿ ಮುನ್ನುಗ್ಗಲು ಯತ್ನಿಸಿತು. ಈ ವೇಳೆ ಬಾತುಕೋಳಿಗೆ ಇದ್ದಿದ್ದು ಒಂದೇ ದಾರಿ. ಅದು ನೀರಿನಲ್ಲಿ ಮುಳುಗುವುದು. ಬಾತುಕೋಳಿ ಹುಲಿಯ ಬಾಯಿಯಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಮುಳುಗಿದೆ. ಅದರಂತೆ ಹುಲಿಗೆ ಬಾತುಕೋಳಿ ಎಲ್ಲಿ ಹೋಯ್ತು ಎಂದು ತಿಳಿಯುವುದಿಲ್ಲ. ಆದರೆ ಬಾತುಕೋಳಿ ನೀರಿನಲ್ಲಿ ಮುಳುಗಿ ಹುಲಿಯ ಹಿಂದಿನಿಂದ ಮೇಲೆ ಬಂದು ಈಜಿಕೊಂಡು ಹೋಗಿದೆ.
Duck vs tiger.. ? pic.twitter.com/dVYLgI02aO
— Buitengebieden (@buitengebieden) June 7, 2022
ತನ್ನನ್ನು ಬೇಟೆಯಾಡಲು ಬಂದ ಹುಲಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿಯ ವಿಡಿಯೋವನ್ನು ‘Buitengebieden’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಾತುಕೋಳಿ ಶಾಂತವಾಗಿ ಈಜುವುದನ್ನು ಮತ್ತು ನಂತರ ನಿಧಾನವಾಗಿ ಸಮೀಪಿಸುತ್ತಿರುವ ಹುಲಿಯಿಂದ ಮರೆಮಾಡಲು ನೀರಿನ ಅಡಿಗೆ ಹೋಗುವುದನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಉಲ್ಲಾಸದಾಯಕವೆಂದು ಹೇಳಿಕೊಂಡಿದ್ದು, ವೈರಲ್ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ